ಆದಿಲಕ್ಷ್ಮಿ ಸುಳ್ಳಿನ ಪುರಾಣಕ್ಕೆ ಪ್ರೇಕ್ಷಕನ ಶಿಳ್ಳೆ

ಬೆಂಗಳೂರು, ಜುಲೈ 19 – ರಾಜ್ಯಾದ್ಯಂತ ಇಂದು ಹಲವು ಚಿತ್ರಗಳ ಜೊತೆಗೆ ಬಿಡುಗಡೆಯಾಗಿರುವ ‘ಆದಿಲಕ್ಷ್ಮಿ ಪುರಾಣ’ ರಾಧಿಕಾ ಪಂಡಿತ್, ನಿರೂಪ್ ಭಂಡಾರಿ, ತಾರಾ, ಸುಚೇಂದ್ರ ಪ್ರಸಾದ್ ಮೊದಲಾದವರ ನುರಿತ ಹಾಗೂ ಸಹಜ ಅಭಿನಯದಿಂದ ಪ್ರೇಕ್ಷಕರ ಮನಗೆದ್ದಿದೆ ಆದರೆ ಸುಳ್ಳಿನ ಪುರಾಣದ ಜೊತೆಗೆ ಒಂದಿಷ್ಟು ಮನರಂಜನೆ ಹೊರತುಪಡಿಸಿ ಕಥೆಯಲ್ಲಿ ಅಷ್ಟೇನೂ ಗಟ್ಟಿತನ ಹಾಗೂ ಹೊಸತನವಿಲ್ಲದೆ ಸೊರಗಿದೆ

ಮಣಿರತ್ನಂ ಗರಡಿಯಲ್ಲಿ ಪಳಗಿದ ಪ್ರಿಯಾ ನಿರ್ದೇಶನದ ಸಿನಿಮಾ ಎಂಬ ಕಾರಣಕ್ಕೆ ನಿರೀಕ್ಷೆ ಹೆಚ್ಚಾಗೇ ಇತ್ತು ನಿರೂಪಣೆ ಮಾಡೋದ್ರಲ್ಲಿ ಸೈ ಎನಿಸಿಕೊಂಡಿರೋ ಪ್ರಿಯಾ, ಕಥೆ ಕಟ್ಟುವಲ್ಲಿ ಯಶಸ್ವಿಯಾಗಿದ್ದರೆ ಬಹುಶಃ ಸಿನಿಮಾ ಅತ್ಯುತ್ತಮ ಎನಿಸಿಕೊಳ್ಳುತ್ತಿತ್ತು ಎನ್ನಬಹುದು

ಆದಿ ಅನ್ನೋ ಪೊಲೀಸ್ ಕಾಪ್ ಪಾತ್ರದ ಮೂಲಕ ನಿರೂಪ್ ಭಂಡಾರಿ ಮೊದಲ ಬಾರಿ ಮಾಸ್ ಹೀರೋ ಆಗಿ ತೆರೆಮೇಲೆ ಮಿಂಚಿದ್ದು, ಉತ್ತಮ ಪರ್ಪಾರ್ಮೆನ್ಸ್ ನೀಡಿದ್ದಾರೆ ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳು ಹೇಳುವ ಯುವತಿಯ ಪಾತ್ರದಲ್ಲಿ ರಾಧಿಕಾ ಪಂಡಿತ್ ಸಿನಿಮಾದ ಗ್ಲಾಮರ್ ಹೆಚ್ಚಿಸಿದ್ದಾರೆ ನಾಯಕ ನಟನ ತಂದೆ ಹಾಗೂ ತಾಯಿ ಪಾತ್ರಗಳಲ್ಲಿ ತಾರಾ ಮತ್ತು ಸುಚೇಂದ್ರ ಪ್ರಸಾದ್ ಗಮನ ಸೆಳೆಯುತ್ತಾರೆ.

-:ಕಥಾ ಸಾರಾಂಶ:-

ಆತ ಡ್ರಗ್ ಮಾಫಿಯಾ ತಡೆಯಲು ನೇಮಕಗೊಂಡ ಅಂಡರ್ಕವರ್ ಪೊಲೀಸ್ ಆಫೀಸರ್ ಆದಿತ್ಯ ಆಕೆ ಟೂರ್ ಅಂಡ್ ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡ್ಕೊಂಡು, ಕ್ಲಯಂಟ್ಸ್ ಗಳನ್ನು ಬುಟ್ಟಿಗೆ ಹಾಕಿಕೊಳ್ಳಲು ಬರೀ ಸುಳ್ಳನ್ನೇ ಹೇಳುತ್ತಾ, ಲೈಫ್ ಎಂಜಾಯ್ ಮಾಡೋ ಲಕ್ಷ್ಮೀ ಒಮ್ಮೆ ಆದಿತ್ಯ ತನ್ನ ಗುಂಪಿನ ಜೊತೆ ಮಾಫಿಯಾ ಜಾಲವೊಂದನ್ನು ಚೇಸ್ ಮಾಡುವ ಸಂದರ್ಭದಲ್ಲಿ ಅಚಾನಕ್ಕಾಗಿ ಇವರಿಬ್ಬರ ಭೇಟಿಯಾಗಿ, ಪರಸ್ಪರ ಸ್ನೇಹಿತರಾಗ್ತಾರೆ. ಲವ್ ಅಟ್ ಫಸ್ಟ್ ಸೈಟ್ ಅನ್ನೋ ಹಾಗೆ ಮೊದಲ ನೋಟದಲ್ಲೇ ಇಬ್ರಿಗೂ ಪರಸ್ಪರ ಲವ್ ಆದರೂ ಎಕ್ಸ್ ಪ್ರೆಸ್ ಮಾಡಿಕೊಳ್ಳುವುದಿಲ್ಲ

