ಅ. 13ರಂದು ರಾಷ್ಟ್ರಮಟ್ಟದ ಶ್ವಾನಗಳ ಸ್ವರ್ಧೆ

ಮೈಸೂರು.ಅ.10. ಕೆನೈನ್ ಕ್ಲಬ್ ಆಫ್ ಮೈಸೂರು ಇವರ ವತಿಯಿಂದ ಈ ತಿಂಗಳ 13ರಂದು ಕೆನೈನ್ ಕ್ಲಬ್ ಆಫ್ ಇಂಡಿಯಾದಿಂದ ಮಾನ್ಯತೆ ಪಡೆದ ಕ್ಲಬ್‍ನ ರಾಷ್ಟ್ರೀಯ ಮಟ್ಟದ ಶ್ವಾನ ಸ್ಪರ್ಧೆಯು ನಗರದ ಚಾಮುಂಡಿ ಹಾಲ್ ಸ್ಟೇಡಿಯಂನಲ್ಲಿ ನೆಡೆಯಲಿದೆ ಎಂದು ಕೆನೈನ್ ಕ್ಲಬ್ ಆಫ್ ಮೈಸೂರು ಇದರ ಅಧ್ಯಕ್ಷ ಬಿ.ಪಿ. ಮಂಜುನಾಥ್ ತಿಳಿಸಿದರು.
ಅವರು ಇಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡುತ್ತಾ ವಿಶ್ವದಲ್ಲಿಯೇ ಅತಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಭಾರತದ ದೊಡ್ಡ ಗಾತ್ರದ ಕೋರಿಯನ್ ದೋಸಾ ಮ್ಯಾಸ್ರಿಫ್, ಮತ್ತು ಲಯನ್ ಹೆಡ್ ಟಿಬೆಟಿಯನ್ ಟೆರಿಯಾ ಮ್ಯಾಸ್ರಿಫ್, 3 ಕೆ.ಜಿ ತೂಕದ ಮಿನಿ ಎಚ್ಚರ ಪಿಂಚರ ನಿಂದ ಹಿಡಿದು 100 ಕೆ.ಜಿ ತೂಕವಿರುವ ಸೆಂಟ್ ಬನ್ರಾಡ್ ಗ್ರೇಟ್ಡೆನ್, ಡಾಬರ್ ಮ್ಯಾನ್, ಜಿ.ಎಸ್.ಡಿ ಲ್ಯಾಬ್ರಡರ್, ಗೋಲ್ಡನ್ ರಿಟ್ರಿವರ್ ಮತ್ತು ಟಾಯಸ್ ಗ್ರೂಪ್ ಪಗ್, ಲ್ಯಾಸ್ ಆಫ್ ಸಾ, ಕಾಕರ್ಸ್ ಸ್ಪಾನಿಯಲ್ ಮತ್ತು ದೇಶೀಯ ತಳಿಗಳಾದ ಮುದೋಳ್ ಹಾಗೂ ಇನ್ನಿತರ ತಳಿಗಳ 350 ಕ್ಕೂ ಹೆಚ್ಚು ಶ್ವಾನಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿವೆ ಎಂದರು. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಶ್ವಾನಗಳ ಮಾಲೀಕರು 1,200/- ರೂ ಗಳನ್ನು ಪಾವತಿಸಿ ತಮ್ಮ ಶ್ವಾನಗಳ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ಹಾಗೂ ಶ್ವಾನ ಪ್ರದರ್ಶನ ವೀಕ್ಷಣೆಗೆ ತಲಾ 50/- ರೂ ಗಳ ಪ್ರವೇಶ ಶುಲ್ಕವನ್ನು ನಿಗದಿ ಪಡಿಸಲಾಗಿದೆ ಎಂದು ಮಂಜುನಾಥ್ ನುಡಿದರು.
ಅ. 10ರಂದು ಬೆಳಿಗ್ಗೆ 9.30 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಸ್ಪರ್ಧೆಯನ್ನು ಉದ್ಘಾಟಿಸುವರು. ಮುಖ್ಯ ಅತಿಧಿಗಳಾಗಿ ಮೇಯರ್ ಪುಷ್ಪಲತಾ ಜಗನ್ನಾಥ್, ಶಾಸಕರುಗಳಾದ ಎಲ್. ನಾಗೇಂದ್ರ, ಎಸ್.ಎ.ರಾಮದಾಸ್, ಹಾಗೂ ಇನ್ನಿತರ ಗಣ್ಯರು ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕ ವಾಸು ವಹಿಸುವರು. ಅದೇ ದಿನ ರಾತ್ರಿ 8 ಗಂಟೆಗೆ ಸ್ಪರ್ಧೆಯಲ್ಲಿ ವಿಜೇತವಾದ ಶ್ವಾನಗಳಿಗೆ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ನಗರ ಪೊಲೀಸ್ ಆಯುಕ್ತ ಡಾ|| ಕೆ.ಟಿ. ಬಾಲಕೃಷ್ಣ ಬಹುಮಾನಗಳನ್ನು ವಿತರಿಸುವರು. ಈ ಬಾರಿ ಬೆಸ್ಟ್ ಹ್ಯಾಂಡ್‍ಲರ್, ಜೂನಿಯರ್ ಹಾಂಡ್‍ಲರ್ ಸ್ಪರ್ಧೆಗಳಿಗೂ ಬಹುಮಾನ ಇರುತ್ತದೆ ಎಂದು ಮಂಜುನಾಥ್ ವಿವರ ನೀಡಿದರು.
ಇಂದಿನ ಸುದ್ಧಿಗೋಷ್ಠಿಯಲ್ಲಿ ಕ್ಲಬ್‍ನ ಕಾರ್ಯದರ್ಶಿ ಡಾ|| ಸಂಜೀವ ಮೂರ್ತಿ, ಖಜಾಂಚಿ ವಿನೋದ್ ಕುಮಾರ್, ಡಾ|| ಡಿ.ಟಿ ಜಯರಾಮಯ್ಯ ಹಾಗೂ ಡಾ|| ಅನಿಲ್ ಕುಮಾರ್ ಉಪಸ್ಥಿತರಿದ್ದರು.

Leave a Comment