ಆಪರೇಶನ್ ನಕ್ಷತ್ರ ಮುರುಳಿ ಗುಣಗಾನ

ಆಪರೇಷನ್ ನಕ್ಷತ್ರ.” ಹೆಸರು ಕೇಳಿದರೆ ಇದೊಂದು ಬಾಂಡ್ ಸಿನಿಮಾ ರೀತಿ ಇದೆ, ಬಾಂಡ್ ಸಿನಿಮಾ ಅಂದಾಕ್ಷಣ ಥಟ್ಟನೆ ನೆನಪಾಗುವುದು ಡಾ, ರಾಜ್‌ಕುಮಾರ್  ಚಿತ್ರಗಳು.

ಆಪರೇಷನ್ ನಕ್ಷತ್ರ ಬಾಂಡ್ ಮಾದರಿಯ ಚಿತ್ರವೇ ಅಥವಾ ಯಾವ ಮಾದರಿಯ ಸಿನಿಮಾ ಎನ್ನುವುದು ಸದ್ಯಕ್ಕಿರುವ ಕುತೂಹಲ. ಮಧುಸೂಧನ್ ಚೊಚ್ಚಲ ಬಾರಿಗೆ ನಿರ್ಮಾಣ ಮಾಡಿರುವ ಚಿತ್ರವಿದು. ಈಗಾಗಲೇ ಶೇ.೯೦ ರಷ್ಟು ಚಿತ್ರೀಕರಣ ಪೂರ್ಣಗೊಳಿಸಿದೆ.

ನಟ ಶ್ರೀ ಮುರುಳಿ ಶೀರ್ಷಿಕೆ ಅನಾವರಣ ಮಾಡಿ, ಆಪರೇಶನ್ ನಕ್ಷತ್ರ ಅಂದ ಕೂಡಲೇ ಡಾ. ರಾಜ್ ಕುಮಾರ ಮಾಮಾ ಅವರ ’ಆಪರೇಶನ್ ಡೈಮೆಂಡ್ ರಾಕೇm’ ಚಿತ್ರ ನೆನೆಪಿಗೆ ಬರುತ್ತದೆ. ಈ ಸಿನಿಮಾ ಕೂಡ ಅಷ್ಟೆ ದೊಡ್ಡ ಹೆಸರು ಗಳಿಸಲಿ ಎಂದು ಶುಭ ಹಾರೈಸಿದರು.

nakshtra1

ಫೈವ್‌ಸ್ಟಾರ್ ಸಂಸ್ಥೆಯಲ್ಲಿ ನಂದಕುಮಾರ.ಎನ್, ಅರವಿಂದ ಮೂರ್ತಿ ಟಿ.ಎಸ್, ರಾಧಕೃಷ್ಣ ಹಾಗೂ ಕೀಶೊರ್ ಮೇಗಳಮನೆ ನಿರ್ಮಿಸಿರುತ್ತಿರುವ ’ಆಪರೇಶನ್ ನಕ್ಷತ್ರ ಚಿತ್ರಕ್ಕೆ ಮಧುಸೂದನ್ ಚೊಚ್ಚಲ ನಿರ್ದೇಶನದವಿದೆ.ಚಿತ್ರಕ್ಕೆ ಮಧುಸೂದನ್ ಅವರೇ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಎರಡು ಹಾಡುಗಳ ಚಿತ್ರೀಕರಣ ಸದ್ಯದಲ್ಲೇ ನಡೆಯಲಿದೆ. ಹಣದ ಹಿಂದೆ ಹೋದವರ ಪರಿಸ್ಥಿತಿ ಏನೆಲ್ಲಾ  ಆಗುತ್ತದೆ ಎಂಬುದನ್ನು ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥಾನಕದೊಂದ್ದಿಗೆ ಹೇಳಲಾಗಿದೆ.

ಶಿವಸೀನ ಛಾಯಾಗ್ರಹಣ, ವೀರ್ ಸಮರ್ಥ್ ಸಂಗೀತ, ಕಿಟ್ಟು ಅರ್ಜುನ್ ಸಂಕಲನ, ವಿಜಯ್ ಭರಮಸಾಗರ ಸಾಹಿತ್ಯ, ಕೀಶೊರ್ ಮೇಗಳಮನೆ, ಮಧುಸೂದನ್ ಸಂಭಾಷಣೆ, ಶರಣ್ ಗೆಣ್ಕಳ್ ಸಹ ನಿರ್ದೇಶನ ಅಲ್ಟಿಮೇಟ್ ಶಿವು ಸಾಹಸವಿದೆ. ನಿರಂಜನ್ ಒಡೆಯರ್, ಯಜ್ಞಾ ಶೆಟ್ಟಿ, ಅದಿತಿ ಪ್ರಭುದೇವ, ಲಿಖಿತ್ ಸೂರ್ಯ, ದೀಪಕ್ ರಾಜ್ ಶೆಟ್ಟಿ, ಶ್ರೀನವಾಸ್ ಪ್ರಭು, ಗೋವಿಂದೇಗೌಡ, ವಿಜಯಲಕ್ಷ್ಮಿ, ಅರವಿಂದೇಗೌಡ, ಶ್ರೀಜಾ, ಅರವಿಂದ್ ಮೂರ್ತಿ ಟಿ.ಎಸ್.,ಇನ್ನೂ ಮುಂತಾದವರ ತಾರಾಬಳಗವಿದೆ.ಒಳ್ಳೆಯ ಚಿತ್ರ ನೀಡಲು ಇಡೀ ತಂಡ ಶ್ರಮಿಸುತ್ತಿದೆ.

‘ಗಿಣಿ ಹೇಳಿದ ಕಥೆ’   ಯು/ಎ

ವಿ.ದೇವರಾಜು ನಿರ್ಮಿಸಿರುವ ‘ಗಿಣಿ ಹೇಳಿದ ಕಥೆ’ ಚಿತ್ರಕ್ಕೆ  ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೆಟ್ ನೀಡಿದೆ. ಚಿತ್ರಕ್ಕೆ ನಿರ್ದೇಶನ ಹಾಗೂ ಛಾಯಾಗ್ರಹಣ -ನಾಗರಾಜು ಉಪ್ಪುಂದ.  ಸಂಗೀತ- ಹಿತನ್ ಹಾಸನ್, ಕಥೆ-ಚಿತ್ರಕಥೆ-ಸಂಭಾಷಣೆ -ದೇವ್, ಸಾಹಸವಿದೆ.

ಚಿತ್ರದಲ್ಲಿ ಬಹುಪಾಲು ರಂಗಭೂಮಿ ಕಲಾವಿದರುಗಳು ಅಭಿನಯಿಸಿದ್ದಾರೆ.  ದೇವ್, ಗೀತಾಂಜಲಿ, ಮಾಲತೇಶ್, ನೀತುರಾಯ್, ಹಾವೇರಿ ಶ್ರೀಧರ್, ಮಹಂತೇಶ್, ಮುಂತಾದವರಿದ್ದಾರೆ.  ಟ್ಯಾಕ್ಸಿ ಡ್ರೈವರೊಬ್ಬನ ಪ್ರಯಾಣದಲ್ಲಿ ನಡೆಯುವ ಕಥಾವಸ್ತುವುಳ್ಳ ಈ ಚಿತ್ರದಲ್ಲಿ ೫ ಹಾಡುಗಳಿದ್ದು, ಬೆಂಗಳೂರು-ಮೈಸೂರು-ಮಡಿಕೇರಿ-ದಕ್ಷಿಣ ಕನ್ನಡ ಸುತ್ತಮುತ್ತ ನಡೆದಿದೆ.

Leave a Comment