ಆಟೋ ಯೂನಿಯನ್ ಮುಖಂಡ ಕೆ.ತಾಯಪ್ಪ ಕಾಂಗ್ರೆಸ್ ಸೇರ್ಪಡೆ

ಬಳ್ಳಾರಿ, ಜ.7: ನಗರದ ಆಟೋ ಚಾಲಕರ ಸಂಘದ ಮುಖಂಡ ಕೆ.ತಾಯಪ್ಪ ತಮ್ಮ ಅಪಾರ ಬೆಂಬಲಿಗರೊಂದಿಗೆ ಇಂದು ಕಾಂಗ್ರೆಸ್ ಪಕ್ಷ ಹಾಗೂ ಐ.ಎನ್.ಟಿ.ಯು.ಸಿ.ಗೆ ಸೇರ್ಪಡೆಯಾದರು.

ನಗರದ ಕಂಟೋನ್ಮೆಂಟ್ ಪ್ರದೇಶದ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಕಛೇರಿಯಲ್ಲಿ ಜಿಲ್ಲಾ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್ ಸಮ್ಮುಖದಲ್ಲಿ ಐ.ಎನ್.ಟಿ.ಯು.ಸಿ ಜಿಲ್ಲಾ ಅಧ್ಯಕ್ಷ ಜಯಕುಮಾರ್ ನಾಯ್ಡು ನೇತೃತ್ವದಲ್ಲಿ ಸೇರಿದರು.

ಈ ಸಂದರ್ಭದಲ್ಲಿ ರಫಿ ಅವರು, ಪಕ್ಷದ ಬೆಳವಣಿಗೆಗೆ ಶ್ರಮವಹಿಸುವಂತೆ ತಾಯಪ್ಪ ಅವರಿಗೆ ಹೂಮಾಲೆ ಅರ್ಪಿಸಿ ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು.

Leave a Comment