ಆಟೋ ಬಾಡಿಗೆ ದರ ಇಳಿಕೆಗೆ ಮನವಿ

ರಾಯಚೂರು.ನ.21- ರೈಲ್ವೆ ಆಡಳಿತ ಮಂಡಳಿ ಜಿಲ್ಲೆಯ ರೈಲ್ವೆ ನಿಲ್ದಾಣ ಆಟೋ ಸ್ಟಾಂಡ್‌ಗೆ ಬಾಡಿಗೆದರ ಏರಿಕೆ ಮಾಡಿದ್ದು, ಅದನ್ನು ಇಳಿಕೆ ಮಾಡಬೇಕೆಂದು ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಮನವಿ ಮಾಡಿದರು.
ಅವರಿಂದು ರೈಲ್ವೆ ನಿಲ್ದಾಣದ ಸ್ಟೇಷನ್ ಮ್ಯಾನೇಜರ್ ಮನವಿ ಸಲ್ಲಿಸಿ ಆಟೋ ಬಾಡಿಗೆದರ ಹೆಚ್ಚಳ ಮಾಡಿದ್ದರಿಂದ ಆಟೋ ಚಾಲಕರಿಗೆ ಪಾವತಿಸಲು ಬಹಳ ಕಷ್ಟದಾಯಕವಾಗಿದೆ. ದಿನಕ್ಕೆ 3 ರಿಂದ 4 ಟ್ರಿಪ್ ಪ್ರಯಾಣಿಕರನ್ನು ಕರೆದ್ಯೊಯಲು ಸಾಧ್ಯವಾಗುತ್ತಿದ್ದು. ಹೆಚ್ಚಿನ ಬಾಡಿಗೆ ಕಟ್ಟಲು ಸಾಧ್ಯವಾಗುವುದಿಲ್ಲ. ಬಂದ ಬಾಡಿಗೆ ಸಂಸಾರ ನಡೆಸಲು ಸಾಲ ಮಾಡುವ ಪರಿಸ್ಥಿತಿ ಒದಗಿದೆಂದರು.
ವರ್ಷಕ್ಕೆ ಹೆಚ್ಚಳ ಮಾಡಿರುವ ಬಾಡಿಗೆ ಕಟ್ಟಲಾಗುವುದಿಲ್ಲ. ಬಾಡಿಗೆ ಇಳಿಕೆ ಮಾಡಬೇಕು. ರೈಲ್ವೆ ಆಡಳಿತ ಮಂಡಳಿ 6 ತಿಂಗಳಿಗೆ 1800 ರೂ. ಹೆಚ್ಚಳ ಮಾಡಿರುವುದು ಆಟೋ ಚಾಲಕರಿಗೆ ಕಷ್ಟವಾಗಿದೆ. ಕರ್ನಾಟಕ ರಾಜ್ಯ ಸರ್ಕಾರವು ರಾಯಚೂರು ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯೆಂದು ಘೋಷಿಸಲಾಗಿದೆ. ಈ ಭಾಗದಲ್ಲಿ ಜನರ ಜೀವನ ನಡೆಸಲು  ಕಷ್ಟದಾಯಕವಾಗಿದ್ದರಿಂದ 371 (ಜೆ) ಜಾರಿಗೆ ತರಲಾಯಿತು. ಆಟೋ ಬಾಡಿಗೆದರ ಹಳೆಯ ನಿಯಮವನ್ನು ಮುಂದುವರೆಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಟಿಯುಸಿಐ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ, ರವಿದಾದಸ್, ರೈಲ್ವೆ ಆಟೋ ಚಾಲಕ ಸಂಘದ ಅಧ್ಯಕ್ಷ ಮಹಿಬೂಬ ಸಾಬ್, ಸರ್ತಾಜ್ ಅಹ್ಮದ್ ಸೇರಿದಂತೆ ಆಟೋ ಚಾಲಕರು ಉಪಸ್ಥಿತರಿದ್ದರು.

Leave a Comment