ಪ್ರೇಮದ ಅಭಿವ್ಯಕ್ತಿಗೊಂದು ಅವಕಾಶ ಸಿಕ್ಕೇಬಿಡುತ್ತದೆ ಎನ್ನುವ ಹೊತ್ತಿನಲ್ಲಿ ಲಕ್ಷ್ಮೀ ತನಗೆ ಮದ್ವೆ ಆಗಿ ಏಳು ವರ್ಷದ ಮಗಳು ಇದ್ದಾಳೆ ಎಂದು ಬೇರೆಯವರಿಗೆ ಹೇಳುವುದನ್ನು ಆದಿತ್ಯ ಕೇಳಿಸಿಕೊಳ್ಳುತ್ತಾನೆ ತಾನು ಹೇಳಿದ ಸುಳ್ಳು ಆತನಿಗೆ ತಿಳಿದಿದ್ದರಿಂದ ಲಕ್ಷ್ಮೀ ಅದನ್ನೇ ಮೇಂಟೆನ್ ಮಾಡುತ್ತಾಳೆ ಆದಾಗ್ಯೂ ಇಬ್ಬರೂ ಸ್ನೇಹಿತರಾಗಿರಲು ನಿರ್ಧರಿಸುತ್ತಾರೆ ಇಷ್ಟರಲ್ಲೇ ಆದಿ ಪೊಲೀಸ್ ಕಾಪ್ ಅನ್ನೋದು ಲಕ್ಷ್ಮೀಗೆ ಮನವರಿಕೆಯಾಗುವಷ್ಟರಲ್ಲಿ ಚಿತ್ರದ ಮೊದಲರ್ಧ ಮುಗಿಯುತ್ತದೆ.

ಅತ್ತ ಹಳ್ಳಿಯಲ್ಲಿ ಆದಿಗೆ ಮದುವೆ ಮಾಡಲು ಕಾಯಿಲೆಯಿದೆ ಎಂದು ಸುಳ್ಳು ಹೇಳಿ ಮಗನನ್ನು ಪದೇ ಪದೇ ಕರೆಸಿಕೊಳ್ಳುವ ತಾಯಿ ಶಾಂತಮ್ಮ ಮತ್ತು ರಾಮೇಗೌಡ, ಮತ್ತೊಂದೆಡೆ ತಾನು ಹೇಳಿದ್ದು ಸುಳ್ಳು, ನಿಜ ಹೇಳಿಬಿಡೋಣ ಎಂದು ಚಡಪಡಿಸೋ ಲಕ್ಷ್ಮೀ. ಇವರ ನಡುವೆ ಡ್ರಗ್ ಮಾಫಿಯಾದ ಡಾನ್ಗಳನ್ನ ಹಿಡಿಯೋ ಆದಿ. ಹಾಗಾದ್ರೆ ಸತ್ಯ ಬಯಲಾಗುತ್ತಾ, ಡ್ರಗ್ ಮಾಫಿಯಾಗೆ ಆದಿ ನಿಫುಲ್ಸ್ಟಾಪ್ ಇಡ್ತಾನಾ? ಆದಿಲಕ್ಷ್ಮಿ ಒಂದಾಗೋದು ಹೇಗೆ ಎಂಬುದೇ ಚಿತ್ರದ ತಿರುಳು.

ಯಶ್ ಪತ್ನಿ ರಾಧಿಕಾ ಪಂಡಿತ್, ರಂಗಿತರಂಗ ಖ್ಯಾತಿಯ ಭಂಡಾರಿ ಬ್ರದರ್ಸ್, ಮಣಿರತ್ನಂ ಶಿಷ್ಯೆ ಪ್ರಿಯಾ, ಭಾರತೀಯ ಚಿತ್ರರಂಗದ ಸ್ಟಾರ್ ನಿರ್ಮಾಪಕ ರಾಕ್ಲೈನ್ ವೆಂಕಟೇಶ್- ಹೀಗೆ ಮೆಗಾ ಕಾಂಬಿನೇಷನ್ನ ಮೆಗಾ ಸಿನಿಮಾ ಆದಿಲಕ್ಷ್ಮೀ ಪುರಾಣ. ಸಂಗೀತ, ಆಕ್ಷನ್, ಲೊಕೇಷನ್ಸ್, ಸಿನಿಮಾಟೋಗ್ರಫಿ ಹೀಗೆ ಎಲ್ಲವೂ ಚಿತ್ರದ ಹೈಲೆಟ್. ರಿಲ್ಯಾಕ್ಸ್ಗಾಗಿ ಟಿಕೆಟ್ ತೆಗೆದುಕೊಂಡು ಹೋದವರಿಗೆ ಮನರಂಜನೆ ಸಿಗಲಿದೆ ಎನ್ನಬಹುದು.

Leave a Comment