ಅವಹೇಳನಕಾರಿ ಫೋಸ್ಟ್: ಕಾನೂನು ಕ್ರಮಕ್ಕೆ ಸಿ ಟಿ ರವಿ ಆಗ್ರಹ

ಬೆಂಗಳೂರು, ಮೇ, 28 – ಕಾಂಗ್ರೆಸ್ ಪಕ್ಷದ ವಾಟ್ಸಾಪ್ ಗ್ರೂಪ್ ಮೇಲೆ ಹಾಗೂ ಅವಹೇಳನಕಾರಿ ಫೋಸ್ಟ್ ಹಾಕಿ, ನನ್ನ ಹೆಸರಿಗೆ ಮಸಿ ಬಳಿಯಲು ಯತ್ನಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಗೃಹ ಸಚಿವರಿಗೆ ದೂರು ನೀಡುವುದಾಗಿ ಸಚಿವ ಸಿ. ಟಿ . ರವಿ ಹೇಳಿದ್ದಾರೆ.
ಪದೇ ಪದೇ ನನ್ನ ಹೆಸರು,ಫೋಟೋ ದುರ್ಬಳಕೆ ಮಾಡುತ್ತಿದ್ದಾರೆ. ಇದು ಬ್ಲಾಕ್ ಕಾಂಗ್ರೆಸ್ ನವರಿಂದಲೇ ಆಗುತ್ತಿರುವ ಪ್ರಮಾದ ಎಂದು ಅವರು ಆರೋಪಿಸಿದ್ದಾರೆ.

ಸಾರ್ವಜನಿಕವಾಗಿ ಸಭ್ಯತೆ ಇರಬೇಕು ನಾನು ಇದ್ದ ವಾಹನ ಅಪಘಾತ ಅದಾಗಲೇ ನಾನು ಪ್ರತಿಕ್ರಿಯೆ ಕೊಟ್ಟಿದ್ದೇನೆ ಆದರೂ .ಪದೆ ಪದೇ ನನ್ನ ಹೆಸರು,ಫೋಟೋ ದುರ್ಬಳಕೆ ಮಾಡುತ್ತಿದ್ದಾರೆ.ರಾಜಕೀಯ ಮಾಡುವುದು ಸಹಜ, ಬೇರೆ ಮಾತು ಆದರೆ ಟೀಕೆ ಕೆಟ್ಟ ಶಬ್ದ ಗಳಿಂದ ಟೀಕೆ ಮಾಡಬಾರದು ಯಾರಿಗೂ ಇದು ಶೋಭೆ ತರುವುದಿಲ್ಲ ಎಂದರು.
ಈ ಬಗ್ಗೆ ಕಾಂಗ್ರೆಸ್ ಪಕ್ಷದ ಮುಖಂಡರೇ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದ ಅವರು
ತಾವು ಸಹ ಗೃಹ ಸಚಿವರಿಗೆ ದೂರು ನೀಡುವುದಾಗಿ ಸಚಿವರು ಹೇಳಿದ್ದಾರೆ.

Share

Leave a Comment