ಆದಿಜಾಂಬವ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಹುಣಸೂರು,ಮೆ.19- ತಾಲೂಕು ಆದಿಜಾಂಬವ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ರಾಯನಹಳ್ಳಿ ಪ್ರಭಾ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಂಘದ ಗೌರವದ್ಯಾಕ್ಷರಾಗಿ ಗೆರಸನಹಳ್ಳಿ ರಾಮಯ್ಯ,ಅಧ್ಯಕ್ಷರಾಗಿ ಭೋಜ,ಕಾರ್ಯದ್ಯಕ್ಷರಾಗಿ ಹೊಸೂರುಗೋವಿಂದ,ಉಪಾದ್ಯಕ್ಷರುಗಳಾಗಿ ಹನಗೂಡುವಿನಿಂದ ರಮೇಶ್, ಗಾವಡಗೆರೆಯಿಂದ ಬಸವರಾಜು,ಬಿಳಿಕೆರೆಯಿಂದ ಸೋಮಯ್ಯ,ಕಸಭಾದಿಂದ ಮನೀಶ್,ಸಹ ಕಾರ್ಯದರ್ಶಿಗಳಾಗಿ ಜಯಸ್ವಾಮಿ ಮತ್ತು ಗೋವಿಂದಯ್ಯ,ಖಜಾಂಚಿಯಾಗಿ ಟಿ.ಜಿ.ಮಹದೇವ,ಸಂಘಟನಾ ಕಾರ್ಯದರ್ಶಿಯಾಗಿ ಶಿವಶಂಕರ್, ತಾಲೂಕು ಸಂಚಾಲಕರಾಗಿ ಹಬ್ಬನಕುಪ್ಪೆ ಕೃಷ್ಣಯ್ಯ ಹಾಗೂ ವಿಶೇಷ ಆಹ್ವಾನಿತರಾಗಿ ನಗರಸಭಾ ಸದಸ್ಯರಾದ ಶ್ರೀಮತಿ ಸೌರಭಸಿದ್ದರಾಜು,ಹೆಚ್.ಪಿ.ಸತೀಶ್, ಶಿವಕುಮಾರ್ ಹಾಗೂ ಶಿಕ್ಷಕ ಉಮೇಶ್‍ರವರುಗಳನ್ನು ಮತ್ತು ತಾಲೂಕಿನ ಪ್ರತಿ ಗ್ರಾಮದಿಂದ ಒಬ್ಬಬರೂ ಸಂಘದ ಪ್ರತಿನಿಧಿಗಳನ್ನಾಗಿ ಸರ್ವಾನುಮತದಿಂದ ಅಯ್ಕೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಭೋಜ ಮಾತನಾಡಿ ನನ್ನ ಅವಧಿಯಲ್ಲಿ ಸಮಾಜದ ಎಲ್ಲ ಮುಖಂಡರ ಸಹಕಾರದಿಂದ ಸಮಾಜದ ಅಭಿವೃದ್ದಿಗಾಗಿ ಶ್ರಮಿಸುತ್ತೇನೆ ಎಂದರು.

Leave a Comment