ಅಶೋಕ್ ಪೂಜಾರಿ ಮನವೊಲಿಕೆ ಕೊನೆ ಯತ್ನ ವಿಫಲ

ಬೆಳಗಾವಿ : ಗೋಕಾಕ್ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಅಖಾಡ ರಂಗೇರಿದ್ದು, ಅಭ್ಯರ್ಥಿಗಳಿಗೆ ರಾಜಕೀಯ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಬಿಜೆಪಿಯಿಂದ ರಮೇಶ್ ಜಾರಕಿಹೊಳಿ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಬಂಡಾಯದ ಬಾವುಟ ಹಾರಿಸಿ ಜೆಡಿಎಸ್ ನಿಂದ ಚುನಾವಣಾ ಅಖಾಡಕ್ಕಿಳಿದಿರುವ ಅಶೋಕ್ ಪೂಜಾರಿ ಅವರ ಮನವೊಲಿಕೆ ಕಡೆಗೂ ವಿಫಲವಾಗಿದೆ.
ಬಿಜೆಪಿ ಸಂಸದ ಮಹಾಂತೇಶ ಕವಟಗಿಮಠ ಇಂದು ಅಶೋಕ್ ಪೂಜಾರಿ ಅವರ ನಿವಾಸಕ್ಕೆ ತೆರಳಿ ಅವರ ಮನವೊಲಿಕೆಗೆ ಕಸರತ್ತನ್ನೇ ನಡೆಸಿದರು. ಆದರೆ, ಅಶೋಕ್ ಪೂಜಾರಿ ಚುನಾವಣಾ ಅಖಾಡದಿಂದ ಹಿಂದೆ ಸರಿಯಲು ಒಪ್ಪಿಲ್ಲ. ಅಶೋಕ್ ಪೂಜಾರಿ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಮಹಾಂತೇಶ ಕವಟಗಿಮಠ, ತಾವು ಸಿಎಂ ಬಿ.ಎಸ್.ವೈ ಅವರ ಸೂಚನೆ ಮೇರೆಗೆ ಅಶೋಕ್ ಪೂಜಾರಿ ನಿವಾಸಕ್ಕೆ ಬಂದಿದ್ದೇ, ಅವರು ಮಾನಸಿಕವಾಗಿ ಬಿಜೆಪಿಯ ಜೊತೆಗೇ ಇದ್ದಾರೆ. ಆದರೆ, ಅಭಿಮಾನಿಗಳ ಒತ್ತಡದಿಂದ ನಿರ್ಧಾರಕ್ಕೆ ಬರಲಾಗಿಲ್ಲ ಎಂದು ತಿಳಿಸಿದರು…

Leave a Comment