ಆಟೋಮ್ಯಾಟಿಕ್ ಸಿಗ್ನಲ್ ಮಾಸಾಂತ್ಯಕ್ಕೆ ಪೂರ್ಣ

ಬೆಂಗಳೂರು, ಫೆ. ೧೨- ಬೈಯಪನಹಳ್ಳಿ-ವೈಟ್‌ಫೀಲ್ಡ್ ರೈಲು ನಿಲ್ದಾಣದ ನಡುವಿನ ಸ್ವಯಂಚಾಲಿತ ಸಿಗ್ನಲ್ ವ್ಯವಸ್ಥೆ ಅಳವಡಿಕೆ ಮಾಸಾಂತ್ಯಕ್ಕೆ ಪೂರ್ಣಗೊಳ್ಳಲಿದೆ.
ಈ ಮಾರ್ಗದ ಬೆಂಗಳೂರು ದಂಡು, ಬೆಂಗಳೂರು ಪೂರ್ವ, ಬೈಯಪ್ಪನಹಳ್ಳಿ, ಕೃಷ್ಣರಾಜಪುರಂ, ಹೂಡಿ, ವೈಟ್‌ಫೀಲ್ಡ್ ರೈಲು ನಿಲ್ದಾಣಗಳಿದ್ದು, ಇದೀಗ ಮೊದಲ ಹಂತದಲ್ಲಿ ದಂಡು ಬೈಯಪ್ಪನಹಳ್ಳಿ ಸಿಗ್ನಲ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದೆ.
ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ದಂಡು ರೈಲ್ವೆ ನಿಲ್ದಾಣ-ಬೈಯಪ್ಪನಹಳ್ಳಿ, 6 ಕಿ.ಮೀ ಅಂತರವಿದೆ.
19.75 ಕೋಟಿ ರೂ. ವೆಚ್ಚದಲ್ಲಿ ನಗರದ ದಂಡು ರೈಲ್ವೆ ನಿಲ್ದಾಣ ವೈಟ್‌ಫೀಲ್ಡ್ ನಡುವೆ ಸ್ವಯಂಚಾಲಿತ ಸಿಗ್ನಲ್ ವ್ಯವಸ್ಥೆ ಅಳವಡಿಸಲು 2013-14ನೇ ಸಾಲಿನಲ್ಲಿ ಯೋಜನೆ ರೂಪಿಸಲಾಗಿತ್ತು.
ಇದೀಗ ಕಾಮಗಾರಿ ಮಾಸಾಂತ್ಯಕ್ಕೆ ಪೂರ್ಣಗೊಳ್ಳಲಿದೆ. ಪ್ರತಿನಿತ್ಯ ಬೆಂಗಳೂರು-ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ಮಾರ್ಗದಲ್ಲಿ 86 ರೈಲುಗಳು ಪ್ರಸ್ತುತ ಸಂಚರಿಸುತ್ತಿವೆ.

Leave a Comment