ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ – ಮುನವಳ್ಳಿ

ಹುಬ್ಬಳ್ಳಿ, ಫೆ.16- ಯಾವುದೇ ವ್ಯಕ್ತಿಗೆ ಒಂದಿಲ್ಲಾ ಒಂದು ಜೀವನದಲ್ಲಿ ಅವಕಾಶಗಳು ಇದ್ದೆ ಇರುತ್ತವೆ ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕಷ್ಟೇ ಎಂದು ಕೆಎಲ್ಇ ಆಡಳಿತ ಮಂಡಳಿ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಹೇಳಿದರು.
ಇಲ್ಲಿನ ಸವಾಯಿ ಗಂಧರ್ವ ಹಾಲ್ ನಲ್ಲಿ ಸುಮಧುರ ಎಂಟರ್ಟೇನರ್ಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ಮತ್ತು ಹಿಂದಿ ಯುಗಳಗೀತೆಗಳ ಸಂಗೀತ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅವಕಾಶ ಸಿಕ್ಕಾಗ ಪ್ರಮಾಣಿಕವಾಗಿ ಉಪಯೋಗಿಸಿಕೊಂಡು ಗುರಿ ಮುಟ್ಟುವುದೇ ಸಾಧನೆ.‌ ಆ ದೃಷ್ಟಿಯಿಂದ ದಾರಿಯಲ್ಲಿ ಎಷ್ಟೇ ಕಷ್ಟಗಳು ಬಂದರು ಅವುಗಳನ್ನು ಎದುರಿಸಬೇಕು. ಖುಷಿ ಎಂಬುದು ಕೇವಲ ಹಣ ಸಂಪಾದನೆಯಿಂದ ಬರುವುದಿಲ್ಲ. ಬದಲಾಗಿ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಮೂಲಕ ಖುಷಿಯ ಜೊತೆಗೆ ಸಮಾಧಾನವನ್ನು ತರುವುದು. ಆ ದೃಷ್ಟಿಯಲ್ಲಿ ಸುಮಧುರ ಎಂಟರ್ಟೇನರ್ಸ್ ಹವ್ಯಾಸಿ ಗಾಯಕರಿಗೆ ಉತ್ತಮ ವೇದಿಕೆ ಕಲ್ಪಿಸಿದ್ದು, ಈ ಮೂಲಕ ಹವ್ಯಾಸಿ ಗಾಯಕರನ್ನು ಇನ್ನಷ್ಟು ಪ್ರೋತ್ಸಾಹಿಸಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದರು.
ಮಜೇಥಿಯಾ ಫೌಂಡೇಶನ್ ನ ನಂದಿನಿ ಮಜೇಥಿಯಾ ಮಾತನಾಡಿ, ಸುಮಧುರ ಎಂಟರ್ಟೇನರ್ಸ್ ಅವಳಿನಗರದ ಹವ್ಯಾಸಿ ಗಾಯಕರಿಗೆ ವೇದಿಕೆ ಕಲ್ಪಿಸಿ ಸಾಮಾನ್ಯ ಗಾಯಕರನ್ನು ಗಾಯನ ಮಾಡುವುದರಲ್ಲಿ  ಮಾಸ್ಟರ್ ಗಳಾಗಲು ಸಹಾಯಕ ಆಗಿದೆ. ಇನ್ನೂ ವಿವಿಧ ಚಲನಚಿತ್ರಗಳ ಹಿಂದಿ ಮತ್ತು ಕನ್ನಡದ ಹಳೆ ಹಾಗೂ ಹೊಸ  ಹಾಡುಗಳ ಮೂಲಕ ಅವಳಿನಗರದ ಜನತೆಯನ್ನು ಮನರಂಜನೆಯ ಜೊತೆಗೆ ಮುಂದಿನ ಪೀಳಿಗೆಗೆ ಸಂಗೀತ ಬಗ್ಗೆ ತಮ್ಮಷ್ಟ ಒಲವು ತರಲಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಮಹೇಂದ್ರ ಲದ್ದಡ, ಪಂಜುರ್ಲಿ ಗ್ರೂಪ್ ಆಫ್ ಹೊಟೆಲ್ಸ್ ಸಂಸ್ಥಾಪಕ ಅಧ್ಯಕ್ಷ ರಾಜೇಂದ್ರ ಶೆಟ್ಟಿ, ಬೆಂಗಳೂರಿನ ಸೌಂಡ್ ಆಫ್ ಮ್ಯುಜಿಕ್ ಸಂಸ್ಥಾಪಕ ಗುರುರಾಜ ಕೆ, ಕಿಮ್ಸ್ ಮೆಡಿಕಲ್ ಸುಪ್ರಿಟೆಂಡೆಂಟ್ ಡಾ.ಅರುಣಕುಮಾರ,ಸಮಾಜ ಸೇವಕ ಸಂಬಾಜಿ ಕಲಾಲ ಪತ್ರಕರ್ತ ಗುರುರಾಜ ಹೂಗಾರ ಕಿಮ್ಸನ ರಮೇಶ ಗುತ್ತಿ ಸಂಚಾಲಕರಾದ ಪ್ರೇಮಾ ಹೂಗಾರ ಸುನಿಲ್ ಪತ್ರಿ ಮುಂತಾದವರು ಇದ್ದರು.
