ಅಸ್ಸಾಂನ ಐದು ಜಿಲ್ಲೆಗಳಲ್ಲಿ ಪ್ರವಾಹ, ರಕ್ಷಣಾ ಕಾರ್ಯಗಳು ಪ್ರಗತಿಯಲ್ಲಿ

ಗುವಾಹಟಿ, ಮೇ 25 -ಅಸ್ಸಾಂನಲ್ಲಿ ಭಾರೀ ಮಳೆಯಿಂದ ಈ ವರ್ಷದ ಮೊದಲ ಪ್ರವಾಹ ಉಂಟಾಗಿದ್ದು, ಐದು ಜಿಲ್ಲೆಗಳಲ್ಲಿ 30,000 ಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ.

ಲಖಿಂಪುರ, ಧೆಮಾಜಿ, ದಿಬ್ರುಗಢ, ದಾರಂಗ್ ಮತ್ತು ಗೋಲ್ಪಾರ ಜಿಲ್ಲೆಗಳಲ್ಲಿನ ಎಂಟು ಕಂದಾಯ ವಲಯಗಳಲ್ಲಿ ಪ್ರವಾಹ ಭಾರೀ ಪರಿಣಾಮ ಬೀರಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮೂಲಗಳು ತಿಳಿಸಿವೆ.
ರಾಜ್ಯದ ಎರಡು ಪ್ರಮುಖ ನದಿಗಳಾದ ಸೋನಿತ್‌ಪುರದ ಜಿಯಾ ಭರಾಲಿ ಮತ್ತು ಕಮರೂಪ್‍ನ ಪುತಿಮರಿ ಅಪಾಯದ ಮಟ್ಟಕ್ಕಿಂತ ಮೀರಿ ಹರಿಯುತ್ತಿವೆ. ಈವರೆಗೆ 30,701 ಜನರು ಪ್ರವಾಹದಿಂದ ಸಂಕಷ್ಟಕ್ಕೀಡಾಗಿದ್ದಾರೆ..

ಗೋಲ್ಪಾರ ಜಿಲ್ಲೆಯ 33 ಪರಿಹಾರ ಶಿಬಿರಗಳಿಗೆ ಒಟ್ಟಾರೆ 8941 ಜನರನ್ನು ಸ್ಥಳಾಂತರಿಸಲಾಗಿದೆ.
ಸ್ಥಳೀಯ ಆಡಳಿತದ ಜೊತೆಗೆ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿ ಪರಿಹಾರ ಮತ್ತು ರಕ್ಷಣಾ ಕಾರ್ಯಗಳಲ್ಲಿ ತೊಡಗಿದ್ದಾರೆ

Share

Leave a Comment