ಆದರ್ಶ ವ್ಯಕ್ತಿ, ಪುಸ್ತಕದಿಂದ ಸನ್ಮಾರ್ಗ ಸಿದ್ಧಿ-ಪ್ರೊ.ದೇಸಾಯಿ

ಧಾರವಾಡ ಅ.25- ಯಾರು ಆದರ್ಶ ವ್ಯಕ್ತಿಗಳ ಸಾಧಕರ, ಚಿಂಥಕರ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳುತ್ತಾರೋ ಅವರು ಕೂಡ ಸಾಧನಾ ಪಥದತ್ತ ಸಾಗಿ ಸನ್ಮಾರ್ಗದಲ್ಲಿ ನಡೆಯುವರು ಎಂದು ಕೆ.ಎಲ್.ಇ. ಟೆಕ್ನಿಕಲ್ ಯುನಿವರ್ಸಿಟಿಯ ಎಗ್ಜಿಕ್ಯೂಟಿವ್ ಪ್ರೊ. ಬಿ.ಎಲ್.ದೇಸಾಯಿ ಅಭಿಪ್ರಾಯಪಟ್ಟರು.
ಶ್ರೀ ಹುರಕಡ್ಲಿ ಅಜ್ಜ ಶಿಕ್ಷಣ ಸಮಿತಿಯ ಲಲಿತಾ ಗೊಬ್ಬರಗುಂಪಿ ಕಲಾ ಹಾಗೂ  ಶಂಭುಲಿಂಗಪ್ಪ ಬುಡಪನಹಳ್ಳಿ ವಾಣಿಜ್ಯ ಬಾಲಕೀಯರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ 2019/20 ನೇ ಸಾಲಿನ ವಿದ್ಯಾರ್ಥಿ ಒಕ್ಕೂಟ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ನೆರವೇರಿಸಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಗುರಿಯಿರಬೇಕು ಜೊತೆಗೆ ಗುರುವಿನ ಮಾರ್ಗದರ್ಶನವಿರಬೇಕು ಅಂದಾಗ ಮಾತ್ರ ವಿದ್ಯಾರ್ಥಿ ಸಾಧನ ಪಥ ಸುಗಮಾಗಿರುತ್ತದೆ. ವಿದ್ಯಾರ್ಥಿ ತನ್ನ ಜೀವನದ ಆರಂಭದಲ್ಲಿಯೇ ಭವಿಷ್ಯದ ಭದ್ರ ಬುನಾದಿ ಬಗ್ಗೆ ಚಿಂತಿಸಿ ಸ್ಪರ್ಧಾತ್ಮಕತೆಯತ್ತ ಸಾಗಬೇಕು. ಕೇವಲ ಅಂಕ ಗಳಿಸಿದರೆ ಸಾಲದು ಅದರೊಂದಿಗೆ ಪಠ್ಯೇತರ ಚಟುವಟಿಕೆಗಳು ಅವಶ್ಯಕವಾಗಿದೆ ಎಂದರು.
ಆಧುನಿಕತೆ ಯುಗದಲ್ಲಿರುವ ವಿದ್ಯಾರ್ಥಿಗಳು ಹೆಚ್ಚು ಭಾಷಾ ಜ್ಞಾನ ಪಡೆದರೆ ಅವರಿಗೆ ವಿವಿಧ ಸ್ಥಳಗಳಲ್ಲಿ ಉದ್ಯೋಗವಕಾಶ ಒದಗಲಿದ್ದು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಜನೆ ಮಾಡುವುದು ಸೂಕ್ತವೆಂದರು.
ಸಮಿತಿಯ ಕಾರ್ಯಾಧ್ಯಕ್ಷರಾದ ಎಸ್.ವಿ.ಬುಡಪನಹಳ್ಳಿ ಅಧ್ಯಕ್ಷತೆವಹಿಸಿ ಮಾತನಾಡಿದರು. ಗೌರವ ಕಾರ್ಯದಶೀ ಎಂ.ಸಿ.ಬಂಡಿ, ನಿವೃತ್ತ ಕೃಷಿ ಅಧಿಕಾರಿ ಎಂ.ಟಿ.ಮಲ್ಲಾಡದ ಉಪಸ್ಥಿತರಿದ್ದರು. ಪ್ರಾಚಾರ್ಯ ನಾಗವೀಣಾ ಕೊಲ್ಲಾವರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ನೇತ್ರಾವತಿ ಮುಳಮುತ್ತಲ ನಿರೂಪಿಸಿದರು. ಕು. ಅನುಷಾ ಟಿ ವಂದಿಸಿದರು.

Leave a Comment