ಆಡಳಿತ ಮಂಡಳಿ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ಒತ್ತಾಯ

ರಾಯಚೂರು.ನ.13- ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್‌ನ ಆಡಳಿತ ಮಂಡಳಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ವಿಎಸ್‌ಎಸ್‌ಎನ್ ಮಾಜಿ ನಿರ್ದೇಶಕ ಆರ್.ರವಿ ಕುಮಾರ ರಾಂಪೂರು ಒತ್ತಾಯಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ ನಗರದ ವಾರ್ಡ್ ನಂ.35 ರಾಂಪೂರುನಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಸಂಘದಲ್ಲಿ ಅವ್ಯವಹಾರವಾಗಿದ್ದ ಸಂಘದ ಅಡಳಿತ ಮಂಡಳಿಯಲ್ಲಿ ಸಹಕಾರ ಸಂಘದ ಕಾಯ್ದೆ ಮೂಲಕ ಆಡಳಿತ ಮಂಡಳಿಯಲ್ಲಿ ಮುಂದಿನ 5 ವರ್ಷಗಳವರೆಗೆ ಅನರ್ಹಗೊಳಿಸಿ ಆದೇಶಿಸಿರುವುದು ಸ್ವಾಗತಾರ್ಹ ಸಂಘದ ಅಧ್ಯಕ್ಷ ಅಮರೇಶ ಪಾಟೀಲ್, ಕಾರ್ಯದರ್ಶಿ ಸದ್ದಾಂ ಹುಸೇನ ಹಾಗೂ ಸಂಘದ ಆಡಳಿತ ಮಂಡಳಿ ಸದಸ್ಯರು ಒಳಗೊಂಡು ಆರ್‌ಡಿಸಿಸಿ ಬ್ಯಾಂಕ್ ನಿಯಮಿತ ರಾಯಚೂರು ಶಾಖೆಯಲ್ಲಿ ರೈತರ ಖಾತೆಯಲ್ಲಿರುವ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆಂದು ತಿಳಿಸಿದರು.
ರೈತರ ಖಾತೆಯಲ್ಲಿರುವ 50 ಲಕ್ಷಗಳಿಂದ 60 ಲಕ್ಷವರೆಗೆ ರೈತರ ಎಟಿಎಂ ಕಾರ್ಡ್‌ಗಳನ್ನು ವಿತರಿಸುವ ಪೂರ್ವದಲ್ಲಿ ಹಣ ವಿತ್ ಡ್ರಾ ಮಾಡಿಕೊಂಡು ಅವ್ಯವಹಾರ ಎಸಗಿದ್ದರು. ಅವ್ಯವಹಾರ ಕುರಿತು ತನಿಖೆ ಕೈಗೊಳ್ಳದೇ ಹಾಗೂ ಸಂಘದ ವಾರ್ಷಿಕ ಮಹಾಸಭೆ ಜರುಗಿಸದೆ. ನಿಧನ ಹೊಂದಿದ ರೈತರ ಹಣವನ್ನು ಬಳಸಿಕೊಂಡಿದ್ದರು. ಸಂಘದ ಉಪ ನಿಯಮ ತಿದ್ದುಪಡಿ ಮಾಡಿಸದೇ ಸಹಾಯಕ ನಿಬಂಧಕರು ಸಂಘದ ಆಡಳಿತ ಮಂಡಳಿ ಜೊತೆ ಕೈಜೊಡಿಸಿ ಅವ್ಯವಹಾರಕ್ಕೆ ಪ್ರಚೋದನೆ ನೀಡಿ ರೈತರಿಗೆ ಮೋಸ ಎಸಗಿದ್ದಾರೆಂದು ದೂರಿದರು.
ಅಧ್ಯಕ್ಷರಾದ ಅಮರೇಶ ಪಾಟೀಲ್ ಅವರ ಮಾವನಾದ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಪ್ರಭಾವ ಬೀರಿ ಸಹಕಾರ ಸಂಘಗಳ ಅಧಿಕಾರಿಗಳ ಮೇಲೆ ಒತ್ತಾಡ ಹಾಕಿ ಆಡಳಿತ ಮಂಡಳಿ ರದ್ದಾಗದಂತೆ ನೋಡಿಕೊಂಡರು. ರೈತರಿಂದ ಖರೀದಿಸಿದ ಕಡಲೆ ಹಣ ಹಾಗೂ ಹೆಚ್ಚುವರಿ ಹಣ ಹಾಗೂ ಸಾಲ ಮನ್ನಾ ಬಾಕಿ ಹಣವನ್ನು ರೈತರಿಗೆ ಹಿಂದಿರುಗಿಸಬೇಕು. ಕೂಡಲೇ ಆಡಳಿತ ಮಂಡಳಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡದಿದ್ದಲ್ಲಿ ಡಿಸಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಾಂತಯ್ಯ ರಾಂಪೂರು, ಗುರುರಾಜ, ವೈ.ಬಿ.ಬಸವರಾಜ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment