ಅ. 14 ಕ್ಕೆ ಅನಾವರಣ ಕೃತಿ ಲೋಕಾರ್ಪಣೆ

ದಾವಣಗೆರೆ, ಅ. 11- ವಿಶ್ವಕಲ್ಯಾಣ ಪರಿಸರ ಗ್ರಾಹಕ ಸಾಂಸ್ಕೃತಿಕ ಪರಿಷತ್ ರಿ, ಸಮಗ್ರ ಸಾಹಿತ್ಯ ವೇದಿಕೆ, ನವಚೈತನ್ಯ ಸೇವಾ ಸಂಸ್ಥೆ ಸಹಯೋಗದಲ್ಲಿ ಅ. 14 ರಂದು ಬೆಳಗ್ಗೆ 10-30 ಕ್ಕೆ ನಗರದ ರೋಟರಿ ಬಾಲಭವನದಲ್ಲಿ ಹಿರಿಯ ಸಾಹಿತಿ ಎಸ್.ಮಲ್ಲಿಕಾರ್ಜುನಪ್ಪ ಅವರ ಐತಿಹಾಸಿಕ ಕೃತಿ ಅನಾವರಣ ಲೋಕಾರ್ಪಣೆ, ಮಹಾತ್ಮಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ, ಸನ್ಮಾನ ಹಾಗೂ ಕವಿಗೋಷ್ಟಿ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ನ್ಯಾಯವಾದಿ ಹಾಗೂ ಸಾಹಿತಿ ರೇವಣ್ಣ ಬಳ್ಳಾರಿ ಹೇಳಿದರು.
ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಚಿತ್ರದುರ್ಗದ ಪ್ರಾಚ್ಯವಸ್ತು ಸಂಶೋಧಕ ಡಾ.ವಿ.ರಾಜಶೇಖರಪ್ಪ ಉದ್ಘಾಟನೆ ನೆರವೇರಿಸಲಿದ್ದಾರೆ. ಹೊನ್ನಾಳಿಯ ನಿವೃತ್ತ ಉಪನ್ಯಾಸಕ ಯು.ಎನ್.ಸಂಗನಾಳಮಠ ಕೃತಿ ಲೋಕಾರ್ಪಣೆಗೊಳಿಸಲಿದ್ದಾರೆ. ನಿವೃತ್ತ ಇತಿಹಾಸ ಉಪನ್ಯಾಸಕ ಕೆ.ಸಿದ್ದಪ್ಪ ಅನಾವರಣ ಕೃತಿಯ ವಿಶ್ಲೇಷಣೆ ಮಾಡಲಿದ್ದಾರೆ. ಇದೇ ವೇಳೆ ಸಾಹಿತಿ ಜ್ಯೋತಿಲಕ್ಷ್ಮಿ ಗಾಂಧೀಜಿ ಹಾಗೂ ಶಾಸ್ತ್ರೀಜಿ ಕುರಿತು ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹನುಮಂತಾಪುರದ ರಾಜಣ್ಣ, ಬಸವರಾಜ್ ಟಿ ಬೆಳಘಟ್ಟ, ಸಿ.ಕೆ.ಗೀತಾ ಮತ್ತಿತರರು ಆಗಮಿಸಲಿದ್ದಾರೆ.ನಂತರ ಸನ್ಮಾನ ಹಾಗೂ ಕವಿಗೋಷ್ಟಿ ನಡೆಯಲಿದೆ ಎಂದರು.ಸುದ್ದಿಗೋಷ್ಟಿಯಲ್ಲಿ ಎಸ್.ಮಲ್ಲಿಕಾರ್ಜುನಪ್ಪ, ಎನ್.ಜಿ.ಶಿವಕುಮಾರ್, ಆರ್.ಬಸವರಾಜ್, ಎಸ್.ಹೆಚ್.ವಿನಯಕುಮಾರ್ ಇದ್ದರು.

Leave a Comment