ಆದಿಶೇಷ ಸ್ವಾಮಿ ಸನ್ನಿಧಾನದಲ್ಲಿ ಕುಮಾರ ಷಷ್ಠಿ

ಬನಶಂಕರಿ 3 ನೇ ಹಂತದಲ್ಲಿರುವ ನಗರದ ಸೀತಾ ಸರ್ಕಲ್ ಬಳಿ ಇರುವ ಮೈಸೂರ್ ಬ್ಯಾಂಕ್ ಕಾಲೋನಿ ಯಲ್ಲಿ ನೆಲಿಸಿರುವ ಶ್ರೀ ಮಂಜುನಾಥೇಶ್ವರ ಸ್ವಾಮಿ ಹಾಗು ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಧರ್ಮ ಕ್ಷೇತ್ರ ದಲ್ಲಿ ನೇಲಿಸಿರುವ

ಶ್ರೀ ಆದಿಶೇಷ ಸ್ವಾಮಿ ಸನ್ನಿಧಾನ ದಲ್ಲಿ 2020 ಜನವರಿ 31 ರ ಶುಕ್ರವಾರ ಇಂದು ಕುಮಾರ ಷಷ್ಠಿ ಪ್ರಯುಕ್ತ ಬೆಳ್ಳಿಗೆ 7.30 ಅಭಿಷೇಕ ಮಾಡಿ ಶ್ರೀ ಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಹಾಗು ವಿಶೇಷ ಪೂಜೆ ವಿಜೃಂಭಣೆಯಿಂದ ನಡೆಯಿತು.

ಬೆಳಿಗ್ಗೆ 7 ಗಂಟೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ದೇವಸ್ಥಾನಕ್ಕೆ ಬಹಳಷ್ಟು ಭಕ್ತರು ಬಂದು ಶ್ರೀ ಆದಿಶೇಷ ಸ್ವಾಮಿ ಸನ್ನಿಧಾನ ದಲ್ಲಿ ಕುಮಾರ ಷಷ್ಠಿ ಪೂಜೆಯಲ್ಲಿ ಪಾಲ್ಗೊಂಡು ಶ್ರೀ ಸ್ವಾಮಿಯ ದರ್ಶನ ಪಡೆದು ಪುನಿತರಾದರು.

ದೇವಾಲಯದ ಬಗ್ಗೆ : – 2013 ರ ನವೆಂಬರ್ 23 ರಂದು ಶ್ರೀ ಹರೀಶ್ ಭಟ್ಟರು ಮತ್ತು ಕೃಷ್ಣ ಭಟ್ಟರು ಹಾಗು ಮಧುಸೂಧನ ಭಟ್ಟರು ಇವರ ನೇತೃತ್ವದಲ್ಲಿ ಶ್ರೀ ಸ್ವಾಮಿಯ ವಿಗ್ರಹ ಪ್ರತಿಷ್ಠಾಪನೆ ನೆರವೇರಿದೆ . ದೇವಾಲಯ ವನ್ನು ಚೌಕಕಾರ ವಾಗಿ ಕಟ್ಟಲ್ಪಟ್ಟ ದೇವಾಲಯದಲ್ಲಿ ಸುಂದರ ಕೇತನೆಯ

ಶ್ರೀ ವೆಂಕಟರಮಣ ಸ್ವಾಮಿ ಯ ಶಿಲಾ ಮೂರ್ತಿ ವೀರಾಜಮಾನರಾಗಿನಿಂತು ನಂಬಿ ಬರುವ ಭಕ್ತರ ಇಷ್ಟಾರ್ಥ ಗಳನ್ನು ನೆರವರಿಸುತ್ತಾ ನಿಂತಿರುವ ಶ್ರೀ ಸ್ವಾಮಿ ಯನ್ನು ನೋಡಿ ಭಕ್ತಿ ಯಿಂದ ಕೈ ಮುಗಿದು ನಿಂತರೆ ಶ್ರೀ ಸ್ವಾಮಿ ಯ ಸನ್ನಿಧಿ ಯಲ್ಲಿ ಮನ ಸ್ಸಿ ಗೆ ಆಹ್ಲಾದ ಉಂಟಾಗುವುದು …. !

