ಆದರ್ಶ ಗ್ರಾಮ ಯೋಜನೆ ಸದ್ಬಳಕೆ ಮಾಡಿಕೊಳ್ಳಿ

ಹುಣಸೂರು, ಸೆ.11- ದೇಶದ ಪ್ರತಿಷ್ಠಿತ ಐ.ಟಿ.ಸಿ ಸಂಸ್ಥೆ ಆದರ್ಶ ಗ್ರಾಮ ಯೋಜನೆ ಅಡಿಯಲ್ಲಿ ಬಯಲು ಶೌಚಮುಕ್ತ ಗ್ರಾಮಗಳನ್ನಾಗಿ ರೂಪಿಸುತ್ತಿರುವ ಜೊತೆ ಕೆರೆ ಹೂಳು ತೆಗೆಸುವುದು, ಶಾಲಾ ಮಕ್ಕಳಿಗೆ ಪರಿಕರಗಳನ್ನು ನೀಡುತ್ತಿರುವುದು ಪ್ರಶಂಸನೀಯ ಕಾರ್ಯಕ್ರಮಗಳು ಎಂದು ಕರುಣ ಕುಪ್ಪೆ ಗ್ರಾ.ಪಂ ಅಧ್ಯಕ್ಷ ಪಾಪ್ಪಣ ತಿಳಿಸಿದರು.
ಕರುಣ ಕುಪ್ಪೆಗ್ರಾ.ಪಂ ಹಾಗೂ ಐ.ಟಿ.ಸಿ ಸಂಸ್ಥೆ ವತಿಯಿಂದ ಗ್ರಾಮದಲ್ಲಿ ಹಮ್ಮಿಕೊಂಡಿದ ಸ್ವಚ್ಚ ಗ್ರಾಮ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಒಂದು ಗ್ರಾಮ ಆದರ್ಶವಾಗಬೇಕಾದರೆ ಕೇವಲ ಸರ್ಕಾರದ ಅನುದಾನದಿಂದ ಮಾತ್ರ ಸಾಧ್ಯವಿಲ್ಲ ಕೆಲ ಖಾಸಗಿ ಸಂಸ್ಥೆಗಳ ಸಹಭಾಗಿತ್ವ ಅವಶ್ಯವಿದ್ದು ಗ್ರಾಮಸ್ಥರು ಅದನ್ನು ಸರಿಯಾದ ರೀತಿ ಸದ್ಬಳಕೆ ಮಾಡಿಕೊಳ್ಳಬೇಕೆಂದು ಅರಿವು ಮೂಡಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮದಲ್ಲಿ ಶುಚಿತ್ವ ಹಾಗೂ ಬಯಲು ಶೌಚ ಮುಕ್ತದ ಬಗ್ಗೆ ಜಾಥ ನಡೆಸಿ, ಬೀದಿ ನಾಟಕದ ಮೂಲಕ ಗ್ರಾಮಸ್ಥರಿಗೆ ಹಾಗೂ ಶಾಲಾ ಮಕ್ಕಳಿಗೆ ಅರಿವು ಮೂಡಿಸಿ ಗ್ರಾಮದ ಪ್ರತಿ ಮನೆಗೂ ಸಸಿಗಳನ್ನು ವಿತರಿಸಲಾಯಿತ್ತು.
ಕಾರ್ಯಕ್ರಮದಲ್ಲಿ ಐ.ಟಿ.ಸಿ ವ್ಯವಸ್ಥಾಪಕರಾದ ವೇಣು ಪವೀಣ್,ಸಿಬ್ಬಂದಿಗಳಾದ ಮೋಹನ್‍ಕುಮಾರ್, ಸಂದೇಶ್, ತಂಬಾಕು ಮಂಡಳಿ ಅಧೀಕ್ಷಕ ಮಾರಣ್ಣ, ಕ್ಷೇತ್ರಾಧಿಕರಿಗಳಾದ ಮಧು, ವೆಂಕಟೇಶ್, ಜಯಣ, ಗ್ರಾಮಸ್ಥರಾದ ಮಹದೇವೆಗೌಡ, ಮಾದೇಗೌಡ, ರಾಘವೇಂದ್ರ ಸೇರದಂತೆ ಆನೇಕರು ಉಪಸ್ಥಿತರಿದರು.

Leave a Comment