ಆಕ್ರಮ ಮಧ್ಯ ಮಾರಾಟ ನಾಲ್ವರ ಬಂಧನ

ಧಾರವಾಡ ಸೆ,12- ಹು-ಧಾ ಪೊಲೀಸ್ ಕಮೀಶ್ನರೇಟ್ ವ್ಯಾಪ್ತಿಯ ಆರ್ಥಿಕ ಮತ್ತು ಮಾದಕ ವಸ್ತುಗಳ ಅಪರಾಧ ಪೊಲೀಸ್ ಠಾಣೆಯ ಸಿಬ್ಬಂದಿ ನಗರದ ವಿವಿಧೆಡೆ ದಾಳಿ ನಡೆಸಿ ಅಕ್ರಮವಾಗಿ ಮಾರುತ್ತಿದ್ದ ಮದ್ಯ ಜಪ್ತಿ ಮಾಡಿ, ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಲಕ್ಷ್ಮೀಸಿಂಗನಕೇರಿಯಲ್ಲಿ ಕೃಷ್ಣಾ ಮೂಕಪ್ಪ ಶಿವಳ್ಳಿ ಎಂಬುವನಿಂದ 7450 ರೂಪಾಯಿ ಮೌಲ್ಯದ ಮದ್ಯ, ಮಣಿಕಿಲ್ಲಾ ಡೋರ ಓಣಿಯಲ್ಲಿ ಶ್ರೀನಿವಾಸ ಮಾರುತಿ ಶಿಂಧೆ ಎಂಬುವನಿಂದ 5704   ರೂಪಾಯಿ ಮೌಲ್ಯದ ಮದ್ಯ, ಹಳಿಯಾಳ ರಸ್ತೆಯಲ್ಲಿನ ಅಶೋಕ ಗಾರ್ಡನ್ ಬಾರ್ ಆಂಡ್ ರೆಸ್ಟೊರೆಂಟ್‍ನಲ್ಲಿ ಉದಯ ವಿಠ್ಠಲ ಶೆಟ್ಟಿ ಎಂಬಾತನಿಂದ 4501 ರೂಪಾಯಿ ಮೌಲ್ಯದ ಮದ್ಯ ಮತ್ತು ಕಲಘಟಗಿ ತಾಲೂಕು ಮಡಕಿಹೊನ್ನಳ್ಳಿ ಗ್ರಾಮದ ಮಂಜುನಾಥ ಸುರೇಶ ಮಾಡಕ್ಕನವರ 36480 ರೂಪಾಯಿ ಮೌಲ್ಯದ ಮದ್ಯ ಸೇರಿದಂತೆ ಒಟ್ಟು 53035 ಮೌಲ್ಯದ ಮದ್ಯವನ್ನು ಜಪ್ತಿ ಮಾಡಿದ್ದಾರೆ.
ಪೊಲೀಸ್ ಆಯುಕ್ತ ಆರ್.ದಿಲೀಪ್ ಅವರ ಮಾರ್ಗದರ್ಶನ ಮತ್ತು ಸಿಸಿಬಿ ಇನ್ಸಪೆಕ್ಟರ್ ಎನ್.ಸಿ.ಕಾಡದೇರಮಠ ಅವರ ನೇತೃತ್ವದಲ್ಲಿ ಎಂ.ಬಿ.ಸಂಗನಾಳಮಠ, ಕೆ.ಸಿ.ಕಟ್ಟಿಮನಿ, ಬಿ.ಎನ್.ಕುರಿ, ಎಸ್.ಕೆ.ಮಾನಕರ, ಆರ್.ವೈ. ಲಕ್ಕಣ್ಣವರ, ಎಸ್.ಜಿ.ಸಿದ್ದಪ್ಪಗೌಡರ, ಮತ್ತು ಎಂ.ಡಿ.ಬಡಿಗೇರ ದಾಳಿ ನಡೆಸಿದ್ದರು.

Leave a Comment