ದೇವಾಲಯವು ನವ ನವೀನ ವಾದರೂ ಕಳೆದ ನಾಲ್ಕು ವರ್ಷಗಳಿಂದ ಶ್ರೀ ಸ್ವಾಮಿಯ ಸನ್ನಿಧಿಯಲ್ಲಿ ಸಮಸ್ತ ನಾಡಿನ‌ ಜನತೆ ಯ ಶ್ರೇಯಸ್ಸು ಮತ್ತು ಆರೋಗ್ಯಕ್ಕಾಗಿ ಕ್ಯಾಲೆಂಡರ್ ಬದಲಾವಣೆ ದಿನ ದಂದು ಅಂದರೇ ನೂತನ ವರ್ಷದ ಆರಂಭ ದಿನದಂದು ಪುಷ್ಪ ಯಾಗ ನಡೆಸಿ ಕೊಂಡು ಬರುತ್ತಿದೆ ದೇವಾಲಯದ ಆಡಳಿತ ಮಂಡಳಿ !!

ಬೆಂಗಳೂರು ನಗರದಲ್ಲಿ ಇರುವ ವಿಶಿಷ್ಟ ಬಗೆಯ ವಿರಳ ದೇಗುಲ ಏಕೆಂದರೆ ಒಂದೆ ಅವರಣದಲ್ಲಿ ಎಲ್ಲಾ ದೇವಾನು ದೇವತೆಗಳ ಸನ್ನಿಧಾನ ವಿರುವ ವಿರಳ ದೇಗುಲ ವೆಂದರೂ ಪ್ರಯಾಶಃ ತಪ್ಪಗಲಾರ ದು ಅಂತಃ ದೇವಾಲಯವಿರುವುದು ನಗರದ ಹೃದಯ ಭಾಗವಾದ ಸೀತಾ ಸರ್ಕಲ್ ಬಳಿ ಇರುವ ಆ ಶ್ರೀ ಕ್ಷೇತ್ರವೇ “ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಸನ್ನಿಧಿ

ದೇವಾಲಯದಲ್ಲಿರುವ ಸನ್ನಿಧಾನ !!

ಶ್ರೀ ಮಂಜುನಾಥ ಸ್ವಾಮಿ , ಈಶ್ವರ – ಪಾರ್ವತಿ , ಗಣೇಶ , ದಕ್ಷಿಣಾ ಮೂರ್ತಿ , ಚಂಡಿಕೆಶ್ವರ , ಲಕ್ಷ್ಮೀ ಸತ್ಯ ನಾರಾಯಣ , ಅಂಜನೇಯ , ನವಗ್ರಹ , ಶನಿಶ್ವರ , ಆದಿಶೇಷ , ಲಕ್ಷ್ಮೀ ನರಸಿಂಹ ಹಾಗು ಪದ್ಮಾವತಿ ದೇವಿಯ ಸನ್ನಿಧಾನವಿದೆ …
“ಕುಮಾರ ಷಷ್ಠಿ ” ಎಂದರೆ

ಮಾಘ ಮಾಸದ ಶುದ್ಧ ಷಷ್ಠೀಯು ಅತ್ಯಂತ ಪವಿತ್ರ ದಿನ. ಈ ದಿನವನ್ನು ಕುಮಾರ ಷಷ್ಠೀ ಅಥವಾ ಕುಕ್ಕೆ ಷಷ್ಠೀಯೆಂದೇ ಪ್ರಸಿದ್ಧ. ಇದು ಸುಬ್ರಹ್ಮಣ್ಯನಿಗೆ ಅತ್ಯಂತ ಪ್ರಿಯವಾದ ದಿನ. ಈ ಮಾಸವು ಶ್ರೇಷ್ಠ ಮಾಸವಾಗಿದ್ದು ಪವಿತ್ರ ಕ್ಷೇತ್ರಗಳಲ್ಲಿ, ನದಿ, ಸಂಗಮಗಳಲ್ಲಿ ಸಂಕಲ್ಪ ಮಾಡಿ ಸ್ನಾನ ಮಾಡುವುದರಿಂದ ಇಷ್ಟಾರ್ಥ ಸಿದ್ಧಿ, ಮೋಕ್ಷ ಪಡೆಯಲು ಸಾಧ್ಯವಿದೆ.

