ಆಕಸ್ಮಿಕ ಬೆಂಕಿ ಗುಡಿಸಲು ಭಸ್ಮ ಅಪಾರ ಪ್ರಮಾಣದ ನಷ್ಠ.

ಸಂಜೆವಾಣಿ. ಸಿರುಗುಪ್ಪ, ಅ.12: ನಗರದ ಕೃಷ್ಣ ನಗರದಲ್ಲಿ ಸೂರಿಬಾಬು ಎನ್ನುವವರ ನಿವಾಸ ಮಾಡುತ್ತಿದ್ದ ಗುಡಿಸಲು ಬೆಂಕಿಗೆ ಆಹುತಿಯಾಗಿದ್ದು, ದಾಖಲೆಗಳು ಸೇರಿದಂತೆ ಅಪಾರ ಪ್ರಾಮಣದ ಗೃಹೋಪಕರಣ ವಸ್ತುಗಳು, ಆಭರಣಗಳು ಬೆಂಕಿಗೆ ಆಹುತಿಯಾಗಿದೆ, ಘಟನೆಯ ಸ್ಥಳಕ್ಕೆ ಅಗ್ನಿ ಶಾಮಕ ದಳದ ಮುಖ್ಯಸ್ಥ ಅಡಿವೆಪ್ಪ ನೇತೃತ್ವದ ಸಿಬ್ಬಂದಿಯು ಬೆಂಕಿಯನ್ನು ನಂದಿಸಿದರು.

ಕಾರಣ, ಮನೆಯಲ್ಲಿ ಪೂಜೆಗಾಗಿ ಹಚ್ಚಿದ ದೀಪ ಅಕಸ್ಮಿಕವಾಗಿ ಕೆಳಗೆ ಬಿದ್ದ ಹಿನ್ನಲೆಯಲ್ಲಿ ಗುಡಿಸಲಿನ ಹುಲ್ಲಿಗೆ ಬೆಂಕಿ ತಗುಲಿದ್ದರಿಂದ ಈ ಘಟನೆ ಸಂಬಂವಿಸದೆ. ಘಟನೆಯಲ್ಲಿ ಮನೆಯಲ್ಲಿದ್ದ ಗ್ಯಾಸ್ ಸಿಲೆಂಡರ್ ಸಹ ಸ್ಪೋಟಗೊಂಡ ಹಿನ್ನಲೆಯಲ್ಲಿ ಬೆಂಕಿಯ ತೀವ್ರತೆ ಹೆಚ್ಚಾಗಿದ್ದು ಗುಡಿಸಲು ಸಂಪೂರ್ಣ ಭಸ್ಮವಾಗಿದೆ.

ಘಟನಾ ಸ್ಥಳಕ್ಕೆ ತಹಸೀಲ್ದಾರ್ ದಯಾನಂದಪಾಟೇಲ್ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

 

Leave a Comment