ಅವಡಿ ಘಟಕಕ್ಕೆ ೪೬೪ ಭೀಷ್ಮ ಟ್ಯಾಂಕರ್ ತಯಾರಿಕೆ ಅನುಮತಿ

ಚೆನ್ನೈ.ನ.೮. ಅವಡಿಯಲ್ಲಿರುವ ಬೃಹತ್ ಯುದ್ದ ವಾಹನಗಳ ತಯಾರಿಕಾ ಘಟಕದಲ್ಲಿ ೨೦ ಸಾವಿರ ಕೋಟಿ ಮೌಲ್ಯದ ೪೬೪ ಭೀಷ್ಮ ಯುದ್ದ ಟ್ಯಾಂಕರ್‌ಗಳ ನಿರ್ಮಾಣಕ್ಕೆ ರಕ್ಷಣಾ ಸಚಿವಾಲಯ ಆದೇಶ ನೀಡಿದೆ.
ಭೀಷ್ಮ ಯುದ್ದ ತ್ಯಾಂಕರ್ ನಿರ್ಮಾಣಕ್ಕೆ ನೌಕಾಪಡೆಗೆ ಅನುಮತಿ ನೀಡಿರುವ ರಕ್ಷಣಾ ಸಚಿವಾಲಯ, ಟ್ಯಾಂಕರ್‌ಗಳನ್ನು ಚನ್ನೈನ ಬೃಹತ್ ವಾಹನ ತಯಾರಿಕಾ ಘಟಕ ಅವಡಿಯಲ್ಲಿ ತಯಾರಿಸಲು ಅದೇಶ ನೀಡಿದೆ. ಈ ಕಾರ್ಖಾನೆ ಉತ್ಪಾದನಾ ಸಾಮರ್ಥ್ಯ ವಾರ್ಷಿಕ ೧೨೦ ಟ್ಯಾಂಕರ್ ನಿರ್ಮಾಣ ಎನ್ನಲಾಗಿದ್ದು,ಸೇನೆಗೆ ಅಗತ್ಯವಿರುವ ಒಟ್ಟು ೪೬೪ ಯುದ್ದಟ್ಯಾಂಕರ್‌ಗಳ ನಿರ್ಮಾಣಕ್ಕೆ ೪ ವರ್ಷಗಳು ಬೇಕಾಗಲಿದೆ.
೪೬೪ ರಷ್ಯನ್ ಮೂಲದ ಟಿ-೯೦ ಮುಖ್ಯ ಯುದ್ದ ಟ್ಯಾಂಕರ್‌ಗಳ ಸಂಗ್ರಹವನ್ನು ಸೇನೆ ಕೈಬಿಟ್ಟ ೬ ತಿಂಗಳ ನಂತರ ರಕ್ಷಣಾ ಸಚಿವಾಲಯ ೨೦ ಸಾವಿರ ಕೋಟಿ ಮೌಲ್ಯದ ಯುದ್ದ ಟ್ಯಾಂಕರ್ ನಿರ್ಮಾಣಕ್ಕೆ ಅವಡಿ ಕೈಗಾರಿಕೆಯಲ್ಲಿ ನಿರ್ಮಾಣ ಮಾಡಲು ಆದೇಶ ನೀಡಿದೆ. ಕಳೆದ ಏಪ್ರಿಲ್‌ನಲ್ಲಿ ಈ ಆದೇಶಕ್ಕೆ ರಕ್ಷಣಾ ಸಚಿವಾಲಯ ತೀರ್ಮಾನಿಸಿದ ವೇಳೆ ಯುದ್ದ ಟ್ಯಾಂಕರ್‌ಗಳ ನಿರ್ಮಾಣ ವೆಚ್ಚ ೧೩.೦೦೦ ಸಾವಿರ ಕೋಟಿ ಎಂದು ಅಂದಾಜಿಸಲಾಗಿತ್ತು, ಅದರೆ ಸೇನಾ ಮಂಡಳಿ ಮೂಲಗಳ ಪ್ರಕಾರ ಸದ್ಯ ಟ್ಯಾಂಕರ್ ನಿರ್ಮಾಣ ವೆಚ್ಚ ೨೦.ಸಾವರಿ ಕೋಟಿ ಎಂದು ದೃಡಪಡಿಸಲಾಗಿದೆ.
