ಅಳ್ನಾವರ ಅರ್ಬನ್ ಬ್ಯಾಂಕ್ ರೂ. 27.63 ಲಕ್ಷ ಲಾಭ

ಅಳ್ನಾವರ,ಸೆ.3- ಇಂದಿನ ಪೈಪೋಟಿ ಯುಗದಲ್ಲಿ ಸ್ಥಳೀಯ ದಿ. ಅಳ್ನಾವರ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ ಮುಖ್ಯ ಕಚೇರಿ ಹಾಗೂ ಶಾಖಾ ಕಚೇರಿಯಲ್ಲಿ ಉತ್ತಮ ವ್ಯವಹಾರ ನಡೆದು ಸದರಿ ವರ್ಷದಲ್ಲಿ ರೂ. 27. 63 ಲಕ್ಷ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಶಿವಾನಂದ ಹೊಸಕೇರಿ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಅವರು ಮಾತನಾಡಿ, ರಿಜರ್ವ ಬ್ಯಾಂಕಿನ ನಿರ್ಧೆಶನದಂತೆ ಬ್ಯಾಂಕು ಸದಾ ತನ್ನ ವ್ಯವಹಾರವನ್ನು ನಡೆಸುತ್ತಿದೆ. ಬ್ಯಾಂಕಿನ ಸದಸ್ಯರ ಹಾಗೂ ಗ್ರಾಹಕರ ಸಹಕಾರದ ಬಲವಾಗಿ ಬ್ಯಾಂಕು ಉನ್ನತಿಯತ್ತ ಸಾಗುತ್ತಿದೆ. ಇದರ 61 ನೇ ವಾರ್ಷಿಕ ಮಹಾಸಭೆಯನ್ನು ಶನಿವಾರ ದಿ. 8 ರಂದು ಸ್ಥಳೀಯ ಉಮಾ ಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಕರೆಯಲಾಗಿದೆ ಎಂದು ತಿಳಿಸಿದರು.
ಈ ಸಭೆಯಲ್ಲಿ ವಾರ್ಷಿಕ ವರದಿ ಪರಿಗಣನೆ, ಲೆಕ್ಕ ಪರಿಶೋಧನಾ ವರದಿ ಮಂಡನೆ, ಲಾಭಾಂಶ ಪ್ರಮಾಣದ ಅನುಮೋದನೆ, ಮುಂದಿನ ವರ್ಷದ ಕಾರ್ಯ ಚಟುವಟಿಕೆಗಳ ವಿವರ, ನಿರ್ಧಿಷ್ಟ ನಿಧಿಗಳ ನಿರ್ಮಾಣ ಸೇರಿದಂತೆ ಒಟ್ಟು 20 ವಿಷಯಗಳ ಚರ್ಚೆ ನಡೆಯಲಿದೆ ಎಂದರು.
ಬ್ಯಾಂಕು ನಡೆದು ಬಂದ ಹಾದಿಯನ್ನು ಏಳೆ ಏಳೆಯಾಗಿ ಬಿಡಿಸಿಟ್ಟ ಅವರು, ಪ್ರಸಕ್ತ ವರ್ಷದಲ್ಲಿ ಯೋಜನಾಬದ್ದ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಸತತ ಪ್ರಯತ್ನದ ಫಲವಾಗಿ ಬ್ಯಾಂಕಿನ ಇತಿಹಾಸದಲ್ಲಿ ಪ್ರಥಮ ಬಾರಿ ಅನುತ್ಪಾಧಕ ಸಾಲದ ಪ್ರಮಾಣ ಶೂನ್ಯಕ್ಕೆ ತಲುಪಿದೆ . ಬ್ಯಾಂಕಿಂಗ್ ಕ್ಷೇತ್ರದ ಹೊಸ ತಂತ್ರಜ್ಷಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಗ್ರಾಹಕರಿಗೆ ನಮ್ಮ ಬ್ಯಾಂಕಿನಿಂದ ಆರ್‍ಟಿಜಿಎಸ್ , ಎನ್. ಎಫ್ ಟಿ , ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಸೌಲಭ್ಯ ಹಾಗೂ ಇ ಸ್ಟ್ಯಾಂಪಿಂಗ್ ವ್ಯವಸ್ಥೆ ಒದಗಿಸಲಾಗಿದೆ ಎಂದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಭಾರತೀಯ ರಿಜರ್ವ ಬ್ಯಾಂಕ್ ಕೂಡಾ ಬ್ಯಾಂಕಿಂಗ ಕ್ಷೇತ್ರದಲ್ಲಿ ಅದರಲ್ಲೂ ವಿಶೇಷವಾಗಿ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಾಣಿಜ್ಯ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಅನ್ವಯಿಸುವ ಆನೇಕ ನಿಯಮ ಹಾಗೂ ನಿರ್ಧೆಶನ ಜಾರಿ ಮಾಡಿ ನಿಯಂತ್ರಣ ಹೇರುತ್ತಿದೆ ಜೊತೆಗೆ ವರಮಾನ ತೆರಿಗೆ ಇಲಾಖೆಯವರು ಈ ಹಿಂದೆ ಸದಸ್ಯರ ಠೇವಣಿಗೆ ನೀಡುವ ಟಿ ಡಿ ಎಸ್ ವಿನಾಯತಿಯನ್ನು ಹಿಂಪಡೆಯಲಾಗಿದೆ. ಈ ಎಲ್ಲ ಸವಾಲುಗಳ್ನು ಮೆಟ್ಟಿ ನಿಂತು ಆರ್ಥಿಕ ಸಮತೋಲನವನ್ನು ಬ್ಯಾಂಕು ಗಟ್ಟಿಯಾಗಿ ಎದುರಿಸುವ ಸನ್ನಿವೇಶ ಪ್ರಗತಿಯ ಸಂಕೇತವಾಗಿದೆ ಎಂದರು
4191 ಸದಸ್ಯರನ್ನು ಹೊಂದಿರುವ ಬ್ಯಾಂಕು ರೂ 2.09 ಕೋಟಿ ಶೇರು ಬಂಡವಾಳ ಹೊಂದಿದೆ .ಕಳೆದ ಸಾಲಿನ ಕೊನೆಯಲ್ಲಿ ಬ್ಯಾಂಕಿನ ಠೇವು ರೂ 47.10 ಕೋಟಿ ಇತ್ತು, ನಮ್ಮ ಬ್ಯಾಂಕಿನ್ ಮೇಲೆ ಠೇವಣಿದಾರರು ಇಟ್ಟ ವಿಸ್ವಾಸದ ಪ್ರತೀಕವಾಗಿ ವರದಿ ವರ್ಷದ ಕೊನೆಯಲ್ಲಿ ರೂ 49.77 ಕೋಟಿ ಆಗಿದೆ. ಬ್ಯಾಂಕು ರೂ 56.96 ಕೋಟಿ ದುಡಿಯುವ ಬಂಡವಾಳ ಹಾಗೂ ವಾರ್ಷಿಕ ವಹಿವಾಟು ರೂ 289.22 ಕೋಟಿ ಆಗಿದೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ರೂಪೇಶ ಎಂ. ಗುಂಡಕಲ್, ನಿರ್ಧೇಶಕರುಗಳಾದ ನಾರಾಯಣ ಎನ್. ಗಡಕರ, ಬಸವರಾಜ ತೇಗೂರ, ಎಸ್.ಜಿ.ಜಕಾತಿ, ಛಗನಲಾಲ ಪಟೇಲ, ಮಧು ಬಡಸ್ಕರ, ಡುಂಡಮ್ಮಕ್ಕಾ ತೇಗೂರ, ಸಂಧ್ಯಾ ಅಂಬಡಗಟ್ಟಿ, ಎ.ವಿ. ಉಡುಪಿ, ಸಿ.ಎಸ್. ಪದಕಿ, ಜಾವಿದ ಆರ್. ತೊಲಗಿ, ರಾಜು ಎ. ಅಷ್ಟೇಕರ, ಮಲ್ಲಪ್ಪ ಆರ್.ಗಾಣಿಗೇರ, ನಾಗರಾಜ ಹಂಜಗಿ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ.ಇ .ಬರೆಟ್ಟೋ ಇದ್ದರು.

Leave a Comment