ಆಜಾದ್ ನಗರದಲ್ಲಿ ಒಣಗಲು ದಿನ ಆಚರಣೆ

ಹುಳಿಯಾರು, ನ. ೧೪- ಪಟ್ಟಣದ ಆಜಾದ್ ನಗರದಲ್ಲಿ ಆರೋಗ್ಯ ಇಲಾಖೆಯಿಂದ ಒಣಗಲು ದಿನ ಆಚರಿಸಲಾಯಿತು.

ಡೆಂಗ್ಯೂ ಮತ್ತು ಚಿಕೂನ್ ಗುನ್ಯಾ ಮತ್ತು ಮಲೇರಿಯ ರೋಗಗಳು ಹರಡುವ ಬಗ್ಗೆ ಇಲ್ಲಿನ ನಿವಾಸಿಗಳಿಗೆ ಮಾಹಿತಿ ನೀಡಲಾಯಿತು. ಸೊಳ್ಳೆಗಳ ನಿಯಂತ್ರಣಕ್ಕೆ ಪ್ರತಿ ವಾರ ಮನೆಯಲ್ಲಿ ಇರುವ ತೊಟ್ಟಿ, ಡ್ರಂ, ಬ್ಯಾರಲ್, ಸಂಪು ಇತ್ಯಾದಿ ನೀರು ಸಂಗ್ರಹ ವಸ್ತುಗಳನ್ನು ಉಜ್ಜಿ ತೊಳೆದು ನಂತರ ನೀರು ತುಂಬುವಂತೆ ಅರಿವು ಮೂಡಿಸಲಾಯಿತು.

ಅಲ್ಲದೆ ಮನೆಯ ಸುತ್ತಮುತ್ತ ಎಳನೀರಿನ ಚಿಪ್ಪು, ಟೈಯರ್, ಪ್ಲಾಸ್ಟಿಕ್ ಲೋಟಗಳಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳುವಂತೆಯೂ ಸಾಧ್ಯವಾದರೆ ಬಡಾವಣೆಯ ನಿವಾಸಿಗಳು ವಾರಕ್ಕೊಮ್ಮೆ ಶ್ರಮದಾನ ಶಿಬಿರ ಏರ್ಪಡಿಸಿ ತಮ್ಮ ತಮ್ಮ ಬಡಾವಣೆಗಳನ್ನು ಸ್ವಚ್ಚಗೊಳಿಸಿಕೊಳ್ಳುವಂತೆ ಹೇಳಿದರು.

ಮನೆಗಳಲ್ಲಿ ಸೊಳ್ಳೆ ಪರದೆಯನ್ನು ಉಪಯೋಗಿಸಿ ಮತ್ತು ಸಂಜೆ ಹೊತ್ತು ಬೇವಿನಸೊಪ್ಪಿನ ಹೊಗೆ ಹಾಕಿದರೆ ಸೊಳ್ಳೆ ಹೊರ ಹೋಗುತ್ತವೆ ಎಂದು ಆಜಾದ್ ನಗರದ ಗ್ರಾಮಸ್ಥರಿಗೆ ಅರಿವು ಮೂಡಿಸಲಾಯಿತು.

ಇದೇ ಸಂದರ್ಭದಲ್ಲಿ ಆಜಾದ್ ನಗರದ ನಿವಾಸಿಗಳಾದ ತಾಸಿನಾಬಾನು, ದಿಲ್ಷದ್, ಸುಮನುನ್ನೀಸಾ, ಸಾಬಿರ ಜಾಫರ್ ಸಾಧಿಕ್, ಸಾಧು ಮತ್ತಿತರರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯೆ ಹಸಿನಾಬಾನು, ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆ ಅಬಿದಾಬಿ, ಅಂಗನವಾಡಿ ಕಾರ್ಯಕರ್ತೆ ಪೂರ್ಣಮ್ಮ ಉಪಸ್ಥಿತರಿದ್ದರು.

Leave a Comment