ಪಾಕಿಸ್ತಾನ-ಭಾರತ ಗಡಿಯ ಪಶ್ಚ್ಚಿಮ ವಲಯದ ಉದ್ದಕ್ಕೂ,ಸಶಸ್ತ್ರ ಪಡೆಗಳ ಸಾಮರ್ಥ ಹೆಚ್ಚಳಕ್ಕೆ ಸೈನ್ಯ ಬಳಸುತ್ತಿರುವ ಹೊಸ ಭೀಷ್ಮ ಯುದ್ದ ಟ್ಯಾಂಕರ್‌ಗಳ ನಿರ್ಧಾರಕ್ಕೆ ಸರ್ಕಾರ ಕ್ರಮ ಕೈಗೊಂಡಿದ್ದು,ಇಂತಹ ೩೦೦ಕ್ಕೂ ಅಧಿಕ ಟ್ಯಾಂಕರ್‌ಗಳನ್ನು ಪಡೆದುಕೊಳ್ಳಲು ಪಾಕಿಸ್ತಾನ ರಷ್ಯಾದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಅವಡಿ ಕೈಗಾರಿಕೆ ಪರಿಚಯ
ಅವಡಿ ಕಾರ್ಖಾನೆ ೧೯೯೧ರಿಂದಲೂ ಬಾರಿ ಯುದ್ದ ಭೂಮಿ ಉಪಕರಣಗಳನ್ನು ತಯಾರಿಸುತ್ತಿದೆ.ಇದರೊಂದಿಗೆ ಸೇನೆಯಲ್ಲಿ ಬಳಸುತ್ತಿರುವ ಟಿ-೭೨ ಗಳನ್ನು ಸಹ ತಯಾರಿಸುತ್ತಿದೆ.ಟ-೯೦ ಎಟಿಬಿ ೧೯೯೨ ರಲ್ಲಿ ರಷ್ಯಾ ಸೇನೆ ಬಳಸುತ್ತಿತ್ತು,೨೦೦೧ ರಲ್ಲಿ ಭಾರತ ಸುಮಾರು ೩೦೦ ಟ್ಯಾಂಕರ್‌ಗಳನ್ನು ಸರಬರಾಜು ಮಾಡುವ ಒಪ್ಪಂದಕ್ಕೆ ಸಹಿ ಹಾಕಿತ್ತು. ಅವುಗಳಲ್ಲಿ ೧೨೦ ಟ್ಯಾಂಕರ್‌ಗಳು ಸಂಪೂರ್ಣ ರಷ್ಯಾದಲ್ಲಿ ನಿರ್ಮಾಣಗೊಂಡಿದ್ದು, ಉಳಿದ ಟ್ಯಾಂಕರ್‌ಗಳನ್ನು ಭಾರತದಲ್ಲಿ ಜೋಡಿಸಲಾಗಿತ್ತು.
ಟಿ-೯೦ ಗಳು ರಾತ್ರಿ ದೃಷ್ಟಿ ಸಾಧನಗಳು ಮತ್ತು ಥರ್ಮಲ್ ಇಮೇಜಿಂಗ್ ವ್ಯವಸ್ಥೆಯನ್ನು ಹೊಂದಿವೆ ಚಲನಶೀಲತೆ ಮತ್ತು ಮೊದಲ-ಹಿಟ್ ಸಾಮರ್ಥ್ಯಗಳಿಗೆ ಹೆಸರುವಾಸಿಯಾಗಿರುವ ಭೀಷ್ಮ ಟ್ಯಾಂಕರ್‌ಗಳನ್ನು ಉತ್ತಮ ರಕ್ಷಣಾ ಕವಚ ವ್ಯವಸ್ಥೆಯೊಂದಿಗೆ ಸ್ಪೋಟಗಳಿಂದ ಏನು ಹಾನಿಯಾಗದಂತೆ ರೂಪಿಸಲಾಗಿದೆ.೪೬.೫ ಟನ್ ಬಾರದ ಈ ಟ್ಯಾಂಕ್ ೧ಸಾವಿರ ಹೆಚ್‌ಪಿ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ೧೨೫ ಎಂಎಂ ನಯವಾದ ಬೋರ್‌ಗನ್ ಹೊಂದಿದ್ದು,,ಲೇಸರ್-ಗೈಡೆಡ್ ಕ್ಷಿಪಣಿಗಳು ಸೇರಿದಂತೆ ಎಲ್ಲಾ ರೀತಿಯ ಮದ್ದುಗುಂಡುಗಳನ್ನು ೫ ಕಿ.ಮಿ ವರೆಗೆ ಹಾರಿಸುವ ಸಾಮಥ್ಯ ಹೊಂದಿದೆ.

Leave a Comment