ಆನ್‌ಲೈನ್ ಮೂಲಕ ಮದ್ಯ ಸರಬರಾಜು ನೀತಿಗೆ ವಿರೋಧ

ಭೂಪಾಲ್, ಫೆ. ೨೩- ಮದ್ಯವನ್ನು ಆನ್‌ಲೈನ್ ಮೂಲಕ ಸರಬರಾಜು ಮಾಡುವ ಮೂಲಕ ಮಧ್ಯ ಪ್ರದೇಶ ರಾಜ್ಯವನ್ನು ಇಟಲಿಯನ್ನಾಗಿ ಮಾರ್ಪಡಿಸಲು ಕಾಂಗ್ರೆಸ್ ಇಚ್ಚಿಸಿದೆ ಎಂದು ಬಿಜೆಪಿ ಶಾಸಕ ಕಾಂಗ್ರೆಸ್ ಮಧ್ಯಪ್ರದೇಶ ಸರ್ಕಾರದ ಹೊಸ ಅಬಕಾರಿ ನೀತಿಯನ್ನು ಟೀಕಿಸಿದ್ದಾರೆ.
ಮುಖ್ಯಮಂತ್ರಿ ಕಮಲನಾಥ್ ಸರ್ಕಾರ ೨೦೨೦- ೨೧ನೇ ಸಾಲಿಗೆ ಹೊಸ ಅಬಕಾರಿ ನೀತಿಯನ್ನು ಪ್ರಕಟಿಸಿದೆ. ಅದರಂತೆ ದೇಶೀಯ ಮತ್ತು ಮದ್ಯವನ್ನು ಆನ್‌ಲೈನ್ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ಸರಬರಾಜು ಮಾಡಲಾಗುತ್ತದೆ.
ಮದ್ಯವನ್ನು ಮನೆಬಾಗಿಲಿಗೆ ಸರಬರಾಜು ಮಾಡುವುದರ ಜೊತೆಗೆ ಹೊಸದಾಗಿ ೨೫೪೪ ದೇಶೀ ಮದ್ಯ ಅಂಗಡಿಗಳು ಮತ್ತು ೧,೦೬೧ ವಿದೇಶಿ ಮದ್ಯಂಗಡಿಗಳು ಹೊಸದಾಗಿ ತಲೆ ಎತ್ತುತ್ತಿವೆ. ಮಧ್ಯ ಪ್ರದೇಶ ಸರ್ಕಾರ ಅಬಕಾರಿ ವಲಯದಿಂದ ಹೆಚ್ಚು ಆರ್ಥಿಕ ಮೂಲವನ್ನು ಪಡೆಯುವ ಉದ್ದೇಶದಿಂದ ಇದಕ್ಕೆ ಈ ಕ್ರಮಕ್ಕೆ ಕೈಹಾಕುವ ಮೂಲಕ ಮಧ್ಯಪ್ರದೇಶವನ್ನು ಇಟಲಿ ದೇಶವನ್ನಾಗಿ ಮಾರ್ಪಡಿಸಲು ಹೊರಟಿದ್ದಾರೆ ಎಂದು ಇಂಧೋರ್ ಬಿಜೆಪಿ ಶಾಸಕ ರಮೇಶ್ ಮೆಂಡೋಲಾ ಆರೋಪಿಸಿದ್ದಾರೆ.
‘ಕಾಂಗ್ರೆಸ್ ಸರ್ಕಾರ ಮದ್ಯವನ್ನು ಆನ್‌ಲೈನ್ ಮೂಲಕ ಮಾರಾಟ ಮಾಡಲು ಹೊರಟಿದ್ದಾರೆ. ಇದು ಕೆಲವು ಇಟಲಿಯನ್ನು ಮೂಲದವರ ಮರ್ಜಿಯನ್ನು ಅನುಸರಿಸಿದಂತಿದೆ. ಹೀಗೆ ಮಾಡುವ ಮೂಲಕ ಮಧ್ಯಪ್ರದೇಶ ರಾಜ್ಯವನ್ನು ಇಟಲಿಯನ್ನಾಗಿ ಮಾಡಲಾಗುತ್ತಿದೆ.‘ ಎಂದಿರುವ ರಮೇಶ್ ಮೆಂಡೋಲಾ‘ಮುಖ್ಯಮಂತ್ರಿ ಕಮಲ್‌ನಾಥ್ ಅವರೇ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಅವರೇ ಮಧ್ಯ ಪ್ರದೇಶಕ್ಕೆ ಈ ರೀತಿಯ ಬದಲಾವಣೆ ಅಗತ್ಯವಿದೆಯಾ‘ ಎಂದು ಶಾಸಕ ರಮೇಶ್ ಮೆಂಡೋಲಾ ಪ್ರಶ್ನಿಸಿದ್ದಾರೆ.

Leave a Comment