ಅಸಮಾನತೆ ವಿರುದ್ದ ಜಾಗೃತಿ ಮೂಡಿಸಿದ ಕೀರ್ತಿ ಡಾ.ಅಂಬೇಡ್ಕರ್‍ರವರಿಗೆ ಸಲ್ಲುತ್ತದೆ

ದಾವಣಗೆರೆ ಡಿ.7;  ಭಾರತೀಯ ಸಮಾಜದಲ್ಲಿ ಅಸ್ತಿತ್ವದಲ್ಲಿದ್ದ ಅಸಮಾನತೆಯ ವಿರುದ್ಧ ಸಾಮಾಜಿಕ, ನೈತಿಕತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ ಕೀರ್ತಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯ ಡಾ. ಹೆಚ್. ವಿಶ್ವನಾಥ್ ತಿಳಿಸಿದರು.

ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವತಿಯಿಂದ  ಆಯೋಜಿಸಲಾಗಿದ್ದ “ಡಾ. ಬಿ.ಆರ್. ಅಂಬೇಡ್ಕರ್ ಪರಿನಿರ್ವಾಣ ಮತ್ತು ಸಂವಿಧಾನ ದಿನಾಚರಣೆ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಮಾಜದಲ್ಲಿ ಅಸಮಾನತೆ ತಾಂಡವವಾಡುತ್ತಿದ್ದ ಕಾಲಘಟ್ಟದಲ್ಲಿ ಅಂಧಕಾರವನ್ನು ಬಿಟ್ಟು ಸ್ವಾಭಿಮಾನದ ದಾರಿಯಲ್ಲಿ ನಡೆಯಿರಿ ಎಂದು ದಲಿತ ವರ್ಗದವರಿಗೆ ಧೈರ್ಯ ತುಂಬಿದವರು ಅಂಬೇಡ್ಕರ್. ತಮ್ಮ ಜೀವಿತ ಕಾಲಾವಧಿಯಲ್ಲಿ ಅವರು ಅನುಭವಿಸಿದ ನೋವು ದೀನ ದಲಿತರ ಪರವಾಗಿ ನಿಲ್ಲಲು ಎಡೆಮಾಡಿಕೊಟ್ಟಿತ್ತು. ಧ್ವನಿ ಇಲ್ಲದವರಿಗೆ ಧ್ವನಿಯಾಗಿ ನಿಂತರು. ಜಗತ್ತಿನಲ್ಲಿ ಅನೇಕ ಅಸಮಾನತೆಗಳ ನೈತಿಕತೆಯ ವಿರುದ್ಧ ವಿವಿಧ ಮಹನೀಯರು ಹೋರಾಟ ನಡೆಸಿದರು. ಆದರೆ ಸಾಮಾಜಿಕ ನೈತಿಕತೆಯ ಅಸಮಾನತೆಯ ಬಗ್ಗೆ ಮೊಟ್ಟ ಮೊದಲು ದನಿ ಎತ್ತಿದವರು ಡಾ.ಬಿ.ಆರ್. ಅಂಬೇಡ್ಕರ್ ಎಂದು ತಿಳಿಸಿದರು.

