“ಆಗಸ್ಟ್ 3ರಂದು ಬಸವ ಜಯಂತ್ಯೋತ್ಸವ

ಕೆ.ಆರ್.ಪೇಟೆ, ಜೂ.29: ತಾಲೂಕು ವೀರಶೈವ-ಲಿಂಗಾಯಿತ ಮಹಾಸಭಾ ಆಗಸ್ಟ್ 3ರಂದು ಪಟ್ಟಣದ ಶ್ರೀರಂಗ ಚಿತ್ರಮಂದಿರದ ಆವರಣದಲ್ಲಿ ಬಸವ ಜಯಂತೋತ್ಸವ ಸಮಾರಂಭ, ತಾಲೂಕು ಮಟ್ಟದ ಬಸವ ಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾ ಅಧ್ಯಕ್ಷ ವಿ.ಎಸ್.ಧನಂಜಯ ಅವರು ತಿಳಿಸಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ವೀರಶೈವ-ಲಿಂಗಾಯಿತ ಮಹಾಸಭಾ ಪದಾಧಿಕಾರಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಾರ್ಯಕ್ರಮಕ್ಕೆ ವೀರಶೈವ ಸಮಾಜ ಸೇರಿದಂತೆ ಎಲ್ಲಾ ವರ್ಗದ ಬೆಂಬಲ ಅಗತ್ಯವಿದೆ ಎಂದು ಹೇಳಿದರು.
ತಾಲೂಕು ಮಟ್ಟದ ಅದ್ದೂರಿ ಬಸವ ಜಯಂತೋತ್ಸವವನ್ನು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಉದ್ಘಾಟನೆ ಮಾಡುವರು. ಸಿದ್ದಗಂಗಾ ಮಠದ ಶ್ರೀಗಳು, ಸುತ್ತೂರು ಮಠದ ಶ್ರೀಗಳು, ಬಾಳೆಹೊನ್ನೂರು ರಂಬಾಪುರಿ ಶ್ರೀಗಳು, ತೆಂಡೇಕೆರೆ ಶ್ರೀಗಳು, ತ್ರೀನೇತ್ರ ಸ್ವಾಮೀಜಿಗಳು, ಸೇರಿದಂತೆ ವಿವಿಧ ಮಠಾಧೀಶರು ದಿವ್ಯ ಸಾನಿಧ್ಯ ವಹಿಸುವರು. ರಾಷ್ಟ್ರೀಯ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ, ರಾಜ್ಯಾಧ್ಯಕ್ಷ ತಿಪ್ಪಣ್ಣ, ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು, ಸಂಸದೆ ಸುಮಲತಾ ಅಂಬರೀಶ್, ಚಿತ್ರನಟ ದೊಡ್ಡಣ್ಣ, ಶಾಸಕ ಕೆ.ಸಿ.ನಾರಾಯಣಗೌಡ, ಮಾಜಿ ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಎಸ್.ಸಿ.ಅರವಿಂದ್, ತಾಲೂಕಿನ ಮಾಜಿ ಸ್ಪೀಕರ್ ಕೃಷ್ಣ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ತಾಲೂಕು ಬಿಜೆಪಿ ಅಧ್ಯಕ್ಷ ಬೂಕಹಳ್ಳಿ ಮಂಜು ಸೇರಿದಂತೆ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಹಾಗಾಗಿ ಆ.3ರಂದು ತಾಲೂಕಿನ ವೀರಶೈವ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ವಿ.ಎಸ್.ಧನಂಜಯ ಅವರು ಮನವಿ ಮಾಡಿದ್ದಾರೆ.
ಸಭೆಯಲ್ಲಿ ತಾಲೂಕು ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷ ತೋಟಪ್ಪಶೆಟ್ಟಿ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸುಬ್ರಹ್ಮಣ್ಯ, ತಾಲೂಕು ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿ ಶಿವಶಂಕರ್, ಕೋಶಾಧ್ಯಕ್ಷ(ಖಜಾಂಚಿ) ಶಿವಮೂರ್ತಿ, ತಾಲೂಕು ಸಂಘಟನಾ ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ತಾಲೂಕು ಘಟಕದ ಉಪಾಧ್ಯಕ್ಷರಾದ ನಂಜುಂಡಪ್ಪ, ಡಿ.ಸಿ.ಕುಮಾರ್, ರಾಣಿ, ಕಾರ್ಯದರ್ಶಿಗಳಾದ ಶಿವಕುಮಾರ್, ಜ್ಯೋತಿ, ಪುಷ್ಪ, ಮಹಿಳಾ ವಿಭಾಗದ ಕಾರ್ಯಚದರ್ಶಿ ಮೀನಾಕ್ಷಿಲಿಂಗರಾಜು, ನಿರ್ದೇಶಕರಾದ ಈರಾಜಮ್ಮ, ಹರೀಶ್, ಯಡಿಯೂರಪ್ಪ, ವೀರಪ್ಪ, ಕನಕರಾಜು, ಚಂದ್ರಶೇಖರ್, ತಾಲೂಕು ಯುವ ಘಟಕದ ಕಾರ್ಯದರ್ಶಿ ತೀರ್ಥೇಶ್, ತಾಲೂಕು ವೀರಶೈವ ಹಿತರಕ್ಷಣಾ ಯುವ ಘಟಕದ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಗಂಜಿಗೆರೆ ವಿಜಯಕುಮಾರ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

Leave a Comment