ಕುಮಾರ ಷಷ್ಠೀಯ ಪೂಜಾ ವಿಧಾನ

ಮಾಘ ಮಾಸದ ಷಷ್ಠೀಯಂದು ಸುಬ್ರಹ್ಮಣ್ಯನನ್ನು ವಟುವಿನ ರೂಪದಲ್ಲಿ ಆರಾಧಿಸಲಾಗುತ್ತದೆ. ಸುಬ್ರಹ್ಮಣ್ಯನನ್ನು ವಟು(ಬ್ರಹ್ಮಚಾರಿ) ಸ್ವರೂಪದಲ್ಲಿ ಆರಾಧಿಸಲಾಗುವುದರಿಂದ ಷಷ್ಠೀ ದೇವತೆಗೆ ಪ್ರೀತಿಯುಂಟಾಗಿ ಮನೆಯ ಮಕ್ಕಳನ್ನು ಕಾಪಾಡುವಳು ಎಂದು ನಂಬಿಕೆ.

ಕುಮಾರ ಷಷ್ಠೀಯ ದಿನದಂದು ಬ್ರಹ್ಮಚಾರಿಗಳಿಗೆ ಆಹ್ವಾನ ನೀಡಿ ವಸ್ತ್ರಗಳನ್ನು ಫಲತಾಂಬೂಲಗಳನ್ನಿತ್ತು ನಮಸ್ಕರಿಸುವ ಮೂಲಕ ಸುಬ್ರಹ್ಮಣ್ಯನ ಸ್ವರೂಪವನ್ನು ಪೂಜಿಸುವ ಪದ್ಧತಿ ಇಂದಿಗೂ ನಡೆದು ಬಂದಿದೆ.

ಕರ್ನಾಟಕದಲ್ಲಿರುವ ಅನೇಕ ಸುಬ್ರಹ್ಮಣ್ಯ ದೇವಾಲಯಗಳಿರುವ ಕ್ಷೇತ್ರಗಳಲ್ಲಿ ಇಂದಿಗೂ ಈ ಆಚರಣೆ ನಡೆಯುತ್ತಿದೆ ಹಾಗು ಅಂದು ನಗರದ ಮೈಸೂರು ಬ್ಯಾಂಕ್ ಕಾಲೋನಿ ಯಲ್ಲಿ ನೆಲಿಸಿರುವ ಶ್ರೀ ಮಂಜುನಾಥೇಶ್ವರ ಸ್ವಾಮಿ ಹಾಗು ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಧರ್ಮ ಕ್ಷೇತ್ರ ದಲ್ಲಿ ನೇಲಿಸಿರುವ

ಶ್ರೀ ಆದಿಶೇಷ ಸ್ವಾಮಿ ಸನ್ನಿಧಾನ ದಲ್ಲಿ 2020 ಜನವರಿ 31 ರ ಶುಕ್ರವಾರ ಇಂದು ಕುಮಾರ ಷಷ್ಠಿ ಪ್ರಯುಕ್ತ ಶ್ರೀ ಆದಿಶೇಷ ಸ್ವಾಮಿ ಸನ್ನಿಧಾನದಲ್ಲಿ ವಿಶೇಷ ಪೂಜೆ ಜರುಗಿತು .

ತೀರ್ಥಹಳ್ಳಿ ಅನಂತ ಕಲ್ಲಾಪುರ

Leave a Comment