ಆಘಾತಕ್ಕೆ ಬಿರುಸಿನ ಚಿತ್ರೀಕರಣ

ಆಘಾತ ಎಂಬ ಚಿತ್ರ ಈ ಮೊದಲೇ ಬಂದಿತ್ತು. ಈಗ ಅದೇ ಹೆಸರಿನ ಚಿತ್ರವನ್ನು ಜಿ.ಪಿ.ಪ್ರಕಾಶ್ ನಿರ್ಮಿಸುತ್ತಿದ್ದಾರೆ. ಶಿವಾಜಿ ನಿರ್ಮಾಣ ಮೇಲ್ವಿಚಾರಣೆಯಿರುವ ಈ ಆಘಾತ ಒಂದು ಥ್ರಿಲ್ಲರ್ ಚಿತ್ರವಂತೆ.

ಚಿತ್ರಕ್ಕೆ ಆಕ್ಷನ್‌ಕಟ್ ಹೇಳಿದ್ದಾರೆ ಜೂಮ್ ರವಿ. ಮೈಸೂರಿನ ಸುತ್ತಮುತ್ತ ಚಿತ್ರೀಕರಣ ನಡೆಯುತ್ತಿರುವ ಆಘಾತ ಈಗಾಗಲೇ ಶೇಕಡ ಅರವತ್ತರಷ್ಟು ಶೂಟಿಂಗ್ ಪೂರ್ಣಗೊಳಿಸಿಕೊಂಡಿದೆ. ಮೇ ಹೊತ್ತಿಗೆ ಚಿತ್ರವನ್ನು ತೆರೆಗೆ ತರಲು ಯೋಜಸಲಾಗುತ್ತಿದೆ.

ಇದೊಂದು ಥ್ರಿಲ್ಲರ್‌ಕಮ್ ಸಸ್ಪೆನ್ಸ್ ಚಿತ್ರವಾದರೂ ಇದರಲ್ಲಿ ಯಾವುದೇ ರೀತಿಯ ಆಕ್ಷನ್ ದೃಶ್ಯಗಳಾಗಲಿ, ಫೈಟ್ಸ್‌ಗಳಾಗಲಿ ಇಲ್ಲ. ಒಂದು ಮನೆಯೊಳಗೇ ನಡೆಯುವ ಕಥೆ ಹೆಣೆದಿದ್ದೇವೆ. ಆ ಮನೆಯಲಿ ಒಬ್ಬರ ಹಿಂದೊಬ್ಬರಂತೆ ಮೂರುಜನರ ಕೊಲೆಯಾದಾಗ ಪೊಲೀಸ್ ತನಿಖೆ ಶುರುವಾಗುತ್ತದೆ.

ಮರ್ಡರ್ ಮಿಸ್ಟರಿ ಓಪನ್‌ಆಗುತ್ತದೆ ಎಂದು ಚಿತ್ರ ಕುರಿತಂತೆ ತಿಳಿಸಿರುವ  ನಿರ್ದೇಶಕ ರವಿ ಫೈಟ್ಸ್ ಮಾತ್ರವಲ್ಲ, ಹಾಡು ಇಲ್ಲದೇ ಆಘಾತವನ್ನ ನಿರೂಪಿಸಲು ಮುಂದಾಗಿದ್ದಾರೆ. ಅರವಿಂದ್‌ರಾವ್, ಮಂಡ್ಯರಮೇಶ್, ಯತಿರಾಜ್, ಶಿಲ್ಪಾ ಮತ್ತು ಕುರಿ ಬಾಂಡ್‌ರಂಗ ಪ್ರಧಾನ ಪಾತ್ರಗಳಲ್ಲಿದ್ದಾರೆ. ಪುರಂದರ ಹಿನ್ನೆಲೆ ಸಂಗೀತ, ರಾಜ್‌ಕಡೂರ್ ಛಾಯಾಗ್ರಾಹಣವಿದೆ.

Leave a Comment