ಆಟಗಾರರು ಜವಾಬ್ದಾರಿಯುತ ಆಟವಾಡಿದ್ದಾರೆ: ವಿರಾಟ್

ರಾಂಚಿ, ಅ.22 – ತಂಡದ ಪ್ರತಿ ಸದಸ್ಯ ಪ್ರಾಮಾಣಿಕ ಹಾಗೂ ಉತ್ಸಾಹದಿಂದ ಆಡಿದ್ದರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಭಾರತದ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
“ಆರಂಭದಿಂದಲೂ ಪ್ರಾಮಾಣಿಕತೆ ಹಾಗೂ ಉತ್ಸಾಹದಿಂದ ಆಡಿದ್ದೇವೆ. ಆದ್ದರಿಂದಲೇ ಈ ರೀತಿ ಪರಿಣಾಮ ಕಾಣಲು ಸಾಧ್ಯ. ನಾವು ಎಲ್ಲಿಯವರೆಗೂ ಈ ರೀತಿ ಆಡುತ್ತಲೇ ಇರುತ್ತೇವೊ ಈ ತರಹನಾದ ಫಲಿತಾಂಶ ಸಿಗುತ್ತದೆ. ಟೆಸ್ಟ್ ನಲ್ಲಿ ವಿಶ್ವದ ಬಲಿಷ್ಠ ತಂಡ ಕಟ್ಟುವ ಇರಾದೆ ನಮ್ಮದಾಗಿದೆ” ಎಂದಿದ್ದಾರೆ.

“ತಂಡ ಹೇಗೆ ಪ್ರದರ್ಶನ ನೀಡಿದೆ ಎಂಬುದನ್ನು ನೀವೆಲ್ಲಾ ನೋಡಿದ್ದೀರಿ. ಹೆಚ್ಚು ಸಹಾಯಕ ವಿಲ್ಲದ ಪಿಚ್ ಗಳಲ್ಲೂ ನಮ್ಮ ಆಟ ಭರ್ಜರಿಯಾಗಿ ಇತ್ತು” ಎಂದು ವಿರಾಟ್ ಹೇಳಿದ್ದಾರೆ.

ಈ ಸರಣಿಯಲ್ಲಿ ಬೌಲರ್ ಗಳು ಭರ್ಜರಿ ಪ್ರದರ್ಶನ ನೀಡಿದ್ದು ಎದುರಾಳಿ ತಂಡಕ್ಕೆ ಕಾಟ ನೀಡಿದ್ದಾರೆ. ವೇಗದ ಬೌಲರ್ ಗಳಾದ ಉಮೇಶ್ ಯಾದವ್ ಹಾಗೂ ಮೊಹಮ್ಮದ್ ಶಮಿ 26 ವಿಕೆಟ್ ಕಬಳಿಸಿದರೆ, ಸ್ಪಿನ್ ಬೌಲರ್ ಗಳು 34 ವಿಕೆಟ್ ಕಿತ್ತಿದ್ದಾರೆ.

Leave a Comment