ಆಧಾರ್ ಸೇವೆ ಅಲಭ್ಯ ಸಾರ್ವಜನಿಕರ ಪರದಾಟ

ಹನೂರು: ಜು.18- ದೇಶವಾಸಿಗಳ ಪಾಲಿಗೆ ಮೂಲಧಾರವಾಗಿರುವುದು ಆಧಾರ್ ಕಾರ್ಡ್. ಆಧಾರ್ ಕಾರ್ಡ್ ಇಂದು ವ್ಯಕ್ತಿಯ ಜೀವನದ ಅವಿಭಾಜ್ಯ ಅಂಗವಾಗಿ ಪರಿಗಣಿತವಾಗಿದೆ ಎಂದರೆ ತಪ್ಪಾಗಲಾರದು. ಸರ್ಕಾರಿ ಅನುಕೂಲಗಳಿಗೆ ಇರಬಹುದು ಅಥಾವ ಖಾಸಗಿ ಅನುಕೂಲಗಳಿಗೆ ಮೊದಲು ಲಗ್ಗತ್ತಿಸರಬೇಕಾದದು ಆಧಾರ್ ಕಾರ್ಡ್. ಆಧಾರ್ ಕಾರ್ಡ್ ಇಲ್ಲದೇ ಹೋದರೆ ಅನೇಕ ಸೌಲಭ್ಯಗಳು ದೊರಕುವುದು ಕನಸಿನ ಮಾತು. ಶಾಲೆಗೆ ಮಕ್ಕಳನ್ನು ಸೇರಿಸಲು, ಸ್ಕಾಲರ್‍ಶಿಫ್ ಪಡೆಯಲು, ಉದ್ಯೋಗಕ್ಕೆ ಸೇರಬಯಸಲು, ವಿವಿಧ ಪಿಂಚಣಿ ಸೌಲಭ್ಯ ಪಡೆಯಲು, ವಸತಿ ಹಾಗೂ ಪಡಿತರ ಚೀಟಿ ಸೌಲಭ್ಯ ಪಡೆಯಲು, ಬ್ಯಾಂಕ್ ವ್ಯವಹಾರ ಸೇರಿದಂತೆ ಒಟ್ಟಾರೆಸರ್ಕಾರಿ ಹಾಗೂ ಸರ್ಕಾರೇತರ ಸೌಲಭ್ಯಗಳನ್ನು ಪಡೆಯಲು ಹಾಗೂ ದಾಖಲಾತಿಗಳಿಗೆ ಆಧಾರ್ ಮೂಲಾಧಾರವಾಗಿರುವುದರಲ್ಲಿ ಎರಡು ಮಾತಿಲ್ಲ.
ಇಂತಹ ಹತ್ತು ಹಲವು ಅನುಕೂಲಗಳಿಗೆ ಬೇಕಾಗಿರುವ ಆಧಾರ್ ಕಾರ್ಡ್ ತಿದ್ದುಪಡಿ ಹಾಗೂ ನೂತನ ಆಧಾರ್ ಕಾರ್ಡ್ ಮಾಡಿಕೊಡುವ ವ್ಯವಸ್ಥೆ ಇಲ್ಲದೇ ಸಾರ್ವಜನಿಕರು ಪರದಾಡುವಂತ ಸ್ಥಿತಿ ಹನೂರು ಭಾಗದ ಸುತ್ತ ಮುತ್ತ ಗ್ರಾಮಗಳಲ್ಲಿ ಕಂಡು ಬಂದಿದೆ. ಒಂದೇ ಸೂರಿನಡಿ ಹಲವು ಸರ್ಕಾರಿ ಸೇವೆಗಳು ಲಭ್ಯ ಎಂದು ಉದ್ದುದ್ದ ಬೋರ್ಡ್ ನೇತು ಹಾಕಿರುವ ಹನೂರು ನಾಢ ಕಛೇರಿಯಲ್ಲಿ ಆಧಾರ್ ಸೇವೆ ಕಳೆದ 8 ತಿಂಗಳಿಂದ ಸ್ಥಗಿತಗೊಂಡಿದ್ದು, ಈ ಭಾಗದ ಜನತೆ ಅನೇಕ ಸೌಲಭ್ಯಗಳಿಂದ ವಂಚಿತರಾಗಿರುವುದಲ್ಲದೇ ಶಾಲೆಯ ವಿದ್ಯಾರ್ಥಿಗಳು ಸ್ಕಾಲರ್ ಶೀಫ್ ಪಡೆಯಲು ಸಾಧ್ಯವಾಗದ ಪರಿಸ್ಥಿತಿ ಕೂಡ ನಿರ್ಮಾಣವಾಗಿದೆ. ಒಂದನೇ ತರಗತಿಗೆ ಸೇರುವ ಮಕ್ಕಳು ಸ್ಕಾಲರ್ ಶೀಫ್ ಪಡೆಯಲು ಬ್ಯಾಂಕ್ ಖಾತೆ ತೆರೆದಿರಬೇಕು. ಆದರೆ ಒಂದನೇ ತರಗತಿಗೆ ಸೇರ್ಪಡೆಯಾಗಿರುವ ಬಹುತೇಕ ಮಕ್ಕಳು ಆಧಾರ್ ಕಾರ್ಡ್ ಹೊಂದಿಲ್ಲ. ಹೊಂದಿದ್ದರು ಅದು 5 ವರ್ಷಗಳ ಅವಧಿಗೆ ಸೀಮಿತವಾಗದ್ದು, ನೂತನ ಆಧಾರ್ ಕಾರ್ಡ್ ಮಾಡಿಸುವ ವ್ಯವಸ್ಥೆ ಇಲ್ಲದೆ ಇರುವುದು ಈ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳ ಪೋಷಕರನ್ನು ಕಂಗಾಲಾಗುವಂತೆ ಮಾಡಿದೆ. ಕೇವಲ ವಿದ್ಯಾರ್ಥಿಗಳಿಗಲ್ಲದೇ ವಿವಿಧ ಅನುಕೂಲಗಳಿಗೆ ಆಧಾರ್ ತಿದ್ದುಪಡಿಗಾಗಿ ಅನೇಕ ಮಂದಿ ಪ್ರತಿನಿತ್ಯ ಇದೇ ಹನೂರು ಕೇಂದ್ರ ಸ್ಥಾನ ನಾಢ ಕಛೇರಿಗೆ ಅಲೆದು ಅಲೆದು ಸುಸ್ತಾಗಿದ್ದಾರೆ.
ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ಜನತೆಯ ಪರದಾಟ:
ನೂರಾರು ಹಳ್ಳಿಗಳ ಕೇಂದ್ರ ಸ್ಥಾನ ಹಾಗೂ ಹನೂರು ತಾಲ್ಲೂಕಿನ ದಂಡಾಧಿಕಾರಿಗಳಆಡಳಿತ ಮೂಲ ಸ್ಥಾನದಲ್ಲೇ ಆಧಾರ್ ಸೇವೆ ಸ್ಥಗಿತಗೊಂಡಿರುವುದು ಬರೊಬ್ಬರಿ ಕಳೆದ 8 ತಿಂಗಳಿನಿಂದ ಎಂದರೆ ಇಲ್ಲಿನ ಇಲ್ಲಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯತನ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ಮನಗಾಣಬಹುದು.
ಆಧಾರ್ ಕಾರ್ಡ್ ಸೇವೆ ಅಲಭ್ಯದ ಬಗ್ಗೆ ಅದೇಷ್ಟೋ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಕೂಡ ಈ ಬಗ್ಗೆ ಗಮನಹರಿಸದೇ ಇರುವುದು ನಿಜಕ್ಕೂ ನಾಚಿಗೇಡಿನ ಸಂಗತಿ ಎಂದರೆ ಅತಿಶೋಯೊಕ್ತಿ ಆಗಲಾರದು. ಸಾರ್ವಜನಿಕರ ಪ್ರಮುಖ ಸೇವೆಗಳಲ್ಲಿ ಒಂದಾದ ಆಧಾರ್ ಕಾರ್ಡ್ ವ್ಯವಸ್ಥೆಯನ್ನು ಸರಿಪಡಿಸಲು ತಾಲ್ಲೂಕು ಆಡಳಿತದಿಂದ ಹಿಡಿದು ಜಿಲ್ಲಾಡಳಿತ ಇದುವರೆಗೆ ಕ್ರಮ ವಹಿಸದೇ ಇರುವುದು ಸಾರ್ವಜನಿಕರ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಈ ಬಗ್ಗೆ ಕಂದಾಯ ಇಲಾಖೆಯ ಉಪ ವಿಭಾಗಾಧಿಕಾರಿಗಳು ಹಾಗೂ ಕ್ರಿಯಾಶೀಲಾ ಜಿಲ್ಲಾಧಿಕಾರಿಗಳುಹನೂರಿನಲ್ಲಿ ಆಧಾರ್ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಶೀಘ್ರದಲ್ಲಿ ಕ್ರಮ ಕೈಗೊಂಡರೆ ಆಧಾರ್ ತಿದ್ದುಪಡಿ ಹಾಗೂ ನೂತನ ಆಧಾರ್ ಕಾರ್ಡ್ ಸೇವೆ ಪಡೆಯಲು ಕಾತರರಾಗಿರುವ ಜನತೆಗೆ ನೆಮ್ಮದಿ ದೊರಕಿದಂತಾಗುತ್ತದೆ.

Leave a Comment