ಆಕ್ಷನ್ ಥ್ರಿಲ್ಲರ್ ಮಹಿರ

  • ಚಿಕ್ಕನೆಟಕುಂಟೆ ಜಿ. ರಮೇಶ್

ಇತ್ತೀಚೆಗಂತೂ ಕನ್ನಡ ಚಿತ್ರರಂಗಕ್ಕೆ ಪ್ರತಿಭಾವಂತ ತಂತ್ರಜ್ಞರು ಮತ್ತು ಕಲಾವಿದರ ದೊಡ್ಡ ದಂಡೇ ಆಗಮಿಸುತ್ತಿದೆ. ಬರುವವರು ಸುಮ್ಮನೆ ಬರುತ್ತಿಲ್ಲ. ತಮ್ಮೊಂದು ಮತ್ತಷ್ಟು ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಆ ಮೂಲಕ ತಾವೂ ಚಿತ್ರರಂಗದಲ್ಲಿ ಗುರುತಿಸಿಕೊಂಡು ಇತರರನ್ನೂ ಬೆಳೆಸುವ ಪರಿಪಾಠ ಸ್ವಾಗತಾರ್ಹ.

ಮಹಿರ  ಚಿತ್ರ ತನ್ನ ವಿಭಿನ್ನ ಪ್ರಯತ್ನದ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡಿದೆ. ಮಹಿರ ಹಲವು ಪ್ರತಿಭಾವಂತರ ಆಗಮನಕ್ಕೆ ವೇದಿಕೆಯಾಗಿದೆ.ಅದರಲ್ಲಿ ನಿರ್ದೇಶಕ ಮಹೇಶ್ ಗೌಡ, ಕಲಾವಿದರಾದ ವರ್ಜೀನಿಯಾ ರೋಡ್ರಿಗಸ್ ಮತ್ತು ಚೈತ್ರಾಗೆ ಮೊದಲ ಚಿತ್ರ ಇದಾಗಿದೆ.

mahira-photo1

ಇದೀಗ ಇಂತಹುದೇ ಸಾಲಿಗೆ “ಮಹಿರ’ ಸೇರ್ಪಡೆ ಯಾಗಿದೆ. ಇಂಗ್ಲೆಂಡಿನಲ್ಲಿ ಉದ್ಯೋಗದಲ್ಲಿದ್ದ ಮಹೇಶ್ ಗೌಡ ಚೊಚ್ಚಲ  ಬಾರಿಗೆ   ನಿರ್ದೇಶನ ಮಾಡುತ್ತಿರುವ ಚಿತ್ರ. ಈ ಚಿತ್ರದ ಮೂಲಕ ರಂಗಭೂಮಿಯ ಕಲಾವಿದರಾದ ವರ್ಜೀನಿಯಾ ರೊಡ್ರಿಗಸ್ ಮತ್ತು ಚೈತ್ರಾ ಆಚಾರ್ ಅವರನ್ನು ತಮ್ಮೊಂದಿಗೆ ಗಾಂಧಿನಗರಕ್ಕೆ ಪರಿಚಯ ಮಾಡಿಕೊಟ್ಟಿದ್ದಾರೆ ನಿರ್ದೇಶಕರು.

ಅಂದಹಾಗೆ ಈ ಚಿತ್ರಕ್ಕೆ ಇಂಗ್ಲೆಂಡ್ ಸ್ನೇಹಿತರು ಚಿತ್ರಕ್ಕೆ ಬಂಡವಾಳ ಹಾಕಿದ್ದು ಮೊದಲು ಇಂಗ್ಲೆಂಡ್‌ನಲ್ಲಿಯೇ ಚಿತ್ರವನ್ನು  ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಆ ಬಳಿಕ ರಾಜ್ಯದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಮಾಹಿತಿ ನೀಡಿದರು ನಿರ್ದೇಶಕ ಮಹೇಶ್ ಗೌಡ. ಮಹಿರ ಸಂಸ್ಕೃತ ಪದ. ಮಹಿರ ಅಂದರೆ ಹೆಣ್ಣಿನ ಶಕ್ತಿ ಮತ್ತು ಬುದ್ದಿವಂತಿಕೆ ಯಾವುದನ್ನೂ ಬಿಟ್ಟುಕೊಡ ಸ್ವಭಾವದ ಹಿನ್ನೆಲೆ ಹೊಂದಿದೆ. ಇದೊಂದು ತಾಯಿ ಮಗಳ ನಡುವಿ ಬಾಂಧವ್ಯದ ಜೊತೆಗ ಆಕ್ಷನ್ ಥ್ರಿಲ್ಲರ್ ,ಸಾಮಾಜಿಕ ಕಥೆಯನ್ನು ಚಿತ್ರ ಒಳಗೊಂಡಿದೆ.

