ಆನ್‌ಲೈನ್ ವಂಚಕನ ಬಂಧನ

ತುಮಕೂರು, ಜ. ೨೩- ವಿದೇಶಿ ವಿನಿಯ ಮಾಡಿ ಹೆಚ್ಚಿನ ಲಾಭ ಗಳಿಸಬಹುದು ಎಂದು ನಂಬಿಸಿದ್ದ ಆನ್‌ಲೈನ್ ವಂಚಕನನ್ನು ಇಲ್ಲಿನ ಸಿಎಎನ್ ಕ್ರೈಂ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.
ಗುಲ್ಬರ್ಗಾ ಜಿಲ್ಲೆಯ ಅಫ್ಜಲ್‌ಪುರ ತಾಲ್ಲೂಕಿನ ಸೋಮನಾಥ ಚನ್ನಬಸಪ್ಪ ಶೆಟ್ಟಿ ಎಂಬಾತನೇ ಬಂಧಿತ ಆರೋಪಿ. ಈತ ಫೇಸ್‌ಬುಕ್‌ನಲ್ಲಿ ವಿದೇಶಿ ವಿನಿಮಯ ಮಾಜಿ ಹೆಚ್ಚಿನ ಲಾಭಾಂಶ ಗಳಿಸಬಹುದು ಎಂಬ ಜಾಹೀರಾತು ಪ್ರಕಟಿಸಿದ್ದ. ಇದನ್ನು ನಂಬಿ ತುಮಕೂರಿನ ಮಹಾಲಕ್ಷ್ಮಿನಗರದ ನಿವೃತ್ತ ಕೆಎಂಎಫ್ ಅಧಿಕಾರಿ ಮಂಜುನಾಥಅ ಎಂಬುವರು ಬೆಂಗಳೂರು ಸದಾಶಿವನಗಪ ಶಾಖೆ ಇಂಡಿಯನ್ ಬ್ಯಾಂಕ್‌ನಲ್ಲಿ ಕಾಂತರಾಜು ಮತ್ತು ಶಂಕರಪ್ಪ ಎಂಬುವರ ಜಂಟಿ ಖಾತೆಗೆ 10 ಲಕ್ಷ ಹಣ ಕಳುಹಿಸಿದ್ದರು.
ನಂತರ ಒಂದು ಬಾರಿ ಲಾಭಾಂಶವೆಂದು 42 ಸಾವಿರ ರೂ. ನೀಡಿ, ಉಳಿದ ಹಣ ನೀಡದೇ ವಂಚಿಸಿದ್ದರು.
ಈ ಸಂಬಂಧ ಮಂಜುನಾಥ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ದೂರಿನ ಮೇರೆಗೆ ತನಿಖೆ ಕೈಗೊಂಡ ಸಿಎಎನ್ ಕ್ರೈಂ ಪೊಲೀಸರು ಸದರಿ ಆರೋಪಿಯನ್ನು ಬಂಧಿಸಿದ್ದು, ಖಾತೆದಾರರಾದ ಚನ್ನಬಸಪ್ಪ ಮತ್ತು ಶಂಕರಪ್ಪ ಎಂಬುವರು ತಲೆಮರೆಸಿಕೊಂಡಿದ್ದಾರೆ. ಈ ಇಬ್ಬರ ಪತ್ತೆಗೂ ಪೊಲೀಸರು ಬಲೆ ಬೀಸಿದ್ದಾರೆ.

Leave a Comment