ಅವರಾದಕರ್ ವರದಿ ಜಾರಿಗೆ ಆಗ್ರಹಿಸಿ ವೀಕಸೇ ಪ್ರತಿಭಟನೆ

 

ಕಲಬುರಗಿ,ಜೂ.29- ನೆನಗುದಿಗೆ ಬಿದ್ದಿರುವ ರಾಘವೇಂದ್ರ ಅವರಾದಕರ್ ವರದಿಯನ್ನು ಜಾರಿಗೆ ತರಬೇಕು ಹಾಗೂ ಕಲಂ 371(ಜೆ)ಅನ್ವಯ ಮೀಸಲಾತಿ ಸೌಲಭ್ಯದಡಿ ಪೊಲೀಸರಿಗೆ ಮುಂಬಡ್ತಿ ನೀಡಬೇಕು ಎಂಬ ಪ್ರಮುಖ ಬೇಡಿಕೆಗೆ ಒತ್ತಾಯಿಸಿ ವೀರ ಕನ್ನಡಿಗರ ಸೇನೆ ನೇತೃತ್ವದಲ್ಲಿಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.

ಹಿಂದುಳಿದ ಹೈಕ ಭಾಗಕ್ಕೆ ಆಗಿರುವ ಪ್ರದೇಶಿಕ ಅಸಮನಾತೆಗೆ ಸಮಾಜಿಕ ನ್ಯಾಯ ಒದಗಿಸುವ ಉದ್ದೇಶದಿಂದ ಈ ಭಾಗಕ್ಕೆ ಸಂವಿಧಾನತಾತ್ಮಕ ಕಲಂ 371(ಜೆ) ತಿದ್ದುಪಡಿಯ ಸೌಲಭ್ಯ ನೀಡಲಾಗಿದ್ದರೂ ಕೂಡ ಇದರ ಸಮರ್ಪಕ ಅನುಷ್ಠಾನ ಅಗದೇ ಇರುವುದಕ್ಕೆ ವೀಕಸೇ ರಾಜ್ಯಾಧ್ಯಕ್ಷ ಅಮೃತ ಸಿ.ಪಾಟೀಲ ಸಿರನೂರ ಅವರು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಕೂಡಲೇ ಅವರಾದಕರ್ ವರದಿಯನ್ನ ಜಾರಿಗೆ ತರಬೇಕು ಹಾಗೂ ಕಲಂ.371(ಜೆ) ರಡಿ ನೀಡಬೇಕಾದ ಮುಂಬಡ್ತಿಯನ್ನು ಪೊಲೀಸ ಇಲಾಖೆಗೆ ವಿಸ್ತರಿಸಬೇಕು ಎಂಬ ಬೇಡಿಕೆಯ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಸಹಾಯ ಅಧಿಕಾರಿಯ ಮುಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.

ಪ್ರತಿಭಟನಾ ಪ್ರದರ್ಶನದಲ್ಲಿ ರವಿ ಒಂಟಿ, ಭರತ ಭೂಷಣ, ರಿಷಿ ವಾಡೇಕರ, ಅರುಣಕುಮಾರ, ಹಣಮಂತ ಬಜಂತ್ರಿ, ತಿಪ್ಪಣ್ಣ ಪವಾರ, ಅವಿನಾಶ ಮುಲಗೆ, ಕಿರಣಕುಮಾರ, ವೀರಣ್ಣ ಸ್ವಾದಿ, ಭೀಮಾಶಂಕರ ಸೇರಿದಂತೆ ಹಲವರು ಭಾಗವಹಿಸಿದ್ದರು..

Leave a Comment