ಆಧ್ಯಾತ್ಮೀಕತೆ ಒಡಮೂಡಿದರೆ ಸಮಾಜದ ಉದ್ಧಾರ ಸಾಧ್ಯ…!

ಧಾರವಾಡ ಫೆ.24- ಯಾವುದೇ ಕುಟುಂಬದಲ್ಲಿ ಒಗ್ಗಟ್ಟು, ಅನ್ಯೋನ್ಯತೆ ಮತ್ತು ಆಧ್ಯಾತ್ಮಿಕತೆ ಒಡಮೂಡಿದರೆ, ಆ ಕುಟುಂಬದ      ಏಳಿಗೆಯಾಗುತ್ತದೆ. ಅದರಿಂದ  ಸಮಾಜವೂ ಬೆಳೆಯುತ್ತದೆ ಎಂದು ಧಾರವಾಡ ಜಿಲ್ಲೆಯ ಸತ್ರ  ನ್ಯಾಯಾಧೀಶರಾದ   ಈಶಪ್ಪ ಕೆ ಭೂತೆ ಅವರು ನುಡಿದರು.
ಅವರು ಇಂದು ರಾಮಕೃಷ್ಣ ವೀವೆಕಾನಂದ ಆಶ್ರಮ , ಧಾರವಾಡ ಮಂದಿರದ 15ನೇ ವಾರ್ಷಿಕೋತ್ಸವದ ನಿಮಿತ್ಯ ಎರಡನೇಯ ದಿನದಲ್ಲಿ ಸ್ಥಳಿಯ ಪಾಟೀಲ ಪುಟ್ಟಪ್ಪ ಸಭಾ ಭವನದಲ್ಲಿ ಜರುಗಿದ ಭಕ್ತ ಸಮ್ಮೇಳನ ಹಾಗೂ ಜೀವಂತ ದುರ್ಗಾ ಪೂಜೆಯ ಉದ್ಘಾಟನೆ ನೆರೆವೆರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿವಿಧ ಗ್ರಾಮದಿಂದ ಆಗಮಿಸಿದ 260 ಮಾತೆಯರಲ್ಲಿ ಜೀವಂತ ದುರ್ಗೆಯರನ್ನು ಕಂಡು ಪೂಜೆ ನೆರೆವೆರಿಸಿ ಸದರೀಯವರೆಗೆ ವಸ್ತ್ರ ಹಾಗೂ ಕಾಣಿಕೆಗಳನ್ನು ನೀಡಿ ಸನ್ಮಾನಿಸಲಾಯಿತು.
ದಾವಣಗೆರೆಯ ಶ್ರೀ ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗಳಾದ ಶ್ರೀ ಸ್ವಾಮಿ ನಿತ್ಯಸ್ಥಾನಂದಜಿ ಮಹಾರಾಜ ಸಾನಿಧ್ಯ ವಹಿಸಿ ಪ್ರಾರ್ಥನೆಯ ಮಹತ್ವ ಹಾಗೂ ಧರ್ಮದ ಅನುಷ್ಠಾನದ ಕುರಿತು ಸವಿಸ್ತಾರವಾಗಿ ಉಲ್ಲೇಖಿಸಿ ಆರ್ಶೀವಚನ ಮಾಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಸ್ಥಳೀಯ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿಗಳಾದ ಶ್ರೀ ಉಲ್ಲಾಸ ಮೇಸ್ತಾ ಅವರು ಸಮಾಜದಲ್ಲಿ ತಾಯಿಯ ಸ್ಥಾನ ಅತ್ಯುನ್ನತವಾಗಿದ್ದು ಅದರನ್ವಯ ಧಾರವಾಡ ರಾಮಕೃಷ್ಣ ಆಶ್ರಮದ ವತಿಯಿಂದ ಮಾತೆಯರನ್ನು ಗೌರವಿಸಿದ್ದು ಶ್ಲಾಘನೀಯ ಎಂದು ಅಭಿಪ್ರಾಯ ಪಟ್ಟರು.
ಸ್ಥಳಿಯ ಆಶ್ರಮದ ಅಧ್ಯಕ್ಷರಾದ ಪೂಜ್ಯ ವಿಜಯಾನಂದ ಸರಸ್ವತಿ ಸ್ವಾಮೀಜಿಯವರು ಯಾಂತ್ರಿಕವಾಗಿ ಹಾಗೂ ಬೇರೊಬ್ಬರ ಒತ್ತಾಸೆಯೊಂದಿಗೆ ಪ್ರಾರ್ಥನೆ ಮಾಡದೆ ಸ್ವಯಂ ಸ್ಪೂರ್ತಿಯಾಗಿ ಶ್ರದ್ಧೆಯಿಂದ ಹಾಗೂ ಭಕ್ತಿಯಿಂದ ಪ್ರಾರ್ಥನೆ ಮಾಡಿದ್ದಲ್ಲಿ ಭಗವಂತನ ಸಾಕ್ಷಾತ್ಕಾರ ಆಗುವುದರಲ್ಲಿ ಸಂದೇಹವಿಲ್ಲವೆಂದು ಕಿವಿಮಾತು ಹೇಳಿದರು.
ಸಮಾರಂಭವು ಹೇಮಾ ವಾಘಮೋಡೆ ಶಿಷ್ಯವೃಂದ, ಹುಬ್ಬಳ್ಳಿ ಇವರಿಂದ ವಿರಚಿತ “ಭೂತ ಬೆನ್ನಟ್ಟಿದೆ ಎಚ್ಚರ ಎಚ್ಚರ” ಎಂಬ ರೂಪಕದೊಂದಿಗೆ ಮುಕ್ತಾಯಗೊಂಡಿತು.

Leave a Comment