ಆಕ್ಸ್‌ಪರ್ಡ್ ನಂ.೧ ವಿ.ವಿ.

ನವದೆಹಲಿ, ಸೆ. ೧೨- ವಿಶ್ವದ ಅತ್ಯುತ್ತಮ ೩೦೦ ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ಈ ಬಾರಿ ಭಾರತದ ಯಾವುದೇ ವಿಶ್ವವಿದ್ಯಾಲಯ ಯಾವುದೇ ಸ್ಥಾನ ಪಡೆದಿಲ್ಲ. ೭ ವರ್ಷಗಳ ನಂತರ ಇದೇ ಮೊದಲ ಬಾರಿಗೆ ಉನ್ನತ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಭಾರತ ಸ್ಥಾನ ಕಳೆದುಕೊಂಡಿದೆ.
೨೦೨೦ ಸಾಲಿನ ವಿಶ್ವದ ೩೦೦ ಅತ್ಯುತ್ತಮ ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ರೊಪಾರ್‌ನ ಭಾರತೀಯ ತಂತ್ರಜ್ಞಾನ ಸಂಸ್ಥೆಗಳು ಕ್ರಮವಾಗಿ ೩೦೧ ಮತ್ತು ೩೫೦ನೇ ಸ್ಥಾನದಲ್ಲಿವೆ. ಕಳೆದ ವರ್ಷ ಇವು ೨೫೧-೩೦೦ರ ಒಳಗಿನ ಸ್ಥಾನದಲ್ಲಿದ್ದವು. ಈ ಸಾಲಿನಲ್ಲಿ ೫೦ ಸ್ಥಾನಗಳಷ್ಟು ಹಿಂದೆ ಬಿದ್ದಿದೆ. ಮುಂಬೈ, ದೆಹಲಿ ಮತ್ತು ಖರಗ್‌ಪುರ್ ಐಐಟಿಗಳು ೪೦೧-೫೦೦ರ ಒಳಗಿನ ಸ್ಥಾನದಲ್ಲಿವೆ.
ವಿಶ್ವದ ಅತ್ಯುನ್ನತ ವಿಶ್ವವಿದ್ಯಾನಿಲಯಗಳ ೨೦೨೦ ಸಾಲಿನಲ್ಲಿ ಆಕ್ಸ್‌ಪರ್ಡ್ ವಿಶ್ವವಿದ್ಯಾನಿಲಯ ಮೊದಲ ಸ್ಥಾನದಲ್ಲಿವೆ. ಕಳೆದ ೪ ವರ್ಷಗಳಿಂದ ಕ್ರಮವಾಗಿ ಇದು ಮೊದಲ ಸ್ಥಾನವನ್ನು ಉಳಿಸಿಕೊಂಡು ಬಂದಿದೆ.
ವಿಶ್ವ ಅತ್ಯುತ್ತಮ ೧೦ ವಿಶ್ವವಿದ್ಯಾನಿಲಯಗಳು ಇಂತಿವೆ.
ಆಕ್ಸ್‌ಪರ್ಡ್ ವಿಶ್ವವಿದ್ಯಾನಿಲಯ, ಕ್ಯಾಲಿಫೋರ್ನಿಯಾ ಇಸ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ, ಕೇಂಬ್ರಿಜ್ಡ್ ವಿಶ್ವವಿದ್ಯಾನಿಲಯ, ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾನಿಲಯ, ಮಾಸಾಸುಸೆಟ್ ತಂತ್ರಜ್ಞಾನ ಸಂಸ್ಥೆ, ಪ್ರಿನ್ಸ್‌ಟೆನ್ ವಿಶ್ವವಿದ್ಯಾನಿಲಯ,. ಹಾರ್ಡವರ್ಡ್ ವಿಶ್ವವಿದ್ಯಾನಿಲಯ, ಯಾಲೆ ವಿಶ್ವವಿದ್ಯಾನಿಲಯ, ಚಿಕಾಗೋ ವಿಶ್ವವಿದ್ಯಾನಿಲಯ, ಲಂಡನ್ ಇಂಪೀರಿಯಲ್ ಕಾಲೇಜು ಸೇರಿವೆ ಎಂದು ೨೦೨೦ನೇ ಸಾಲಿನ ಅತ್ಯುತ್ತಮ ವಿಶ್ವವಿದ್ಯಾನಿಲಯಗಳ ಪಟ್ಟಿ ತಯಾರಿಸಿರುವ ಸಂಸ್ಥೆ ಮುಖ್ಯಸ್ಥ ಫಿಲ್ ಬಾಟಿ ಹೇಳಿದ್ದಾರೆ.

Leave a Comment