mahira-photo3ಇಡೀ ಸಿನಿಮಾದಲ್ಲಿ ತಾಯಿ ಮಗಳ ಪಾತ್ರವೇ ಪ್ರಮುಖವಾಗಿದೆ. ಜೊತೆಗ ತನಿಖೆಯ ಹಾದಿಯೂ ಇದೆ. ಚಿತ್ರಕ್ಕಾಗಿ  ವರ್ಜೀನಿಯಾ ಅವರಿಗೆ ಎರಡು ತಿಂಗಳು ತರಬೇತಿ ನೀಡಲಾಗಿದೆ. ಅವರದು ರಂಗಭೂಮಿಯಲ್ಲಿ ದೊಡ್ಡ ಹೆಸರು ಎಂದರು.

ಸದ್ಯ ಚಿತ್ರೀಕರಣ ಮುಗಿದಿದ್ದು ಚಿತ್ರೀಕರಣದ ನಂತರದ ಕೆಲಸದಲ್ಲಿ ನಿರತವಾಗಿದೆ. ಸಾಧ್ಯವಾದರೆ ಇಂಗ್ಲೆಂಡ್ ಜೊತೆಗೆ ಕರ್ನಾಟಕದಲ್ಲಿಯೂ ಚಿತ್ರ ಬಿಡುಗಡೆ ಮಾಡುವ ಸಂಬಂಧ ಎಲ್ಲರೊಂದಿಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ವರ್ಜೀನಿಯಾ ರೊಡ್ರಿಗಸ್, ಮೊದಲ ಚಿತ್ರ. ಪಾತ್ರ ಸಿಕ್ಕಿದ್ದು ಅನಿರೀಕ್ಷಿತ. ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆ.

mahira_153

ಚಿತ್ರ ನೋಡಿ ಹೇಗೆ ಮೂಡಿ ಬಂದಿದೆ ಎನ್ನುವುದನ್ನು ನೀವೇ ಹೇಳಬೇಕು ಎಂದರೆ ನಟಿ ಚೈತ್ರಾ ಮೊದಲ ಚಿತ್ರ ತಂಡದೊಂದಿಗೆ ಸಾಕಷ್ಟು ಕಲಿತಿದ್ದೇನೆ ಉತ್ತಮ ಪಾತ್ರ ಸಿಕ್ಕಿದೆ ಎಂದರು.

ಬಾಲಾಜಿ ಮನೋಹರ್, ಚಿತ್ರದಲ್ಲಿ ತನಿಖಾ ಮುಖ್ಯಸ್ಥನ ಪಾತ್ರ ಎಲ್ಲರಿಗೂ ಚಿತ್ರ ಇಷ್ಟವಾಗಲಿದೆ ಎಂದರೆ ನಟ ರಾಜ್ ಬಿ. ಶೆಟ್ಟಿ, ನನ್ನದು ತನಿಖಾಧಿಕಾರಿಯ ಪಾತ್ರವೇ ಚಿತ್ರ ಹೇಗೆ ಬಂದಿದೆ ಎನ್ನುವುದನ್ನು ಚಿತ್ರ ನೋಡಿ ಹೇಳಬೇಕು ಎಂದರು.ಇದೇ ವೇಳೆ ಚಿತ್ರದ ಟ್ರೈಲರ್ ಮತ್ತು ಟೀಸರ್ ಅನಾವರಣ ಮಾಡಲಾಯಿತು. ಈ ವೇಳೆ ಚಿತ್ರತಂಡದ ಅನೇಕರಿದ್ದರು.

Leave a Comment