ಅವರೆಕಾಳಿನಲ್ಲಿದೆ ಆರೋಗ್ಯ

ಅ ವರೆಕಾಳಿನ ಬಳಕೆ ಇತ್ತೀಚೆಗೆ ಕಡಿಮೆ ಎನಿಸಿದರೂ, ಅದರ ರುಚಿಯನ್ನು ಮಾತ್ರ ಮರೆಯಲು ಸಾಧ್ಯವೇ ಇಲ್ಲ. ತರಹೇವಾರಿ ತಿನಿಸುಗಳಿಗೆ ಅವರೆಕಾಳನ್ನು ಬಳಸಲಾಗುತ್ತದೆ.

ಪೌಷ್ಠಿಕಾಂಶ ಮತ್ತು ಆಂಟಿಆಕ್ಸಿಡೆಂಟ್ ಆಹಾರ: ಅವರೆಕಾಳಿನಲ್ಲಿ ಉತ್ತಮ ಪ್ರಮಾಣದ ಪೌಷ್ಠಿಕಾಂಶವಿದೆ. ಇದರಲ್ಲಿ ಕ್ಯಾಲರಿ ಪ್ರಮಾಣ ಕಡಿಮೆ, ಹಾಗೆ ಪ್ರೊಟೀನ್ ಪ್ರಮಾಣ ಹೆಚ್ಚಿಗೆ ಇರುವುದರಿಂದ ಉತ್ತಮ ಡಯೆಟ್ ಫುಡ್ ಎನ್ನಬಹುದು. ಅವರೆಕಾಳಿನಲ್ಲಿ ಫೈಬರ್ ಮತ್ತು ವಿಟಮಿನ್ ಅಂಶ ಸಮೃದ್ಧವಾಗಿದೆ. ಹಾಗಾಗಿ ಮಕ್ಕಳ ಬೆಳವಣಿಗೆಯಲ್ಲಿ ಈ ಕಾಳು ಸಹಕಾರಿ.

health-ivf2aಪ್ರೊಟೀನ್ಯುಕ್ತ ಆಹಾರ: ಪ್ರೋಟೀನ್ ಹೆಚ್ಚಾಗಿರುವ ಆಹಾರದಲ್ಲಿ ಅವರೆಕಾಳು ಕೂಡ ಒಂದು. ದೇಹದಲ್ಲಿ ಪ್ರೊಟೀನ್ ಪ್ರಮಾಣ ಹೆಚ್ಚಾದಾಗ ಕೆಲವು ಹಾರ್ಮೊನ್ಗಳು ಕೂಡ ಹೆಚ್ಚಾಗುತ್ತವೆ. ಇದು ಹಸಿವನ್ನು ನಿಯಂತ್ರಣದಲ್ಲಿಡುತ್ತದೆ. ಜೊತೆಗೆ ಜೀರ್ಣಕ್ರಿಯೆ ಸರಿಯಾಗಿ ನಡೆಯಲು ಸಹಾಯಮಾಡುತ್ತದೆ. ಜೊತೆಗೆ ಮಾಂಸಾಹಾರ ಸೇವನೆಯಿಂದ ಸಿಗುವ ಪ್ರೊಟೀನ್ ಪ್ರಮಾಣ ಕೂಡ ಅವರೆಕಾಳಿನಿಂದ ಸಿಗುತ್ತದೆ.

ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ: ಅವರೆಕಾಳಿನಲ್ಲಿ ಫೈಬರ್ ಅಂಶ ಹೆಚ್ಚಾಗಿರುವುದರಿಂದ ಇದು ಜೀರ್ಣಕ್ರಿಯೆಯನ್ನು ನಿದಾನಿಸುತ್ತದೆ. ಈ ಮೂಲಕ ಆಹಾರ ಸೇವನೆಯ ನಂತರ ತಕ್ಷಣ ಸಕ್ಕರೆ ಪ್ರಮಾಣ ರಕ್ತದಲ್ಲಿ ಹೆಚ್ಚುವುದನ್ನು ನಿಯಂತ್ರಿಸುತ್ತದೆ. ಹಾಗಾಗಿ ಟೈಪ್೨ ಡಯಾಬಿಟಿಸ್ ಇರುವವರಿಗೆ ಈ ಕಾಳು ಉತ್ತಮ ಆಹಾರ.

ಹೃದಯದ ಆರೋಗ್ಯವನ್ನು ಕಾಪಾಡುತ್ತದೆ: ಅವರೆಕಾಳಿನಲ್ಲಿ ಮಿನರ್ಲ್ಸ್ಗಳಾದ ಮ್ಯಾಗ್ನೇಶಿಯಂ, ಪೊಟ್ಯಾಶಿಯಂ ಹಾಗೆ ಕ್ಯಾಲ್ಶಿಯಂ ಅಂಶಗಳಿವೆ. ಇವು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಹಾಗೆ ಕೆಟ್ಟ ಕೊಲೆಸ್ಟ್ರಾಲ್ನ್ನು ಕಡಿಮೆ ಮಾಡಲೂ ಅವರೆಕಾಳು ಉತ್ತಮ.

Leave a Comment