ಆಡಳಿತ ನಿರ್ವಹಣೆ ಮೋದಿ ವಿಫಲ ಸಿಂಗ್ ಟೀಕೆ

ನವದೆಹಲಿ, ಸೆ. ೮- ಪ್ರಧಾನಿ ನರೇಂದ್ರಮೋದಿ ಸರ್ಕಾರ ಎಲ್ಲ ಕ್ಷೇತ್ರಗಳಲ್ಲಿಯೂ ವಿಫಲತೆ ಕಂಡಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.
ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆರ್ಥಿಕತೆ, ಕೃಷಿ, ನೆರೆರಾಷ್ಟ್ರಗಳೊಂದಿಗಿನ ದ್ವಿಪಕ್ಷೀಯ ಸಂಬಂಧಗಳು ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ವಿಫಲತೆ ಕಂಡಿದೆ. ಸರ್ಕಾರ ನೀಡುವ ಯೋಜನೆಗಳ ಜಾರಿ ಕುರಿತಂತೆ ಹೇಳಿಕೆಗಳಲ್ಲಿ ಜನ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ನಾಯಕ ಕಪಿಲ್ ಸಿಬಾಲ್ ಅವರ ಶೇಡ್ಸ್ ಆಫ್ ಟ್ರೂತ್ – ಎ – ಜರ್ನಿ ಡಿರೈಲ್ಡ್ ಪುಸ್ತಕ ಬಿಡುಗಡೆ ಮಾಡಿ ಕೇಂದ್ರದ ವಿರುದ್ಧ ಮಾಜಿ ಪ್ರಧಾನಿ ಹರಿಹಾಯ್ದರು.

ದೇಶದ ಕೃಷಿ ವಲಯ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ವ್ಯೂಹಾತ್ಮಕ ಯತ್ನವನ್ನು ನಡೆಸುತ್ತಿಲ್ಲ. ದೇಶದ ರೈತರು ಪರಿಹಾರ ಮತ್ತು ಬೆಳೆದ ಧಾನ್ಯಗಳಿಗೆ ಸೂಕ್ತ ಬೆಲೆ ಪಡೆಯಲು ಇನ್ನೂ ಹೆಣಗಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಾಲ್ ಅವರು ತಮ್ಮ ಪುಸ್ತಕದಲ್ಲಿ ಕಳೆದ 4 ವರ್ಷಗಳಿಂದ ಅಧಿಕಾರದಲ್ಲಿದ್ದ ಮೋದಿ ಆಡಳಿತ ಜನಕ್ಕೆ ನೀಡಿದ್ದ ಭರವಸೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವ ಬಗ್ಗೆ ಕುರಿತಂತೆ ವಿವರವಾಗಿ ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ.

ಈ ಪುಸ್ತಕ ಮೋದಿ ಆಡಳಿತದ ವಿಫಲತೆಗಳಿಗೆ ಕೈಗನ್ನಡಿಯಾಗಿದೆ ಎಂದೂ ಮನಮೋಹನ್ ಸಿಂಗ್ ಹೇಳಿದ್ದಾರೆ.

Leave a Comment