ಆಟೋಗಳ ಡಿಕ್ಕಿ ಓರ್ವನಿಗೆ ತೀವ್ರ ಗಾಯ

ಬಳ್ಳಾರಿ, ಸೆ.3: ನಗರದ ಕನಕದುರ್ಗಮ್ಮ ದೇವಸ್ಥಾನ ಬಳಿಯ ಅಂಡರ್ ಬ್ರಿಡ್ಜ್ ನಲ್ಲಿ ಎರಡು ಆಟೋಗಳು ಪರಸ್ಪರ ಡಿಕ್ಕಿ ಸಂಭವಿಸಿ ಓರ್ವ ಚಾಲಕ ತೀವ್ರವಾಗಿ ಗಾಯಗೊಂಡಿದ್ದು ವಿಮ್ಸ್ ಗೆ ದಾಖಲಿಸಲಾಗಿದೆ.

ಬೆಳಿಗ್ಗೆ 7.30ರ ಸುಮಾರಿಗೆ ಎರಡು ಆಟೋಗಳು ಡಿಕ್ಕಿ ಹೊಡೆದವು. ಲಗೇಜ್ ಆಟೋ ಡಿಕ್ಕಿ ಹೊಡೆದು ಹಾಗೇ ಹೋಯಿತು. ಆದರೆ ಪ್ಯಾಸೆಂಜರ್ ಆಟೋದ ಚಾಲಕ ಆಟೋದ ಮುಂಭಾಗದ ಗ್ಯಾಸ್ ಒಡೆದು ಮುಂದಕ್ಕೆ ಬಿದ್ದು ಪ್ರಜ್ಞೆ ತಪ್ಪಿ ಬಿದ್ದಿದ್ದ ಜನ ಅದನ್ನು ನೋಡಿ ಹಾಗೇ ಹೋಗುತ್ತಿದ್ದರು. ಆದರೆ ಖಾಸಗಿ ಚಾನೆಲ್ ವೀಡಿಯೋಗ್ರಾಫರ್ ದುರ್ಗೇಶ್ ಗಾಯಗೊಂಡ ಚಾಲಕನನ್ನು ಮತ್ತೊಬ್ಬರ ಸಹಾಯದಿಂದ ಬೇರೊಂದು ಆಟೋದ ಮೂಲಕ ವಿಮ್ಸ್ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದರು.

Leave a Comment