ಆತ್ಯಾಹುತಿ ಬಾಂಬ್‌ಗೆ ೧೧ ಮಂದಿ ಬಲಿ

ಬಾಗ್ದಾದ್,ಅ.೧೨-ಬಾಗ್ದಾದ್‌ನ ಅನ್ಬರ್ ಪ್ರಾಂತ್ಯದಲ್ಲಿ ನಡೆದ ಆತ್ಮಾಹುತಿ ಬಾಂಬ್‌ದಾಳಿಯಲ್ಲಿ ಕನಿಷ್ಟ ೧೧ ಮಂದಿ ಮೃತಪಟ್ಟಿದ್ದು, ೧೫ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ನಡೆದಿದೆ.

ಅತ್ಯಾಹುತಿ ಬಾಂಬ್ ದಾಳಿ ಮೃತಪಟ್ಟವರು ಮತ್ತು ಗಾಯಗೊಂಡವರೆಲ್ಲರೂ ಸಾರ್ವಜನಿಕರೇ ಆಗಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಅದರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ.

ಘಟನೆಗೆ ಐಸಿಸ್ ಉಗ್ರರ ಕೈವಾಡ ಕಾರಣ ಎಂದು ಅಲ್ಲಿನ ಭದ್ರತಾ ಪಡೆ ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಇದುವರೆಗೂ ಐಸಿಸ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಥವ ಘಟನೆಯ ಹೊಣೆ ಹೊತ್ತಿಲ್ಲ.

Leave a Comment