@12bc = ಪುಸ್ತಕ ಲೋಕಾರ್ಪಣೆ
ಗಾಯಕಿ ಮಂಜುಳಾ ಗುರುರಾಜ ಅವರ ಗಂಡ ಗುರುರಾಜ ಅವರ 600 ಹಾಡುಗಳನ್ನು ಒಳಗೊಂಡಿರುವ ಮಧುರ ಮಧುರವೀ ಮಂಜುಳಗಾನ ಪುಸ್ತಕದ 2 ನೇ ಸಂಚಿಕೆಯನ್ನು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಮಹೇಂದ್ರ ಲದ್ದಡ, ಪಂಜುರ್ಲಿ ಗ್ರೂಪ್ ಆಫ್ ಹೊಟೆಲ್ಸ್ ನ ಸಂಸ್ಥಾಪಕ ರಾಜೇಂದ್ರ ಶೆಟ್ಟಿ ಲೋಕಾರ್ಪಣೆ ಮಾಡಿದರು.
@12bc = 28 ಜೋಡಿಗಳಿಂದ ಯುಗಳಗೀತೆಗಳು
ಕನ್ನಡ ಮತ್ತು ಹಿಂದಿ ಯುಗಳಗೀತೆ ಹಾರ್ಟ್ ಬೀಟ್ಸ್ ಕಾರ್ಯಕ್ರಮದಲ್ಲಿ ಸುಮಾರು 28 ಜೋಡಿಗಳು ಕನ್ನಡ ಮತ್ತು ಹಿಂದಿ ಚಲನಚಿತ್ರಗಳ ಹಾಡುಗಳನ್ನು ಹಾಡಿ ನೆರೆದಿದ್ದ ನೂರಾರು ಜನರನ್ನು ಮನರಂಜಿಸಿದ್ದರು ಎಂದು ಸಂಚಾಲಕಿ ಪ್ರೇಮಾ ಹೂಗಾರ ತಿಳಿಸಿದರು.
ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಸದುದ್ದೇಶದಿಂದ ಈ  ಸಂಗೀತ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅದೆಷ್ಟೋ ಕಲಾ ಪ್ರತಿಭೆಗಳಿಗೆ ಸೂಕ್ತ ವೇದಿಕೆ ದೊರೆಯದೇ ಕಲೆಗಳು ಮರೆಯಲ್ಲಿ ಉಳಿದು ಹೋಗುತ್ತೀವೆ. ಇಂತಹ ಪ್ರತಿಭೆಗಳನ್ನು ಹುಡುಕಿ ಪ್ರೋತ್ಸಾಹಿಸುವ ಉದ್ದೇಶವನ್ನು ಹೊಂದಿದೆ. ಇನ್ನು ಸಂಗೀತ ಸಂಜೆ ಕಾರ್ಯಕ್ರಮಕ್ಕೆ ಭಾಗವಹಿಸಲು ಯಾವುದೇ ವಯಸ್ಸಿನ ನಿರ್ಬಂಧ ಇರುವುದಿಲ್ಲ. ಯಾವುದೇ ವಯಸ್ಸಿನ ಕಲಾವಿದರು ಕೂಡ ಇದರಲ್ಲಿ ಭಾಗವಹಿಸಿ ತಮ್ಮ ಕಲೆಯನ್ನು ಪ್ರಸ್ತುತ ಪಡೆಸಲು ಇದು ಸೂಕ್ತ ವೇದಿಕೆಯಾಗಿದ್ದು, ಸುಮಾರು 28  ಜೋಡಿಗಳು ಇದ್ದರು. ಕಲೆಯನ್ನು ಬೇರಿನಿಂದಲೇ ಬೆಳೆಸಿ ಎಂದರು.

Leave a Comment