ಆಕಸ್ಮಿಕ ಅಪಘಾತ: ಬೈಕ್ ಸವಾರನಿಗೆ ಗಾಯ

ರಾಯಚೂರು.ಆ.02- ಶಕ್ತಿ ನಗರದ ಕುಕನೂರು ಕ್ರಾಸ್ ಬಳಿ ಡಿಸೆಲ್ ಟ್ಯಾಂಕರ್ ಹಾಗೂ ಬೈಕ್ ನಡುವೆ ಡಿಕ್ಕಿ ಹೊಡೆದ ಘಟನೆ ಇಂದು ಜರುಗಿದೆ.
ಡಿಕ್ಕಿ ಹೊಡೆದ ಪರಿಣಾಮ ಬೈಕ್ ಚಾಲಕನ ಕಾಲು ಮರಿತಗೊಂಡು ಹಿಂಬದಿ ವ್ಯಕ್ತಿಗೆ ಗಾಯವಾಗಿವೆ. ಟ್ಯಾಂಕರ್ ಶಕ್ತಿ ನಗರದತ್ತ ಹಾಗೂ ಬೈಕ್ ಸವಾರನು ರಾಯಚೂರು ಕಡೆಗೆ ತೆರಳುವಾಗ ಮುಖಾಮುಖಿ ಡಿಕ್ಕಿ ಹೊಡೆದಿದ್ದರಿಂದಾಗಿ ಈ ದುರ್ಘಟನೆ ಆಕಸ್ಮಿಕವಾಗಿ ಸಂಭವಿಸಿದೆ.
ಗಾಯಗೊಂಡ ವಾಹನ ಚಾಲಕನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment