ಅಸ್ಕಿಹಾಳ : 8 ಕೋಟಿ ಕಾಮಗಾರಿಗೆ ಚಾಲನೆ

ರಾಯಚೂರು.ಜ.21- ನಗರದ ವಾರ್ಡ್ ನಂ.34 ರಲ್ಲಿ ಯಕ್ಲಾಸಪೂರು ಮತ್ತು ಅಸ್ಕಿಹಾಳ ಗ್ರಾಮ ಸಂಪರ್ಕ ಸೇರಿದಂತೆ ಉಳಿದ ಮೂರು ರಸ್ತೆಗಳ ಅಭಿವೃದ್ಧಿಯ 8 ಕೋಟಿ ಕಾಮಗಾರಿಗೆ ಶಾಸಕ ಡಾ.ಶಿವರಾಜ ಪಾಟೀಲ್ ಅವರು ಇಂದು ಚಾಲನೆ ನೀಡಿದರು.
ಯಕ್ಲಾಸಪೂರಿನಿಂದ ಅಸ್ಕಿಹಾಳ ವರೆಗಿನ ರಸ್ತೆಗೆ 4 ಕೋಟಿ ರೂ. ಸಿಸಿ ಕಾಮಗಾರಿಗೆ ಚಾಲನೆ ನೀಡಿದ ನಂತರ 2 ಕೋಟಿ ವೆಚ್ಚದ ಯಕ್ಲಾಸಪೂರಿನಿಂದ ಅರಬ್ ಮೊಹಲ್ಲಾಕ್ಕೆ ಹೋಗುವ ರಸ್ತೆ ಹಾಗೂ ಬಸವೇಶ್ವರ ನಗರದಿಂದ ಯಕ್ಲಾಸಪೂರಿಗೆ ಹೋಗುವ ರಸ್ತೆಗೆ 2 ಕೋಟಿ ರೂ. ಸೇರಿದಂತೆ ಒಟ್ಟು 8 ಕೋಟಿ ರೂ. ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಾರ್ಡ್ ನಗರಸಭೆ ಸದಸ್ಯರಾದ ತಿಮ್ಮಪ್ಪ ನಾಯಕ, ಮಂಚಾಲಿ ಭೀಮಯ್ಯ, ರವೀಂದ್ರ ಜಲ್ದಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Comment