ಆಂಧ್ರ ಪ್ರದೇಶದಲ್ಲಿ ಸಂಪೂರ್ಣ, ಶಾಂತಿಯುತ ಬಂದ್

ವಿಜಯವಾಡ.ಫೆ .1-ಆಂಧ್ರ ಪ್ರದೇಶಕ್ಕೆ ಪ್ರತ್ಯೇಕ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಎಡ ಪಕ್ಷಗಳು ಹಾಗೂ ಕಾಂಗ್ರೆಸ್ ಪಕ್ಷಗಳ ಬೆಂಬಲದೊಂದಿಗೆ ಪ್ರತ್ಯೇಕ ಹೊದ ಸದನ್‌ ಸಮಿತಿ (ಪಿಹೆಚ್ಎಸ್ಎಸ್) ಶುಕ್ರವಾರ ಕರೆ ನೀಡಿದ್ದ ಆಂಧ್ರ ಪ್ರದೇಶ ಬಂದ್‌ ಶಾಂತಿಯುತವಾಗಿ ಸಂಪೂರ್ಣ ಯಶಸ್ವಿಯಾಗಿದೆ.

ಬಂದ್‌ ಹಿನ್ನೆಲೆಯಲ್ಲಿ ಎಲ್ಲ ವಾಣಿಜ್ಯ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಕಚೇರಿಗಳು ಮುಚ್ಚಿದ್ದವು.

ಬಂದ್‌ ಯಶಸ್ವಿಗೊಳಿಸುವಂತೆ ಎಡ ಪಕ್ಷಗಳ ಕಾರ್ಯಕರ್ತರು ನಗರಗಳು ಮತ್ತು ಪಟ್ಟಣಗಳ ಮುಖ್ಯ ರಸ್ತೆಗಳು ಮತ್ತು ವಾಣಿಜ್ಯ ಪ್ರದೇಶಗಳಲ್ಲಿ ಮೆರವಣಿಗೆ ನಡೆಸಿದರು.

ಪಿಎಸ್ಎಸ್ಎಸ್ ಸಂಚಾಲಕ ಚಲಸಾನಿ ಶ್ರೀನಿವಾಸ್ ಮತ್ತು ಎಪಿಸಿಸಿ ಅಧ್ಯಕ್ಷ ಎನ್ ರಘುವೀರಾ ರೆಡ್ಡಿ ನಗರದ ಬಸ್ ನಿಲ್ದಾಣದಲ್ಲಿ ಧರಣಿ ನಡೆಸಿದರು.

ರಾಮವರ್ಪಾಡು ಜಂಕ್ಷನ್ ನಲ್ಲಿ ಟಿಡಿಪಿ ಕಾರ್ಯಕರ್ತರು ಧರಣಿ ನಡೆಸಿದರು. ಕಡಪ, ಒಂಗೋಲ್‌, ರಾಜಮಂಡ್ರಿ, ಗುಂಟೂರು, ನೆಲ್ಲೂರು ಮತ್ತು ಕರ್ನೂಲ್ ಮತ್ತು ಇತರ ನಗರಗಳಲ್ಲೂ ಧರಣಿ ನಡೆಸಲಾಯಿತು.  ಪ್ರತಿಭಟನಾಕಾರರು ರಾಜ್ಯ ಸಾರಿಗೆ ಬಸ್‌ಗಳನ್ನು ಡಿಪೊ ದ್ವಾರಗಳಲ್ಲೇ ತಡೆದರು.

ಇದರಿಂದ ಎಲ್ಲ ಮುಖ್ಯ ರಸ್ತೆಗಳು ಮತ್ತು ಆರ್‌ಟಿಸಿ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು. ಬಸ್‌ ಸಂಚಾರ ರದ್ದುಗೊಂಡಿದ್ದರಿಂದ ಜನರು ತೊಂದರೆ ಎದುರಿಸಬೇಕಾಯಿತು.

ಕೇಂದ್ರ ಸರ್ಕಾರ ,ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನಿರಾಕರಿಸಿರುವುದನ್ನು ಪ್ರತಿಭಟಿಸಿ ಬಂದ್‌ಗೆ ಕರೆ ನೀಡಲಾಗಿತ್ತು.   ಆಡಳಿತಾರೂಢ ತೆಲುಗು ದೇಶಂ ಪಕ್ಷ ಸಹ ಬಂದ್‌ಗೆ ಬೆಂಬಲ ನೀಡಿತ್ತು. ಆದರೆ, ಪ್ರಮುಖ ಪ್ರತಿಪಕ್ಷವಾದ ವೈಎಸ್‌ಆರ್‌ ಕಾಂಗ್ರೆಸ್‌ ಮತ್ತು ಜನಸೇನಾ ಬಂದ್ ಬೆಂಬಲಿಸಿರಲಿಲ್ಲ.

Leave a Comment