ಆನ್‌ಲೈನ್ ಗೇಮ್ ಶಂಕೆ: ಬಾಲಕಿ ಆತ್ಮಹತ್ಯೆ

ನಾಗಪುರ, ಡಿ. ೭: ಮಹಾರಾಷ್ಟ್ರದ ನಾಗಪುರದಲ್ಲಿ ಓರ್ವ ಹದಿಯರೆಯದ ಬಾಲಕಿ ಇತ್ತೀಚೆಗೆ ಮಾಡಿಕೊಂಡಿರುವ ಆತ್ಮಹತ್ಯೆ ಪ್ರಕರಣವು ಅಂತರ್ಜಾಲ ಆಟದ (ಆನ್‌ಲೈನ್ ಗೇಮ್) ವ್ಯಸನದ ದುಷ್ಪರಿಣಾಮದಿಂದ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಆ ನಿಟ್ಟಿನಲ್ಲಿ ತನಿಖೆ ಕೈಗೊಂಡಿದ್ದಾರೆ.

ನಾಗಪುರದ ಬೆಲ್ತರೋಡಿ ಪ್ರದೇಶದಲ್ಲಿನ ತನ್ನ ಮನೆಯಲ್ಲಿ ೧೭ ವರ್ಷದ ಈ ಬಾಲಕಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದು, ಆಕೆಯ ಮುಂಗೈ ಮೇಲೆ “ಹೊರ ಹೋಗಲು ಇಲ್ಲಿ ತುಂಡರಿಸು” (ಕಟ್ ಹಿಯರ್ ಟು ಎಕ್ಸಿಟ್) ಎಂದು ಬೆರೆದುಕೊಂಡಿರುವುದು ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಬೆಲ್ತರೋಡಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವಿಜಯ್ ತಲ್ವಾರೆ ಹೇಳಿಕೆ ನೀಡಿದ್ದು, ಮೃತ ಬಾಲಕಿಯ ಪೋಷಕರು ನೀಡಿರುವ ಹೇಳಿಕೆ ಪ್ರಕಾರ ಬಾಲಕಿಯ ಅಧ್ಯಯನಕ್ಕೆಂದು ಪ್ರತ್ಯೇಕ ಕೊಠಡಿ ಇತ್ತು. ಅಲ್ಲಿ ಆಕೆ ಆನ್‌ಲೈನ್ ಗೇಮ್‌ಗಳನ್ನು ಆಡುತ್ತಾ ಕಾಲ ಕಳೆಯುತ್ತಿದ್ದಳು; ಹೀಗಾಗಿ ಆಕೆ ಯಾವ ಆಟ ಆಡುತ್ತಿದ್ದಾಳೆ; ಅದೇನಾದರೂ ಅಪಾಯಕಾರಿ ಆಟವಾಗಿರಬಹುದೇ ಎಂದು ಪತ್ತೆಹಚ್ಚಲು ನಾವು ಬಾಲಕಿ ಬಳಸುತ್ತಿದ್ದ ಮೊಬೈಲನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಪರಿಶೀಲನೆಗೆಂದು ಕಳುಹಿಸಿದ್ದೇವೆ ಎಂದು ಹೇಳಿದ್ದಾರೆ.

Leave a Comment