ಆಟದ ಮೈದಾನ 2 ತಿಂಗಳಲ್ಲಿ ಮೇಲ್ದರ್ಜೆಗೆ- ಜಮೀರ್

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಜ. ೧೨- ಚಾಮರಾಜಪೇಟೆಯಲ್ಲಿರುವ ಕೋಟೆ ಪ್ರೌಢಶಾಲೆಗೆ ಕುಡಿಯುವ ನೀರಿನ ವ್ಯವಸ್ಥೆ ಸ್ಮಾರ್ಟ್ ಕ್ಲಾಸ್‌ಗಾಗಿ ಡಿಜಿಟಲ್ ಮತ್ತು ಆಡಿಯೋ ವ್ಯವಸ್ಥೆ ಆಟದ ಮೈದಾನವನ್ನು ತರುವ ಸರ್ವಋತು ಆಟದ ಮೈದಾನವನ್ನಾಗಿ ಎರಡು ತಿಂಗಳೊಳಗೆ ಮೇಲ್ದರ್ಜೇಗೇರಿಸಲಾಗುವುದು ಎಂದು ಆಹಾರ ಸಚಿವ ಜಮೀರ್ ಅಹ್ಮದ್ ಖಾನ್ ಅವರು ತಿಳಿಸಿದರು.
ಹಳೆ ಕೋಟೆಯ ಸರ್ಕಾರಿ ಕೋಟೆ ಪ್ರೌಢಶಾಲೆಯಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಡಾ. ಎಚ್.ಎಸ್. ದೊರೆಸ್ವಾಮಿ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದ ಅವರು ಸೋಮವಾರದಿಂದಲೇ ಬೋರ್‌ವೆಲ್ ಕೊರೆಸಲು ಆದೇಶ ನೀಡುವುದಾಗಿ ತಿಳಿಸಿದರು.
ಶಾಲೆಯಲ್ಲಿ ಮಳೆ ನೀರು ಕೊಯ್ಲು ಘಟಕ, ಕ್ರೀಡಾಂಗಣ ಸುತ್ತ ಪ್ರೇಕ್ಷಕರ ಗ್ಯಾಲರಿ ನಿರ್ಮಾಣ ಹಾಗೂ ಸಭಾಂಗಣಕ್ಕೆ ಕಾಯಂ ಹಾಸನ ವ್ಯವಸ್ಥೆ ಸೇರಿದಂತೆ ಶತಮಾನದ ಇತಿಹಾಸ ಪ್ರಸಿದ್ಧ ಕೋಟೆ ಪ್ರೌಢಶಾಲೆಗೆ ಎಲ್ಲಾ ಮೂಲಭೌತ ಸೌಕರ್ಯಗಳನ್ನು ಕಲ್ಪಿಸಿ ಕೊಡುವುದಾಗಿ ಭರವಸೆ ನೀಡಿದರು.
ಕೋಟೆ ಪ್ರೌಢಶಾಲೆಯಲ್ಲಿ ವಿಜ್ಞಾನ ಪ್ರಯೋಗಾಲಯ, ಸಮವಸ್ತ್ರ ಸಹಿತ ಬ್ಯಾಂಡ್ ಸೆಟ್, ಡಂಬಲ್ಸ್, ಲೆಜಿಮ್ ಸೇರಿದಂತೆ ಕ್ರೀಡಾ ಉಪಕರಣಗಳನ್ನು ಒದಗಿಸಿ ಕೊಡುವುದಾಗಿ ಶಾಲೆಯ ಶಿಕ್ಷಕ ವರ್ಗಕ್ಕೆ ಆಶ್ವಾಸನೆ ನೀಡಿದರು.
ಸಮಾರಂಭದಲ್ಲಿ ಬಿಬಿಎಂಪಿ ಸದಸ್ಯೆ ಕೋಕಿಲ ಚಂದ್ರಶೇಖರ್, ಮಾಜಿ ಪಾಲಿಕೆ ಸದಸ್ಯ ಚಂದ್ರಶೇಖರ್, (ಅಪೊಡೋ) ಶಾಲೆಯ ಪ್ರಾಂಶುಪಾಲರಾದ ಎಸ್.ಸಿ. ಚಂದ್ರಶೇಖರ್,  ಕ್ಷೇತ್ರ ಶಿಕ್ಷಣಾಧಿಕಾರಿ ದಕ್ಷಿಣ ವಲಯ -2. ಲೋಹಿತೇಶ್ವರ ರೆಡ್ಡಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಲಕ್ಷ್ಮಣದಾಸ್, ಬೆಂಗಳೂರು ಹಾರಾಲಾಜಿಸ್ಟಿ, ಅಸೋಸಿಯೇಷನ್ ಅಧ್ಯಕ್ಷ ಹೆಚ್.ಆರ್.ವಾಮನ ಗುಪ್ತ, ರಾಮಸೇವಾ ಮಂಡಳಿಯ ಎನ್. ವರದರಾಜ್, ಮತ್ತಿತರರು ಉಪಸ್ಥಿತರಿದ್ದರು.

Leave a Comment