ಆಡಳಿತ ಪಕ್ಷದವರಾಗಿ ಯೋಜನೆ ಜಾರಿಗೆ ಪ್ರಯತ್ನಿಸಿ:ಶಾಸಕರಿಗೆ ಈಶ್ವರರೆಡ್ಡಿ ಆಗ್ರಹ

ಬಳ್ಳಾರಿ, ಸೆ.10: ನಗರ ಶಾಸಕ ಸೋಮಶೇಖರರೆಡ್ಡಿ ಅವರು ಆಡಳಿತ ಪಕ್ಷದವರಾಗಿದ್ದು, ನಗರದ ಅಭಿವೃದ್ಧಿಗೆ ಬೇಕಾದ ಯೋಜನೆಗಳ ಅನುಷ್ಠಾನಕ್ಕೆ ಅನುದಾನ ತರುವ ಪ್ರಯತ್ನ ಮಾಡಬೇಕು ಹೊರೆತು ಹೈ.ಕ ಮಂಡಳಿ ಮುಂದೆ ಧರಣಿ ಮಾಡುತ್ತೇನೆಂಬ ಹೇಳಿಕೆ ಸರಿಯಲ್ಲ ಎಂದು ಯುವಸೇನ ಸೋಷಿಯಲ್ ಯ್ಯಾಕ್ಷನ್ ಕ್ಲಬ್ ನ ಅಧ್ಯಕ್ಷ ಮೇಕಲ ಈಶ್ವರರೆಡ್ಡಿ ಹೇಳಿದ್ದಾರೆ.

ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ, ಇತ್ತೀಚೆಗೆ ನಗರದ ಗಣೇಶ ಕಾಲೋನಿಯ ಮನೆಗೆ ಚರಂಡಿ ನೀರು ನುಗ್ಗಿದ್ದಕ್ಕೆ ಅಲ್ಲಿಗೆ ಬಂದು ಪಾಲಿಕೆ ಅಧಿಕಾರಿಗಳನ್ನು ಕರೆಸಿ ತರಾಟೆಗೆ ತೆಗೆದುಕೊಂಡು ಆ ಸಮಸ್ಯೆ ಬಗೆಹರಿಸುವವರೆಗೆ ಅಲ್ಲೇ ಇದ್ದು ಮಾಡಿಸಿದ್ದರು. ಅದಕ್ಕೆ ನಮ್ಮ ಸ್ವಾಗತ. ಈ ಸಂದರ್ಭದಲ್ಲಿ ನಗರದ ಒಳಚರಂಡಿ ಯೋಜನೆಗಾಗಿ ಹೆಚ್.ಕೆ.ಡಿ.ಬಿ ಕಛೇರಿ ಮುಂದೆ ಧರಣಿ ಕುಳಿತುಕೊಳ್ಳುವುದಾಗಿ ಹೇಳಿದ್ದು ಸರಿಯಲ್ಲ ಅವರೇನು ಹಾಗೆ ಮಾಡಲು ವಿರೋಧ ಪಕ್ಷದಲ್ಲಿ ಇದ್ದಾರ.. ಆಡಳಿತ ಪಕ್ಷದವರಾಗಿ ಅಧಿಕಾರಿಗಳನ್ನು ಕರೆಸಿ ಯೋಜನೆ ರೂಪಿಸಿ ಅನುದಾನ ಮಂಜೂರು ಮಾಡಿಸಿ ಅನುಷ್ಠಾನಕ್ಕೆ ಮುಂದಾಗಬೇಕು ಎಂದರು.

ನಗರದಲ್ಲಿ ರಾಜಕುಮಾರ್ ರಸ್ತೆ ಅಗಲೀಕರಣ ನೆನೆಗುದಿಗೆ ಬಿದ್ದಿದೆ. ಸಂತ್ರಸ್ಥರನ್ನು ಕರೆದು ಸಭೆ ನಡೆಸಿ ಅವರ ಬೇಡಿಕೆಗಳನ್ನು ಪೂರೈಸಿ ರಸ್ತೆ ಅಗಲೀಕರಣಕ್ಕೆ ಮುಂದಾಗಬೇಕಿದೆ. ಅದೇ ರೀತಿ ನಗರದ ಕಣೇಕಲ್ ಬಸ್ ಸ್ಟ್ಯಾಂಡ್ ರಸ್ತೆ ಅಂಜಿನಪ್ಪ ಜಿನ್ನದಿಂದ ಗೋನಾಳ್ ಬೈಪಾಸ್ ವರೆಗೆ ರಸ್ತೆ ಒತ್ತುವರಿ ಮಾಡಿರುವುದನ್ನು ತೆರವು ಮಾಡಿಸಿ ಅಭಿವೃದ್ಧಿ ಪಡಿಸಲು ಅನುದಾನ ಜಿಲ್ಲ ಖನಿಜ ನಿಧಿಯಿಂದ ಮಂಜೂರಾಗಿದೆ. ಈ ಕೆಲಸವನ್ನು ನಿಂತು ಶಾಸಕರು ಮಾಡಿಸಬೇಕು. ಇಲ್ಲದಿದ್ದರೆ ನಾವು ಪಾಲಿಕೆ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆಂದರು.

ಶಾಸಕರು ವಿದ್ಯಾವಂತರು ಆದರೆ ಬುದ್ಧಿವಂತರಲ್ಲ ಏಕೆಂದರೆ ನಗರದಲ್ಲಿ ನೀರಿನ ಸಮಸ್ಯೆ ಉಂಟಾದಾಗ ಅಧಿಕಾರಿಗಳಿಂದ ಸಮಸ್ಯೆ ಬಗೆಹರಿಸಲು ಮುಂದಾಗದೆ ತಾವೇ ಖಾಸಗಿ ಟ್ಯಾಂಕರ್ ನಿಂದ ನೀರು ಹಾಕಿಸಿಕೊಂಡಿದ್ದಾರೆಂದರು.

ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಆಡಳಿತ ಇದೆ. ಆ ಪಕ್ಷದ ಶಾಸಕರಾಗಿರುವ ತಾವು ಪ್ರಭಾವ ಬೀರಿ ನಗರದಲ್ಲಿನ ರಸ್ತೆಗಳ ಅಗಲೀಕರಣ ಮತ್ತು ಅಭಿವೃದ್ಧಿಗೆ ಒತ್ತು ನೀಡಬೇಕೆಂದು ಆಗ್ರಹಿಸುವುದಾಗಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿ.ಎಂ.ಭಾಷ, ಹನುಮಂತರೆಡ್ಡಿ, ಮೆಹಬೂಬ್ ಭಾಷಾ, ಎಂ.ಕೆ.ಜಗನ್ನಾಥ್, ಅಭಿಷೇಕ್ ಮೊದಲಾದವರು ಇದ್ದರು.

Leave a Comment