ಅವನೇ ಶ್ರೀಮನ್ನಾರಾಯಣಕ್ಕೆ ಉತ್ತಮ ಪ್ರತಿಕ್ರಿಯೆ: ಜ.17ಕ್ಕೆ ಬಾಲಿವುಡ್‌ನಲ್ಲೂ ಬಿಡುಗಡೆ – ರಕ್ಷಿತ್ ಶೆಟ್ಟಿ

 

ಹುಬ್ಬಳ್ಳಿ: ಅವನೇ ಶ್ರೀಮನ್ನಾರಯಣ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ ಎಂದು ಚಿತ್ರದ ನಾಯಕ ನಟ ರಕ್ಷಿತ್ ಶೆಟ್ಟಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳು, ತೆಲಗು, ಮಲಿಯಾಳಿ ಭಾಷೆಯಲ್ಲಿ ಚಿತ್ರ ಬಿಡುಗಡೆ ಆಗಿದೆ. ತಮಿಳಿನಲ್ಲಿ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಜ. ೧೭ ಕ್ಕೆ ಹಿಂದಿ ಭಾಷೆಯಲ್ಲಿಯೂ ಬಿಡುಗಡೆ ಆಗಲಿದೆ. ಚಿತ್ರಕ್ಕೆ ೪೦ ಕೋಟಿ ರೂ. ಖರ್ಚಾಗಿದೆ. ರಿಟರ್ನ್ ಸಹ ಉತ್ತಮವಾಗಿದೆ ಎಂದರು.

ans1

ನಿರ್ದೇಶಕ ಸಚಿನ್ ಮಾತನಾಡಿ, ಈ ಚಿತ್ರ ಮೊದಲು ೩.೦೬ ತಾಸಿನ ಅವಧಿಯದ್ದಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ ಉದ್ದವಾಗಿದೆಯೆಂಬ ಅಭಿಪ್ರಾಯ ಕೇಳಿಬಂದಿದ್ದರಿಂದ ೧೫ ನಿಮಿಷಗಳ ಅವಧಿಗೆ ಕತ್ತರಿ ಹಾಕಲಾಯಿತು. ಆದರೆ ಚಿತ್ರ ಕತ್ತರಿ ಹಾಕದೇ‌ ಇದ್ದರೂ ಚೆನ್ನಾಗಿತ್ತು. ಚಿತ್ರವನ್ನು ೨-೩ ಬಾರಿ ನೋಡಿದರೆ ಸರಿಯಾಗಿ ಅರ್ಥವಾಗುತ್ತದೆ. ಟಿವಿಯಲ್ಲಿ ಚಿತ್ರ ಬಿಡುಗಡೆ ಮಾಡುವಾಗ ಚಿತ್ರ ಕಟ್ ಮಾಡದೇ ಬಿಡುಗಡೆ ಮಾಡಲಾಗುವುದು ಎಂದರು.

 

Leave a Comment