ಅ 11ರಂದು ‘ಎಲ್ಲಿದೆ ಇಲ್ಲಿ ತನಕ’

ಬೆಂಗಳೂರು, ಸೆ 25 – ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್, ಚಂದನವನದ ಚೆಲುವೆ ಹರಿಪ್ರಿಯಾ ಲಿಪ್ ಲಾಕ್, ಕಿಸ್ಸಿಂಗ್ ದೃಶ್ಯಗಳ ಮೂಲಕ ಜಾಲತಾಣದಲ್ಲಿ ಪಡ್ಡೆಹುಡುಗರ ಎದೆಬಡಿತ ಹೆಚ್ಚಿಸಿರುವ ’ಎಲ್ಲಿದ್ದೆ ಇಲ್ಲಿತನಕ’ ಚಿತ್ರ ಮುಂದಿನ ತಿಂಗಳು ಅಕ್ಟೋಬರ್ 11ರಂದು ತೆರೆಗೆ ಬರಲಿದೆ
ಲೋಕೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸೃಜನ್ ಲೋಕೇಶ್ ನಿರ್ಮಿಸಿರುವ ಚಿತ್ರಕ್ಕೆ ಯು/ಎ ಪ್ರಮಾಣಪತ್ರ ದೊರಕಿದೆ. ತೇಜಸ್ವಿ ನಿರ್ದೇಶನವಿದ್ದು, ನಾಲ್ಕು ಹಾಡುಗಳಿಗೂ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.
ಗಣೇಶ್ ಮಲ್ಲಯ್ಯ ಸಂಕಲನ, ಥ್ರಿಲ್ಲರ್ ಮಂಜು, ವಿನೋದ್ ಸಾಹಸ ನಿರ್ದೇಶನ, ಮದನ್ – ಹರಿಣಿ, ಮುರಳಿ, ಕಲೈ ನೃತ್ಯ ನಿರ್ದೇಶನ ಹಾಗೂ ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಬೆಂಗಳೂರು, ಕಾಶ್ಮೀರ ಹಾಗೂ ಮಲೇಶಿಯಾದಲ್ಲಿ ಚಿತ್ರೀಕರಣ ನಡೆದಿದೆ.
ಸೃಜನ್ ಲೋಕೇಶ್, ಹರಿಪ್ರಿಯಾ. ಗಿರಿಜಾ ಲೋಕೇಶ್, ಸಾಧುಕೋಕಿಲ, ತಾರಾ, ಅವಿನಾಶ್, ತಬಲನಾಣಿ, ಯಶಸ್ ಸೂರ್ಯ, ರಾಧಿಕಾ ರಾವ್, ಗಿರಿ, ಎಂಎಸ್.ಉಮೇಶ್, ಸಿಹಿಕಹಿ ಚಂದ್ರು, ರಂಗ ವಿಶ್ವ ಮುಂತಾದವರು ‘ಎಲ್ಲಿದೆ ಇಲ್ಲಿ ತನಕ‘ ಚಿತ್ರದ ತಾರಾಬಳಗದಲ್ಲಿದ್ದಾರೆ.

Leave a Comment