ಆಟಗಾರನಾಗಿರುವುದೇ ಕಠಿಣ: ಸೌರವ್ ಗಂಗೂಲಿ

ಮುಂಬೈ.ಜ.14. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಖ್ಯಸ್ಥರಾಗಿರುವ ಸೌರವ್ ಗಂಗೂಲಿ, ಆಡಳಿತಗಾರನಾಗಿ ಈಗ ಇರುವುದಕ್ಕಿಂತ ಆಟಗಾರನಾಗಿ ಆಡುತ್ತಿದ್ದ ಸಮಯವೇ ಅತ್ಯಂತ ಕಠಿಣವಾಗಿತ್ತು ಎಂದು ಹೇಳಿಕೊಂಡಿದ್ದಾರೆ.
ಇತ್ತಿಚೆಗೆ ಸ್ಪೋರ್ಟ್ಸ್‌ಸ್ಟಾರ್‌ ಏಸಸ್‌ ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಗಂಗೂಲಿ, ‘ಒತ್ತಡದ ನಡುವೆ ಆಡುತ್ತಿದ್ದುದು ಕಠಿಣವಾಗಿತ್ತು. ಯಾಕೆಂದರೆ ಬ್ಯಾಟಿಂಗ್ ಮಾಡುವಾಗ ಇರುತ್ತಿದ್ದುದು ಒಂದೇ ಅವಕಾಶವಾದರಿಂದ ಅದು ಸವಾಲಾಗಿತ್ತು. ಒಂದವೇಳೆ ನಾನೀಗ ಏನಾದರೂ ತಪ್ಪು ಮಾಡಿದೆ. ಮತ್ತೆ ಅದನ್ನು ತಿದ್ದಿಕೊಳ್ಳಬಹುದು’ ಎಂದು ಹೇಳಿದ್ದಾರೆ.ನಮ್ಮ ಕಾಲಕ್ಕಿಂತ ಈಗ ಆಟವು ಬದಲಾಗುತ್ತಿರುವ ವೇಗ ಹೆಚ್ಚಾಗಿದೆ ಎಂದೂ ಅಭಿಪ್ರಾಯಪಟ್ಟಿದ್ದಾರೆ.
ಬ್ಯಾಟಿಂಗ್ ದಿಗ್ಗಜ ಸುನೀಲ್‌ ಗವಾಸ್ಕರ್‌ ಅವರೂ ಗಂಗೂಲಿ ಮಾತನ್ನೇ ಪುನರುಚ್ಛರಿಸಿದ್ದಾರೆ. ‘ಹೌದು, 2014ರಲ್ಲಿ ಸುಪ್ರಿಂ ಕೋರ್ಟ್‌ ಬಿಸಿಸಿಐ ಅಧ್ಯಕ್ಷರನ್ನಾಗಿ ನನ್ನನ್ನು ನೇಮಿಸಿತ್ತು. ಅದನ್ನು ಸುಲಭವಾಗಿ ನಿರ್ವಹಿಸಿದ್ದೆ’ ಎಂದಿದ್ದಾರೆ.
ಈಗಿನ ಆಟಗಾರರು ನಮ್ಮ ಕಾಲದವರಿಗಿಂತ ಹೆಚ್ಚು ಫಿಟ್ ಆಗಿದ್ದಾರೆ. ಸಾಕಷ್ಟು ದೂರಕ್ಕೆ ಚೆಂಡನ್ನು ಹೊಡೆಯುವಷ್ಟು ದೈಕಿವಾಗಿ ಮತ್ತು ಮಾನಸಿಕವಾಗಿ ಸಮರ್ಥರಿದ್ದಾರೆ ಎನಿಸುತ್ತದೆ’ ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಭಾರತ ಟೆಸ್ಟ್‌ ಕ್ರಿಕೆಟ್ ತಂಡಕ್ಕೆ ವರ್ಷದ ತಂಡ ಪ್ರಶಸ್ತಿ ನೀಡಲಾಯಿತು.

Leave a Comment