ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ೩೧ರ ವರೆಗೆ ಗಡುವು

ಬೆಂಗಳೂರು.ಆ.೨೧- ಪ್ರಸಕ್ತ ಆರ್ಥಿಕ ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಗಡುವನ್ನು ಈ ತಿಂಗಳ ಅಂತ್ಯದವರೆಗೂ ವಿಸ್ತರಿಸಲಾಗಿದೆ. ಆಗಸ್ಟ್ ೩೧ರ ನಂತರ ಆದಾಯ ತೆರಿಗೆ ವಿವರ ಸಲ್ಲಿಸಿದರೆ, ಡಿಸೆಂಬರ್ ೩೧ರ ಒಳಗೆ ರೂ ೫,೦೦೦ ದಂಡ ಪಾವತಿಸಬೇಕಾಗುತ್ತದೆ. ೨೦೧೯ರ ಜನವರಿ ಮತ್ತು ೨೦೧೯ರ ಮಾರ್ಚ್ ೩೧ರ ಒಳಗೆ ಸಲ್ಲಿಸಿದ್ದರೆ ದಂಡದ ಮೊತ್ತದ ರೂ ೧೦,೦೦೦ಕ್ಕೆ ಹೆಚ್ಚಳವಾಗಲಿದೆ.

ವೈಯಕ್ತಿಕ ತೆರಿಗೆದಾರರ ಒಟ್ಟು ಆದಾಯವನ್ನು ಆಧರಿಸಿ ನಿಗದಿಯ ಮಿತಿ ನಿರ್ಧರಿಸಲಾಗುತ್ತದೆ.  ಆ ವಿವಿರ ಹೀಗಿದೆ.೬೦ ವರ್ಷಕ್ಕಿಂತ ಕಡಿಮೆ ವಯಸ್ಸಿನ ನಾಗರಿಕರು ರೂ. ೨.೫ ಲಕ್ಷ ೬೦ವರ್ಷಕ್ಕಿಂತ ಮೇಲ್ಪಟ್ಟ ಆದರೆ ೮೦ ವರ್ಷಕ್ಕಿಂತ ಕಡಿಮೆ ವಯಸ್ಸಿನ ನಾಗಕರಿಕರಿಗೆ ರೂ. ೩ ಲಕ್ಷ ೮೦ ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ರೂ. ೫ ಲಕ್ಷ ನಿಗದಿಪಡಿಸಲಾಗಿದೆ. ತೆರಿಗೆದಾರರ ಪ್ರಮಾಣ ಹೆಚ್ಚಾಗಿದ್ದರೆ, ತೆರಿಗೆ ವಿವಿರ ಸಲ್ಲಿಸುವುದು ಕಡ್ಡಾಯವಾಗಿದೆ.

ಯಾವುದೇ ತೆರಿಗೆದಾರರು ನಿಗದಿಗಿಂತ ಹೆಚ್ಚು ಆದಾಯ ತೆರಿಗೆ ಪಾವತಿ ಮಾಡಿದ್ದರೆ, ಸರ್ಕಾರವು ಅದನ್ನು ಹಿಂತಿರಿಗಿಸುತ್ತದೆ. ಹೀಗಾಗಿ ಇದಕ್ಕೆ ಆದಾಯ ತೆರಿಗೆ ವಿವರ ಸಲ್ಲಿಸಬೇಕು. ನೀವು ಆದಾಯ ತೆರಿಗೆ ವಿವಿರ ಸಲ್ಲಿಸದೇ ಇದ್ದರೆ, ಕ್ಲೈಮ್ ಮಾಡಲು ಆಗುವುದಿಲ್ಲ ಎಂದು ಕ್ಲಿಯರ್ ಟ್ಯಾಕ್ಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಸಂಸ್ಥಾಪಕ ಅರ್ಚಿತ್ ಗುಪ್ತಾ ಹೇಳಿದ್ದಾರೆ.

Leave a Comment