ಆಟೋ ಚಾಲಕನ ಕೊಚ್ಚಿ ಕೊಲೆ

ಬೆಂಗಳೂರು,ನ.೧೪-ಹಳೆ ದ್ವೇಷದ ಹಿನ್ನಲೆಯಲ್ಲಿ ಆಟೋ ಚಾಲಕನೊಬ್ಬನನ್ನು ಮಚ್ಚಿನಿಂದ ಕೊಚ್ಚಿ ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ದುರ್ಘಟನೆ ನಗರದ ಮಹಾಲಕ್ಷ್ಮಿ ಲೇಔಟ್ ಮೆಟ್ರೋ ನಿಲ್ದಾಣದ ಬಳಿ ಇಂದು ಮುಂಜಾನೆ ನಡೆದಿದೆ.
ಶ್ರೀರಾಮಪುರದ ಆಟೋ ಚಾಲಕ ಆಂಡ್ರೀವ್(೨೫)ಕೊಲೆಯಾದವರು ಮುಂಜಾನೆ ೩.೩೦ರ ವೇಲೆ ಐದಾರು ಮಂದಿ ದುಷ್ಕರ್ಮಿಗಳು ಆಂಡ್ರೀವ್‌ನನ್ನು ಮಹಾಲಕ್ಷ್ಮಿ ಲೇಔಟ್ ಮೆಟ್ರೋ ನಿಲ್ದಾಣದ ಬಳಿ ಕರೆತಂದು ದೇಹದ ಹಲವು ಭಾಗಗಳಿಗೆ ಮಚ್ಚಿನಿಂದ ಹೊಡೆದು ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆಗೈದು ಪರಾರಿಯಾಗಿದ್ದಾರೆ.
ಮೆಟ್ರೋ ನಿಲ್ದಾಣಕ್ಕೆ ಹೋಗುತ್ತಿದ್ದ ಸ್ಥಳೀಯರು ಮೃತದೇಹವನ್ನು ನೋಡಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದು ಸ್ಥಳಕ್ಕೆ ಧಾವಿಸಿರುವ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪರಿಶೀಳನೆ ನಡೆಸಿದ್ದಾರೆ.ಕೊಲೆಯಾದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಯಾರೂ ಇಲ್ಲದ ಆಟೋ ಪತ್ತೆಯಾಗಿದ್ದು ಅದನ್ನು ಪರಿಶೀಲನೆ ನಡೆಸಿದಾಗ ಅದು ಬೇರೊಬ್ಬರ ಹೆಸರಿನಲ್ಲಿರುವುದು ಪತ್ತೆಯಾಗಿದೆ.
ಆಂಡ್ರೀವ್‌ನನ್ನು ಬೇರೆ ಕಡೆ ಕೊಲೆಮಾಡಿ ಮೃತದೇಹವನ್ನು ಮಹಾಲಕ್ಷ್ಮಿ ಲೇಔಟ್ ಮೆಟ್ರೋ ನಿಲ್ದಾಣದ ಬಳಿ ಎಸೆದಿದ್ದಾರೋ ಇಲ್ಲವೇ ಇಲ್ಲಿಗೆ ಕರೆತಂದು ಕೊಲೆ ಮಾಡಿದ್ದಾರೋ ಎನ್ನುವುದು ಕೊಡ ಖಚಿತವಾಗಿಲ್ಲ ಅಲ್ಲದೇ ಕೊಲೆಗೆ ಕಾರಣಗಳು ತಿಳಿದುಬಂದಿಲ್ಲ ಪ್ರಕರಣ ದಾಖಲಿಸಿರುವ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಮೃತಹೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಚೇತನ್‌ಸಿಂಗ ರಾತೋರ್ ತಿಳಿಸಿದ್ದಾರೆ.

Leave a Comment