ಮಹಿಳೆಯರಿಗೂ ಪುರುಷನಷ್ಟೇ ಸಮಾನವಾದ ಹಕ್ಕು, ಸಮಾನತೆ ಹಾಗೂ ಸ್ವಾತಂತ್ರ್ಯ ಸಿಗಬೇಕೆಂದು ಮೊಟ್ಟ ಮೊದಲ ಬಾರಿಗೆ “ಹಿಂದೂ ಕೋಡ್ ಬಿಲ್”ನ್ನು ಜಾರಿಗೆ ತರಲು ಅವರು ಶ್ರಮಿಸಿದರು. ಅವರ ಅಂದಿನ ಪರಿಶ್ರಮದ ಫಲವೇ ಇಂದು ಮಹಿಳೆಯರೂ ಕೂಡ ಸಮಾಜದಲ್ಲಿ ಸಮಾನತೆಯನ್ನು ಸಾಧಿಸಲು ಸಾಧ್ಯವಾಗಿದೆ. ಆದ್ದರಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಅಂಬೇಡ್ಕರ್ ಅವರ ಹೋರಾಟದ ಹಾದಿಯ ಬಗೆಗಿನ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಪಿ. ಕಣ್ಣನ್ ಮಾತನಾಡಿ, ಭಾರತದ ಇತಿಹಾಸವನ್ನು ಪರಿಶೀಲಿಸಿದಾಗ ಪ್ರಪ್ರಥÀಮವಾಗಿ ಸಮಾನತೆ ಮತ್ತು ಮಹಿಳಾ ಸಬಲೀಕರಣಕ್ಕೆ ಬೆಂಬಲ ನೀಡಿದವರು ಡಾ.ಬಿ.ಆರ್. ಅಂಬೇಡ್ಕರ್. ಅಂದು ನಮ್ಮ ದೇಶದಲ್ಲಿ ಮಹಿಳೆಯರಿಗೆ ಯಾವುದೇ ಸಮಾನತೆ ಹಾಗೂ ಸ್ವಾತಂತ್ರ್ಯ ಇರಲಿಲ್ಲ. ಮಹಿಳೆಯರಿಗೆ ಶಿಕ್ಷÀಣ ವ್ಯವಸ್ಥೆಯು ಇರಲಿಲ್ಲ. ಅವರು ಕೇವಲ ನಾಲ್ಕು ಗೋಡೆಗೆ ಸೀಮಿತರಾಗಿದ್ದರು. ಮಹಿಳೆಯರಿಗೂ ಕೂಡ ನಮ್ಮ ಸಂವಿಧಾನದಲ್ಲಿ ಪುರುಷರಷ್ಟೇ ಸಮಾನತೆ, ಸ್ವಾತಂತ್ರ್ಯ ಹಾಗೂ ಶಿಕ್ಷÀಣದ ಹಕ್ಕು ಸಿಗಬೇಕೆಂದು ಹೋರಾಡಿದವರಲ್ಲಿ ಪ್ರಥಮರು ಎಂದು ತಿಳಿಸಿದರು.

ವಿದ್ಯಾರ್ಥಿಗಳು ಇಂದು ಕೇವಲ ಮನರಂಜನೆಯ ಕಡೆಗೆ ಹೆಚ್ಚಿನ ಒತ್ತನ್ನು ನೀಡುತ್ತಿದ್ದಾರೆ. ವಿದ್ಯಾರ್ಥಿಗಳು ಸಮಾಜಕ್ಕೆ ಗೌರವ ಕೊಡಬೇಕು. ಸಮಾಜವನ್ನು ಹೊರತುಪಡಿಸಿ ನಾವಿಲ್ಲ. ಸಮಾಜವನ್ನು ಮರೆತರೆ ಇಲ್ಲಿಯವರೆಗೆ ನಡೆದ ಅಸಮಾನತೆಯ ವಿರುದ್ಧದ ಹೋರಾಟಗಳಿಗೆ ಬೆಲೆ ಇರುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಸಮಾಜದ ಕಳಕಳಿಯನ್ನು ಬೆಳೆಸಿಕೊಂಡು ಜೀವನವನ್ನು ಅರಿತುಕೊಳ್ಳಬೇಕು. ಡಾ. ಬಿ.ಆರ್. ಅಂಬೇಡ್ಕರ್ ಅವರ ಹೋರಾಟದ ಹಾದಿಯನ್ನು ಮನಗಂಡು ಅವರಂತೆ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ಕುಲಸಚಿವ ಪ್ರೊ. ಗಂಗಾನಾಯಕ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಚಾಲಕ ಮತ್ತು ವಾಣ ಜ್ಯ ವಿಭಾಗದ ಮುಖ್ಯಸ್ಥ ಪ್ರೊ.ಪಿ.ಲಕ್ಷ್ಮಣ್ ಮತ್ತು ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಬಿ.ಎಸ್. ಪ್ರದೀಪ್ ಕಾರ್ಯಕ್ರಮದಲ್ಲಿ ಹಾಜರಿದ್ದರು.

Leave a Comment