ಆನೆ ಕಾಲು ರೋಗ : ಮಕ್ಕಳಿಗೆ ಮಾತ್ರೆ ವಿತರಣೆ

ರಾಯಚೂರು.ನ.07- ದೇವದುರ್ಗ ತಾಲೂಕಿನ ಕೊಪ್ಪರ ಗ್ರಾಮದ ಆರೂಢ ಭಾರತಿ ಪೂರ್ವ ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 16 ನೇ ಸುತ್ತಿನ ಎಂ‌ಡಿಎ ಕಾರ್ಯಕ್ರಮ ನಿನ್ನೆ ನಡೆಯಿತು.
ಕೊಪ್ಪರ ಗ್ರಾಮದ ಆರೋಗ್ಯ ಪ್ರಾಥಮಿಕ ಆರೋಗ್ಯಾಧಿಕಾರಿ ಸೌಭಾಗ್ಯಮ್ಮ ಅವರು ಆನೆ ಕಾಲು ರೋಗದ ಮುಂಜಾಗೃತ ಕ್ರಮವಾಗಿ ಶಾಲಾ ಮಕ್ಕಳಿಗೆ ಮಾತ್ರೆಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಸುಭಾಷ್ ಬಿರಾದರ್, ಶಿಕ್ಷಕರಾದ ಪ್ರಿಯಾಂಕ ಆಬಕಾರಿ, ಭರತಿ, ಸುನೀತಾ, ದೇವಮ್ಮ ಸೇರಿದಂತೆ ಶಾಲಾ ಮಕ್ಕಳು ಉಪಸ್ಥಿತರಿದ್ದರು.

Leave a Comment