ಆತ್ಮ ವಿಶ್ವಾಸ ಕಳೆದು ಕೊಳ್ಳಬೇಡಿ : ರಾಣಿ ಎಲಿಜಬೆತ್

 

ಲಂಡನ್, ಏ ೬- ದೇಶದಲ್ಲಿ ಮುಂದೆ ಉತ್ತಮ ದಿನಗಳು ಮರಳಿ ಬರಲಿವೆ, ಆತ್ಮವಿಶ್ವಾಸ ಕಳೆದುಕೊಳ್ಳುವುದು ಬೇಡ ಎಂದು ಬ್ರಿಟನ್ ರಾಣಿ ಎಲಿಜಬೆತ್ ದೈರ್ಯ ತುಂಬಿದ್ದಾರೆ

ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಕೊರೊನ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರೂ ದೇಶದಲ್ಲಿ ಮುಂದೆ ಉತ್ತಮ ದಿನಗಳು ಮರಳಿ ಬರಲಿವೆ ಎಂದು ಅವರು ಜನತೆಗೆ ಭರಸವೆ ತುಂಬಿದ್ದಾರೆ.

ಅಲ್ಲದೇ ಜನರು ಆತ್ಮ ವಿಶ್ವಾಸ ಕಳೆದು ಕೊಳ್ಳುವುದು ಬೇಡ, ಕೊರೊನ ವಿರುದ್ಧದ ಹೋರಾಟದಲ್ಲಿ ಬ್ರಿಟನ್ ಯಶಸ್ವಿಯಾಗಲಿದೆ ಎಂದು ರಾಣಿ ಎಲಿಜಬೆತ್ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾನುವಾರ ರಾತ್ರಿ ಪ್ರಸಾರ ಭಾಷಣ ಮಾಡಿದ ಅವರು ಕೊರೊನವೈರಸ್ ಹಾವಳಿ ಬಗ್ಗೆ ಪ್ರತಿಕ್ರಿಯಿಸಿ ಹೆಚ್ಚು ಸವಾಲಿನ ಸಮಯದಲ್ಲಿ ನಾನು ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ.”ದೇಶದಲ್ಲಿ ಉತ್ತಮ ದಿನಗಳು ಮರಳಿ ಬರಲಿವೆ ಕೊರೊನಾ ವಿರುದ್ಧದ ಹೋರಾಟದಲ್ಲಿ ದೇಶ ಯಶಸ್ವಿಯಾಗಲಿದೆ ಎಂಬ ನಂಬಿಕೆಯಿದೆ ಎಂದರು.

ಸ್ವಯಂ-ಶಿಸ್ತು, ಸಂಕಲ್ಪ ಮತ್ತು ಸಹ-ಭಾವನೆ ಈ ದೇಶವನ್ನು ಇನ್ನೂ ನಿರೂಪಿಸುತ್ತಿದೆ ಜೊತೆಗೆ ಉತ್ತಮ ದಿನಗಳು ಮರಳುತ್ತವೆ ಎಂದು ಜನರು ಸಮಾಧಾನದಿಂದ ಇರಬೇಕು ಆತಂಕ ಪಡಬಾರದು ಎಂದು ಜನರಿಗೆ ಭರವಸೆ ಮೂಡಿಸಿದ್ದಾರೆ.

ಆತಂಕದಿಂದ ಹೊರಬಂದು ನಾವು ಮತ್ತೆ ಸ್ನೇಹಿತರೊಂದಿಗೆ , ನಮ್ಮ ಕುಟುಂಬದ ಸದಸ್ಯರ ಜೊತೆ ಇರುತ್ತೇವೆ, ನಾವು ಮತ್ತೆ ಭೇಟಿಯಾಗುತ್ತೇವೆ ಎಂದು ಅವರು ಹೇಳಿದರು. ಸ್ವಯಂ-ಪ್ರತ್ಯೇಕಿಸುವಿಕೆ ಕ್ರಮ ಕೆಲವೊಮ್ಮೆ ಕಠಿಣ ಎನಿಸಬಹುದು, ಸೋಂಕಿನ ವಿರುದ್ದ ಹೋರಾಡಲು ಅದೇ ನಮಗೆ ಉತ್ತಮ ದಾರಿ ಎಂದು ಹೇಳಿದ್ದಾರೆ.

Leave a Comment