ಆನೆಗಳ ಹಿಂಡು ದಾಳಿ ಬೆಳೆ ಹಾನಿ

ಮುಂಡಗೋಡ,ಜ14-ತಾಲೂಕಿನ ಪಾಳಾ ಮತ್ತು ಶಿಂಗನಳ್ಳಿ ಗ್ರಾಮಗಳಲ್ಲಿತೋಟ ಮತ್ತು ಗದ್ದೆಗಳಿಗೆ ಕಾಡಾನೆಗಳ ಹಿಂಡು ದಾಳಿ ನಡೆಸಿ ಹಾನಿ ಉಂಟು ಮಾಡಿದ ಘಟನೆಜರುಗಿದೆ.
ಶಿಂಗನಳ್ಳಿ ಗ್ರಾಮದಲ್ಲಿ ಬಾಳೆ, ಅಡಕೆ ಮತ್ತುಹುಲ್ಲಿನ ಬಣವೆ ನಾಶ ಮಾಡಿವೆ.ಪಾಳಾ ಗ್ರಾಮದ ಎರಡು ಎಕರೆತೋಟದಲ್ಲಿ ಕಾಡಾನೆಗಳು ನುಗ್ಗಿ ಬಾಳೆ ಮತ್ತುಅಡಕೆತಿಂದು, ತುಳಿದು ಹಾನಿ ಮಾಡಿ ಗೋವಿನ ಜೋಳದ ಬೆಳೆ ನಾಶ ಮಾಡಿವೆ.
ಅರಣ್ಯದಅಂಚಿನಲ್ಲಿ ಆನೆಗಳು ಕಾಣಿಸಿಕೊಂಡು ಆ ಭಾಗದರೈತರಲ್ಲಿಆತಂಕ ಮೂಡಿಸಿವೆ. ಹುಡೇಲಕೊಪ್ಪ ಸಮೀಪದ ಅರಣ್ಯ ಪ್ರದೇಶದಲ್ಲಿಎರಡುದೊಡ್ಡ ಆನೆ ಮತ್ತುಎರಡು ಮರಿಯಾನೆ ಬೀಡು ಬಿಟ್ಟದ್ದು ಆನೆಗಳನ್ನು ಓಡಿಸಲು ಅರಣ್ಯಇಲಾಖೆಯವರು ಸಿಡಿ ಮದ್ದುಗಳನ್ನು ಉಪಯೋಗಿಸುತ್ತಿದ್ದಾರೆ.

Leave a Comment